ತಲೆಹೊಟ್ಟು ನಿವಾರಣೆ ಜೊತೆಗೆ ಶರೀರಕ್ಕೆ ತಂಪು ನೀಡುವ ಮನೆಮದ್ದು

ನಮ್ಮ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಮ್ಮ ಅಡಿಗೆ ಮನೆ ಹಾಗೂ ಹಿತ್ತಲಿನಲ್ಲಿಯೆ ಔಷಧ ಇರುತ್ತದೆ. ಅದರ ಅರಿವು ನಮಗಿರುವುದಿಲ್ಲ. ಆಸ್ಪತ್ರೆಯ ಇಂಗ್ಲಿಷ್ ಔಷಧಗಳ ಬದಲು ಮನೆ ಮದ್ದುಗಳ ಬಳಕೆ ಆರೋಗ್ಯದ ಹಿತದೃಷ್ಟಿಯಿಂದ ಮತ್ತೂ ಉತ್ತಮ. ಮನೆ ಮದ್ದಿನಲ್ಲಿ ಕೂದಲಿನ ಸಮಸ್ಯೆಯಾದ ಹೊಟ್ಟಿನ ಸಮಸ್ಯೆಗೆ ಏನು ಔಷಧ ಇದೆ ಎಂಬುದನ್ನು ತಿಳಿದುಕೊಳ್ಳೊಣ.

ಹೊಟ್ಟು ಇದ್ದಾಗ ಕೂದಲು ಉದುರುವುದು ಸರ್ವೆ ಸಾಮಾನ್ಯ. ಹಾಗಾದರೆ ಹೊಟ್ಟಿನ ಸಮಸ್ಯೆಯ ನಿವಾರಣೆಗೆ ಮನೆ ಮದ್ದು ಹೀಗಿದೆ. ಮೆಂತ್ಯವನ್ನು ರಾತ್ರಿಯ ವೇಳೆ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಮೊಸರು, ಕರಿಬೇವು ಮತ್ತು ಬೇವು ಅದಕ್ಕೆ ಹಾಕಿ ನುಣ್ಣಗೆ ರುಬ್ಬಿ ಇಟ್ಟುಕೊಂಡು ತಲೆಗೆ ಹಚ್ಚುವ ಸಂದರ್ಭದಲ್ಲಿ ಪಚ್ಚ ಕರ್ಪೂರ ಹಾಕಿಕೊಂಡು ಹತ್ತರಿಂದ ಹದಿನೈದು ನಿಮಿಷಗಳ ಕಾಲ ರುಬ್ಬುವುದು ಒಳ್ಳೆಯದು. ಮಿಕ್ಸಿಗಿಂತ ರುಬ್ಬುವ ಕಲ್ಲಿನಲ್ಲಿ ಮಾಡಿದರೆ ಮತ್ತು ಉತ್ತಮ ಫಲಿತಾಂಶ ಸಿಗುತ್ತದೆ. ತಲೆಯನ್ನು ನೀರಿನಿಮದ ತೊಳೆದುಕೊಳ್ಳಬೇಕು. ಬೇವಿನ ರಸ ಹಾಗೂ ನಿಂಬೆ ರಸವನ್ನು ಬೆರೆಸಿ ತಲೆಗೆ ಸರಿಯಾಗಿ ಹಚ್ಚಿಕೊಂಡು, ಎಂಟರಿಂದ ಹತ್ತು ನಿಮಿಷ ಮಸಾಜ್ ಮಾಡಿಕೊಳ್ಳಬೇಕು. ಇದಾದ ನಂತರ ಸ್ವಲ್ಪ ದಪ್ಪಗೆ ಮೆಂತ್ಯದ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಹದಿನೈದು ನಿಮಿಷದಿಂದ ನಲವತ್ತೈದು ನಿಮಿಷಗಳು, ಮತ್ತು ಹೆಚ್ಚಿಗೆ ಎಂದರೆ ಒಂದು ಅರ್ಧ ತಾಸು ಇಟ್ಟುಕೊಳ್ಳಬೇಕು.

ತಂಪು ಶರೀರ, ಹಿಂಸೆ ಎನಿಸಿದರೆ ನಲವತ್ತೈದು ನಿಮಿಷಗಳಿಗೆ ತೆಗೆದುಬಿಡುವುದು ಉತ್ತಮ. ಬೇರೆ ಯಾವ ಕೆಲಸಗಳಿಗೂ ತೊಂದರೆಯಾಗದಂತೆ ಕೂದಲಿಗೆ ಕ್ಯಾಪ್ ಸಿಗುತ್ತದೆ ಅದನ್ನು ಬಳಸಿ. ಇನ್ನೂ ಕೂದಲನ್ನು ತೊಳೆಯುವ ಸಮಯದಲ್ಲಿ ಸೀಗೆಪುಡಿಯಲ್ಲಿ ಕೂದಲು ತೊಳೆಯಬೇಕು. ಶ್ಯಾಂಪು ಯಾಕೆ ಬೇಡ ಎಂದರೆ ಅದಕ್ಕೆ ಉಪಯೋಗಿಸುವ ಕೆಲವು ವಸ್ತುಗಳು ಕೂದಲು ಬೇಗ ನೆರೆಯುವುದು, ಉದುರುವುದು, ಇನ್ನೂ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ‌. ಆದರೆ ಈ ಮನೆ ಮದ್ದು ಯಾವುದೆ ರೀತಿಯ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ತನ್ನ ತಾಜಾತನವನ್ನು ದೇಹಕ್ಕೆ ಒದಗಿಸುತ್ತದೆ. ಯಾವ ಸಮಸ್ಯೆಗೆ ಬಳಸಿದ್ದೆವೊ ಆ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮಕ್ಕಳಿಂದ ವಯಸ್ಸಾದವರಿಗೂ ಇದು ಸೂಕ್ತವಾಗಿರುತ್ತದೆ. ಯಾವುದೆ ಅಡ್ಡ ಪರಿಣಾಮ ಆಗುವುದಿಲ್ಲ.

ಸಿಟಿಯಲ್ಲಿ ಇದ್ದವರು ಕೂಡ ಇದನ್ನು ಬಳಸಬಹುದು. ಹೆಚ್ಚಿನ ವೆಚ್ಚ ತಗಲುವುದಿಲ್ಲ. ಹಳ್ಳಿಯಲ್ಲಿ ಇದ್ದವರಿಗೆ ಎಲ್ಲವೂ ಮನೆಯ ಸುತ್ತಲಿನ ಪ್ರದೇಶದಲ್ಲಿ ಸಿಗುತ್ತದೆ. ಆದಷ್ಟು ಆಯುರ್ವೇದ ಔಷಧ, ಮನೆಮದ್ದು ಬಳಸುವುದು ಉತ್ತಮ.

Leave a Comment

error: Content is protected !!