ಮನೆಕೆಲಸದವನ ಕಾಲಿಗೆ ಬಿದ್ದ ಮಾಲೀಕ ಮಹಿಳೆ ಅಲ್ಲಿ ನಡೆದದ್ದೇನು ಗೊತ್ತೇ?

ಏನೇ ಆಗಲಿ ಮನುಷ್ಯ ಹೇಗೆ ಇರಲಿ ಅವನನ್ನು ತುಂಬಾ ಕಡೆಗಾಣಿಸಬಾರದು. ಏಕೆಂದರೆ ಒಂದಲ್ಲಾ ಒಂದು ದಿನ ಕೀಳು ದೃಷ್ಟಿಯಿಂದ ನೋಡಿದವರಿಂದಲೇ ಸಹಾಯವಾಗುತ್ತದೆ. ಅವರಿಗೆ ಮಾಡಿದ ನೋವಿನ ದುಪ್ಪಟ್ಟು ಅನುಭವಿಸಬೇಕಾಗುತ್ತದೆ. ಕೆಲವೊಬ್ಬರಿಗೆ ಅವರ ಅಧಿಕಾರ ಮತ್ತು ಹಣ ಅಹಂಕಾರವನ್ನು ತರಿಸುತ್ತದೆ. ನಾವು ಇಲ್ಲಿ ಅಂತಹ ಒಂದು ಘಟನೆಯ ಬಗ್ಗೆ ತಿಳಿಯೋಣ.

ಒಬ್ಬ ಮಹಿಳಾ ಲಾಯರ್ ಮನೆಯಲ್ಲಿ ಸುಬ್ರಮಣಿ ಎಂಬುವವನು ತೋಟದ ಕೆಲಸ ಮಾಡಿಕೊಂಡು ಇದ್ದನು. ಅವರ ವಯಸ್ಸು 48 ಆಗಿತ್ತು. ಒಂದು ದಿನ ಆ ಮಹಿಳೆ ತನ್ನ ಆಫೀಸ್ ನಿಂದ ವಾಪಸ್ ಆದಾಗ ತನ್ನ ಕೈಯಲ್ಲಿ ಇದ್ದ ಡೈಮಂಡ್ ರಿಂಗ್ ಕಾಣೆಯಾಗಿದ್ದನ್ನು ನೋಡಿದಳು. ಇದರಿಂದ ಬಹಳ ಶಾಕ್ ಆದಳು. ಮನೆಯವರೆಲ್ಲ ಸೇರಿ ಬಹಳ ದುಃಖದಲ್ಲಿ ಇದ್ದರು. ಆದರೆ ಸುಬ್ರಮಣಿ ಅವರು ಮನೆಯಲ್ಲಿ ಸಂಜೆ ಒಬ್ಬರೇ ಇದ್ದರು. ಹಾಗಾಗಿ ಅವರೇ ಕದ್ದಿದ್ದಾರೆ ಎಂದು ಅನುಮಾನ ಪಡುತ್ತಾರೆ.

ಇವರ ಮೇಲೆ ಸಂದೇಹ ಪಟ್ಟು ಜೊತೆಯಲ್ಲಿ ವಿಚಾರಣೆ ಕೂಡ ಮಾಡಿದ್ದಾರೆ. ಅವರು ಎಷ್ಟು ನಿಜ ಹೇಳಿದರೂ ಕೂಡ ಆ ಮಹಿಳೆ ಅನುಮಾನ ಪಟ್ಟು ಅವನನ್ನು ಕೆಲಸದಿಂದ ತೆಗೆದುಹಾಕಿದಳು. ನ್ಯಾಯವಾಗಿ ಕೆಲಸ ಮಾಡಿದ್ದಕ್ಕೆ ಸುಬ್ರಮಣಿ ಅವರು ಬಹಳ ಕುಗ್ಗಿ ಹೋಗಿದ್ದರು. ರಾತ್ರಿಯಾದ ಮೇಲೆ ತನ್ನ ಗಂಡ ಮನೆಗೆ ಬಂದಾಗ ವಿಚಾರವನ್ನು ಆ ಮಹಿಳೆ ಹೇಳಿದಳು. ಆಗ ಆಕೆಯ ಗಂಡ ಮನೆಯಲ್ಲಿ ಅಳವಡಿಸಿದ ಸಿಸಿಕ್ಯಾಮೆರಾವನ್ನು ಚೆಕ್ ಮಾಡಿದರು. ಆಗ ಬಾತ್ರೂಮ್ ನಿಂದ ಹೊರಗೆ ಬಂದ ನಂತರವೇ ಉಂಗುರ ಇಲ್ಲದೇ ಇರುವುದರಿಂದ ಅವನನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಪಶ್ಚಾತ್ತಾಪಪಟ್ಟಳು.

ಸುಬ್ರಮಣಿ ಅವರ ಬಳಿ ಹೋಗಿ ಕ್ಷಮೆ ಕೇಳಿ ಮತ್ತೆ ಅವರನ್ನು ಕೆಲಸಕ್ಕೆ ಕರೆದುಕೊಂಡಳು. ನಂತರ ಸುಬ್ರಮಣಿ ಅವರು ಹೇಗಾದರೂ ಮಾಡಿ ಆ ಡೈಮಂಡ್ ರಿಂಗನ್ನು ಹೇಗಾದರೂ ಹುಡುಕಬೇಕು ಎಂದು ಛೇಂಬರಿನಲ್ಲಿ ಹುಡುಕಿದರು. ಕೊನೆಗೂ ಡೈಮಂಡ್ ರಿಂಗನ್ನು ಕಂಡು ಹಿಡಿದರು. ಇದರಿಂದ ಪಶ್ವಾತ್ತಾಪ ಪಟ್ಟು ಅವರ ಕಾಲಿಗೆ ಬಿದ್ದು ಆ ಮಹಿಳೆ ಕ್ಷಮೆ ಕೇಳಿದ್ದಾಳೆ. ಇದನ್ನು ಆ ಮಹಿಳೆ ಫೇಸ್ಬುಕ್ ನಲ್ಲಿ ಶೇರ್ ಮಾಡಿ ತೋಟಗಾರನ ನಿಯತ್ತನ್ನು ಹೊಗಳಿದ್ದಾಳೆ. ಯಾವುದನ್ನೇ ಆದರೂ ನೋಡದೆ ನಿರ್ಧಾರ ತೆಗೆದುಕೊಳ್ಳಬಾರದು. ಸರಿಯಾಗಿ ಯೋಚಿಸಬೇಕು.

Leave a Comment

error: Content is protected !!