ಲವರ್ ಮೀಟ್ ಮಾಡಲು ಈತ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ? ಇದೀಗ ಫುಲ್ ವೈರಲ್

ಪ್ರೀತಿ ಎಂದರೆ ಒಂದು ಸುಮಧುರ ಬಾವ ಒಂದು ಅತ್ಯನ್ನತ ಫೀಲಿಂಗ್ ಇಬ್ಬರು ಜೊತೆಯಾಗಿದಾಗಿ ಇರುವುದಕ್ಕಿಂತ ದೂರವಾಗಿದ್ದಾಗ ಅಲ್ಲಿ ನಿಜವಾದ ಪ್ರೀತಿಯ ಅರ್ಥ ತಿಳಿಯುತ್ತದೆ ಜಗತ್ತಿನಲ್ಲಿ ನಿಜವಾದ ಪ್ರೀತಿಗೆ ಸೋಲದ ಯಾವುದೇ ಜೀವಿಯೂ ಇಲ್ಲ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಪ್ರೀತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರೀತಿಯನ್ನು ತುಂಬಾ ಜನರು
ದುರುಪಯೋಗಪಡಿಸಿಕೊಂಡಿದ್ದಾರೆ ಮನಸು ಮನಸುಗಳ ಸಮ್ಮಿಲನವೇ ಪ್ರೀತಿ ಇದು ಭಾವನಾತ್ಮಕವಾದ ಬಂಧನವಾಗಿದ್ದು ಎರಡು ಮನಸ್ಸುಗಳ ಅರಿತು ಬೆರೆತು ಜೀವನವನ್ನು ನಡೆಸುವುದೇ ಪ್ರೀತಿ .
ಇಂದಿನ ದಿನಗಳಲ್ಲಿ ಯುವಕ-ಯುವತಿಯರು ತಮ್ಮ ಪ್ರೀತಿಯನ್ನು ಕೇವಲ ಟೈಂಪಾಸ್ಗೆ ಬಳಸಿಕೊಂಡಿದ್ದಾರೆ ನಿಜವಾದ ಪ್ರೀತಿ ಕಾಣಸಿಗುವುದು ಅತ್ಯಂತ ವಿರಳ ಹಿಂದಿನ ಕಾಲದಲ್ಲಿ ಲೈಲಾ-ಮಜನೂ ರೋಮಿಯೋ-ಜೂಲಿಯಟ್ ಅವರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ.

ಕೇವಲ ದೈಹಿಕ ಸುಖ ಬಯಸದೆ ಮಾನಸಿಕವಾಗಿ ತನ್ನವರನ್ನು ಅರಿತುಕೊಂಡು ಅವರ ಕಷ್ಟ ಸುಖ ನೋವು ದುಃಖಗಳನ್ನು ಹಂಚಿಕೊಂಡು ಎಲ್ಲ ತ್ಯಾಗಕ್ಕೂ ಸಿದ್ಧವಾಗಿರುವುದನ್ನು ಪ್ರೀತಿ ಎನ್ನುತ್ತಾರೆ. ಆದರೆ ವಿಪರ್ಯಾಸವೆಂದರೆ ಇಂದಿನ ಜಗತ್ತಿನಲ್ಲಿ ಪ್ರೀತಿಯನ್ನು ಉಪಯೋಗಿಸಿಕೊಂಡು ತಮ್ಮ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಜನರೇ ಜಾಸ್ತಿಯಾಗಿದ್ದಾರೆ ನಿಜವಾದ ಪ್ರೀತಿಯಲ್ಲಿ ಯಾವುದು ಕಟ್ಟುಪಾಡುಗಳು ಇರುವುದಿಲ್ಲ ತಾವು ಪ್ರೀತಿಸಿದ ವ್ಯಕ್ತಿಯನ್ನು ಮನಸ್ಸಿನ ಭಾವನೆಗಳನ್ನು ಆಸೆಯನ್ನು ದುಃಖ ಕನಸುಗಳನ್ನು ಅವರು ಹೇಳದೆ ತಾವೇ ಅರಿತುಕೊಂಡಿರುತ್ತಾರೆ ಯಾವುದೇ ದೈಹಿಕ ಕಾಮನೆಗಳನ್ನು ಇಲ್ಲಿ ಗಣನೀಯವಾಗಿಲ್ಲ ಒಬ್ಬರೊಬ್ಬರನ್ನು ಪರಸ್ಪರ ಅರಿತು ತಮ್ಮ ಜೀವನವನ್ನು ಸುಖಮಯವಾದ ಬಾಳನ್ನು ನಡೆಸುತ್ತಾರೆ. ಪ್ರೀತಿ ಅನ್ನೋದು ಒಂದು ಮಾಯೆ ಅದನ್ನು ಕರೆಕ್ಟಾಗಿ ಹಿಡಿದಿಟ್ಟುಕೊಳ್ಳುವುದು ಜೀವನದಲ್ಲಿ ಅತಿ ಮುಖ್ಯ .ಪ್ರೀತಿಯನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳಲು ಆಗದಿದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ.

