ದೇಗುಲಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು…ಸತ್ಯ ಹೇಳಿದರೆ ಜನ ಕಾಂತಾರ ಖ್ಯಾತಿಯ ರಿಷಬ್ ಗೆ ಹೊಡೆಯುತ್ತಿದ್ದರು…ದೈವ ನರ್ತಕರಿಗೆ ಮಾಶಾಸನ ನೀಡುವುದು ಸರಿಯಲ್ಲ… : ಬಿ ಟಿ ಲಲಿತಾ ನಾಯಕ್

ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಬಿ ಟಿ ಲಲಿತಾ ನಾಯಕ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಕಾಣದ ದೇವರಿಗೆ ಮಂಗಳಾರತಿ ಮಾಡಿ, ಹೊಸ ಬಟ್ಟೆಯನ್ನು ತೊಡಿಸಿ ಅಲಂಕರಿಸುತ್ತೀರಾ..ಕೈ ತೊಳೆಯದೆ ಕಲ್ಮಶಗೊಂಡ ನೀರನ್ನು ಕೊಟ್ಟರೆ ತೀರ್ಥವೆಂದು ಕುಡಿಯುತ್ತೀರಾ..ಇವೆಲ್ಲ ಅವೈಜ್ಞಾನಿಕವಾದದ್ದು; ದೇಗುಲಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು. ಎಲ್ಲರ ಮನೆಯಲ್ಲಿ ಶುದ್ಧ ಕುಡಿಯುವ ನೀರಿರುತ್ತೆ ಅಲ್ವಾ? ಹಲವಾರು ಹೆಣಗಳಿಂದ ಕೂಡಿಕೊಂಡು ಹೊಲಸಾಗಿರುವ ಗಂಗೆಯಿಂದ ನೀರು ತಂದು ಗಂಗಾಜಲವೆಂದು ನಮ್ಮ ಮನೆಗೂ ನೀಡಿದ್ದರು. ನಾನು ಬೈದು ಕಳುಹಿಸಿದೆ’ ಎಂದಿದ್ದಾರೆ.

ಅಲ್ಲದೆ ಕಾಂತಾರ ಚಿತ್ರದ ಬಗ್ಗೆ ಮಾತನಾಡಿರುವ ಇವರು ‘ಕಾಂತಾರ ಚಿತ್ರದಲ್ಲಿ ಜನರು ಕಾಡಿನಲ್ಲಿ ಕಾಡುಪ್ರಾಣಿಗಳೊಂದಿಗೆ ಕಾಡನ್ನು ಉಳಿಸಿಕೊಂಡು ತಮ್ಮನ್ನು ಉಳಿಸಿಕೊಳ್ಳುತ್ತಾ ಜೀವನ ನಡೆಸುತ್ತಿರುತ್ತಾರೆ. ಆದರೆ ಜಮೀನ್ದಾರಿ ಪದ್ಧತಿ, ವಂಚಕರ ದಾಳಿಯಿಂದ ನೊಂದು ಸರಕಾರದಿಂದಲೂ, ಅರಣ್ಯ ಇಲಾಖೆಗಳಿಂದಲೂ ತಮ್ಮ ಉಳಿವಿನ ಭರವಸೆ ಕಾಣದೆ ಚೀರಾಡಿ ಕುಣಿದು ದೈವದ ನಂಬಿಕೆಗೆ ಮೊರೆ ಹೋಗುತ್ತಾರೆ. ದೈವದ ಕುಣಿತವೆಂಬುದು ಸದಾ ಕಾಲ ಕಷ್ಟಗಳನ್ನು ಅನುಭವಿಸಿದ ನೊಂದ ಮನಸ್ಸಿನ ಜನರ ಕೂಗಾಟವಷ್ಟೇ; ಹೊರತಾಗಿ ದೇವರಲ್ಲ. ಈ ಸತ್ಯಾಂಶವನ್ನು ಹೇಳಿದರೆ ಜನರು ರಿಷಬ್ ಶೆಟ್ಟಿಯವರಿಗೆ ಹೊಡೆಯುತ್ತಿದ್ದರು. ಅದಕ್ಕಾಗಿಯೇ ಬುದ್ದಿವಂತಿಕೆಯಿಂದ ಚಿತ್ರೀಕರಣ ಮಾಡಿದ್ದಾನೆ” ಎಂದು ಹೇಳಿದ್ದಾರೆ..

ಈ ಹಿಂದೆ ನಟ ಚೇತನ್ ಅವರು ಕಾಂತಾರ ವಿರೋಧಿ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದರು ಅದೇ ಸಾಲಿನಲ್ಲಿ ಬಿಟಿ ಲಲಿತಾ ಅವರ ಹೇಳಿಕೆಗಳು ಚರ್ಚೆಯಾಗುತ್ತಿವೆ. ‘ತಾನೇ ದೇವರೆಂದು ಹೇಳುತ್ತಾ ಕೂಗಾಡಿ ಕುಣಿಯುವ ದೈವ ನರ್ತಕರಿಗೆ ಸರ್ಕಾರವು ಮಾಸಾಶನ ನೀಡುವುದು ಸರಿಯಲ್ಲ. 2000 ರೂಪಾಯಿಗಳನ್ನು ನೀಡುವುದರ ಬದಲಾಗಿ ಕೆಲಸ ಮಾಡಲು ಸರಿಯಾದ ದಾರಿಯನ್ನು ತೋರಿಸಿ ಕೊಡುವ ಕೆಲಸ ಸರಕಾರದಿಂದ ನಡೆಯಬೇಕು.. ಇಲ್ಲದಿದ್ದಲ್ಲಿ ಜನರಲ್ಲಿ ಮೂಢನಂಬಿಕೆಗಳು ಉಳಿದುಕೊಳ್ಳುತ್ತವೆ. ದೈವ ನರ್ತಕರು ಕೂಡ ಮನುಷ್ಯರೇ..ಹಾಗಾಗಿ ಸಾರ್ವಜನಿಕರ ಹಣವನ್ನು ಈ ರೀತಿಯಾಗಿ ಪೋಲು ಮಾಡುವುದು ಸರಿಯಲ್ಲ’ ಎಂದು ಲಲಿತಾ ಅವರು ಹೇಳಿದ್ದಾರೆ.

Lalita naik controversy statement on kanatara movie

ಇವರ ಹೇಳಿಕೆಗಳಿಗೆ ಯುಟಿ ಖಾದರ್ ಅವರು ಪ್ರತಿಕ್ರಿಯಿಸಿದ್ದು, ‘ಬಿಟಿ ಲಲಿತಾ ನಾಯಕ್ ಅವರೇ, ನಿಮ್ಮ ಮೇಲೆ ನಮಗೆ ಗೌರವವಿದೆ. ಆದರೆ ‘ದೈವ ನರ್ತಕರಿಗೆ ಮಾಸಾಶನ ನೀಡುವುದು ಸರಿಯಲ್ಲ’ ಎಂಬ ನಿಮ್ಮ ಹೇಳಿಕೆಯನ್ನು ನನ್ನ ಕ್ಷೇತ್ರದ ಮತ್ತು ಸಂಪೂರ್ಣ ಕರಾವಳಿಯ ಜನರ ಪರವಾಗಿ ನಿಂತು ಖಂಡಿಸುತ್ತೇನೆ. ಪವಿತ್ರ ಆಚರಣೆಯನ್ನು ಗೌರವಿಸಿ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ನಡೆಸುವುದು ಒಳಿತು’ ಎಂದು ಬರೆದು ಹಂಚಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!