ಇಂದಿನ ದಿನಗಳಲ್ಲಿ ಕೊರೋನ ಮಹಾಮಾರಿ ಇಂದ ವಿಶ್ವದೆಲ್ಲೆಡೆ ಜನರ ಜೀವನ ಅಸ್ತವ್ಯಸ್ತವಾಗಿತ್ತು . ಜನರು ಮನೆಯಿಂದ ಆಚೆ ಬರುವುದನ್ನು ಸರ್ಕಾರ ನಿರ್ಬಂಧ ಮಾಡಲಾಗಿತ್ತು ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ನೋಡಲು ತುಂಬಾ ಕಷ್ಟ ಪಡಬೇಕಾದ ಪರಿಸ್ಥಿತಿ ಬಂದಿದ್ದೂ ಫೋನ್ಗಳಲ್ಲಿ ವಿಡಿಯೋ ಚಾಟ್ ಗಳಲ್ಲಿ ಮಾತ್ರ ನೋಡಬೇಕಾದ ಸಂದರ್ಭ ಇತ್ತು..

ಗುಜರಾತಿನ ಪರಾಡಿಟ್ ಟೌನ್ ನ 19 ವರ್ಷದ ಹುಡುಗ ತನ್ನ ಪ್ರಿಯತಮೆಯನ್ನು ಘಾಡವಾಗಿ ಪ್ರೀತಿ ಮಾಡುತಿದ್ದ ಹೇಗೋ ದಿನಾಲೂ ಆಕೆಯನ್ನು ನೋಡಿ ತಮ್ಮ ಸುಮಧುರ ದಿನಗಳನ್ನು ಕಳೆಯುತ್ತಿದ್ದ .ಆದ್ರೆ ಕೊರೋನ ಮಹಾಮಾರಿಗಯ ಅಟ್ಟಹಾಸ ಹೆಚ್ಚಾದಾಗ ಅದಕ್ಕೆ ಹೆದರಿ ಲಾಕ್ ಡೌನ್ ಮಾಡಿ ಮನೆಯಿಂದ ಆಚೆ ಬರದಂತೆ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದ ನಂತರ ಇವನು ತನ್ನ ಪ್ರಿಯತಮೆಯನ್ನು ನೋಡಲು ಆಗದೆ ಚಡಪಡಿಸಿ ಕೊನೆಗೆ ಒಂದು ಉಪಾಯವನ್ನು ಮಾಡುತಾನೆ ಅದೇನೆಂದು ತಿಳಿದರೆ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತಿರ ಪ್ರೀತಿಯಲ್ಲಿ ಬಿದ್ದ ಮೇಲೆ ಹೀಗೆಲ್ಲಾ ಮಾಡ್ತಾರ ಅನ್ನೋ ಅನುಮಾನ ಕೂಡ ಬರುತ್ತದೆ.

ಹುಡುಗನು ಪಂಜಾಬಿ ಡ್ರೆಸ್ ಧರಿಸಿ ದುಪ್ಪಟ ಸಹಾಯದಿಂದ ತನ್ನ ಮುಖ ಮುಚ್ಚಿ ಕೊಂಡು ತನ್ನ ಹುಡುಗಿಯ ನೋಡಲು ಅವಳ ಮನೆ ದಾರಿ ಹತ್ತಿರಕ್ಕೆ ತನ್ನ ಸ್ಕೂಟಿ ಚಲಿಸಿಕೊಂಡು ಹೊರಟೆ ಬಿಟ್ಟಿದನು ಪರಿಯ ಎನ್ನುವ ರಸ್ತೆಯನ್ನು ದಾಟಿ ತನ್ನ ಪ್ರೇಯಸಿಯ ಮನೆ ತಲುಪಬೇಕಿತ್ತು ದುರದೃಷ್ಟ ಎಂದರೆ ಇಲ್ಲೇ ನೋಡಿ ಕೋರೋನ ಹೆಚ್ಚಾದ ಕಾರಣ ಆ ರಸ್ತೆಯನ್ನು ಪೊಲೀಸರು ಬ್ಲಾಕ್ ಮಾಡಿದರು . ಹುಡುಗಿಯ ವೇಷದಲ್ಲಿ ಇದ್ದ ಇವನನ್ನು ನೋಡಿದ ಪೊಲೀಸರು ಯಾವುದೋ ಮೆಡಿಕಲ್ ಶಾಪ್ ಗೆ ಬಂದಿರಬೇಕು ಎಂದು ಭಾವಿಸಿ ತಡೆ ಗಟ್ಟದೆ ಹೋಗಲು ಬಿಟ್ಟಿದ್ದರು

ಹುಡುಗನು ತನ್ನ ಉಪಾಯ ಫಲಿಸಿತು ಎಂದು ಕೊಂಡು ಹುಡುಗಿಯನ್ನು ಭೇಟಿ ಮಾಡಿ ವಾಪಸ್ಸು ಬರುವಾಗ ಅದೇ ಪೊಲೀಸರು ಗಾಡಿಯನ್ನು ತಡೆ ಹಿಡಿದು ವಿಚಾರಿಸಿದಾಗ ಸತ್ಯಾಂಶ ಹೊರ ಬರುತ್ತದೆ. ಎಲ್ಲಿ ಹೋಗಿದ್ಯಮ್ಮ ಅಂತ ವಿಚಾರಿಸಿದಾಗ ತಾನು ಮಾತನಾಡಿದರೆ ಹುಡುಗ ಎಂದು ತಿಳಿಯುತ್ತದೆ ಕೈಸನ್ನೆ ಮೂಲಕ ಉತ್ತರವನ್ನು ನೀಡುತ್ತಾನೆ ಅನುಮಾನ ಪಟ್ಟ ಪೊಲೀಸರು ಸರಿಯಾಗಿ ವಿಚಾರಣೆ ಮಾಡಿದಾಗ ತಾನು ಹುಡುಗಿಯಲ್ಲ ಹುಡುಗ ಎಂದು ತನ್ನ ಪ್ರೇಯಸಿಯನ್ನು ನೋಡಲು ಅವರ ಪಾಲಕರನ್ನು ಯಾಮಾರಿಸಲು ಈ ಥರ ವೇಷ ಮರೆಮಾಚಿದಿನಿ ಎಂದು ತನ್ನ ತಪ್ಪು ಒಪ್ಪಿಕೊಂಡು ಶರಣು ಆಗಿ ಪೊಲೀಸರು ಅವನ ಮೇಲೆ ಕೇಸ್ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

ಪ್ರೀತಿ ಆದ ಮೇಲೆ ದಿನ ಭೇಟಿಯಾಗುವುದು ,ಹರಟೆ ಹೊಡೆಯುವುದು , ದಿನಾಲೂ ಫೋನಿನಲ್ಲಿ ಗಂಟೆಗಟ್ಟಲೆ ಮಾತಾಡುವುದು ಶಾಪಿಂಗ್ ಮಾಲ್ ಸಿನಿಮಾ ಸುತ್ತುವುದು ಎಂಬ ಮಾತು ಇಂದಿನ ಯುವ ಪೀಳಿಗೆಯ ಅಚ್ಚೊತ್ತಿದೆ. ನಿಜವಾದ ಪ್ರೀತಿಗೆ ಯಾವುದೇ ಫಲಾಪೇಕ್ಷೆ ಇರುವುದಿಲ್ಲ. ಅತಿಯಾದರೆ ಅಮೃತ ಕೂಡ ವಿಷ ಅನ್ನುವ ಹಾಗೆ ಪ್ರೀತಿಯಲ್ಲಿ ಸ್ವಾರ್ಥ ಜಾಸ್ತಿ ಆದರೆ ಅದು ಜಾಸ್ತಿ ದಿನ ಉಳಿಯುವುದಿಲ್ಲ .

Leave A Reply

Your email address will not be published.

error: Content is protected !!