ಅಪ್ಪು ನಟನೆಯ ದ್ವಿತ್ವ ಸಿನಿಮಾ ಮಾಡ್ತಿರೋ ಸ್ಟಾರ್ ನಟ ಯಾರು ಗೊತ್ತಾ? ಗೊತ್ತಾದ್ರೆ ನೀವು ಕೂಡ ಶಾಕ್ ಆಗ್ತೀರಾ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣಕ್ಕು ಮುನ್ನ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಹಾಗೂ ಲೂಸಿಯಾ ಪವನ್ ಕುಮಾರ್ ನಿರ್ದೇಶನದಲ್ಲಿ ಒಂದು ಸಿನಿಮಾ ಅನೌನ್ಸ್ ಆಗಿತ್ತು. ಲೂಸಿಯಾ ಪವನ್ ಕುಮಾರ್ ಅವರು ಕಮರ್ಷಿಯಲ್ ಗಿಂತ ಹೆಚ್ಚಾಗಿ ಕಂಟೆಂಟ್ ಇರುವ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸುತ್ತಾರೆ.

ಅವರ ಹಾಗೂ ಅಪ್ಪು ಅವರ ಕಾಂಬಿನೇಷನ್ ನಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ ಮೂಡಿ ಬರುತ್ತದೆ ಎಂಬುದಾಗಿ ಎಲ್ಲರೂ ಕೂಡ ಕುತೂಹಲದಿಂದ ಕಾಯುತ್ತಿದ್ದರು. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ದ್ವಿತ್ವ ಸಿನಿಮಾದ ಕುರಿತಂತೆ. ಈ ಸಿನಿಮಾಗೆ ನಾಯಕಿಯಾಗಿ ತ್ರಿಶಾ ಅವರನ್ನು ಕೂಡ ಆಯ್ಕೆ ಮಾಡಲಾಗಿತ್ತು ಹಾಗೂ ಆಶಿಕಾ ರಂಗನಾಥ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಿದ್ಧತೆ ನಡೆದಿತ್ತು.

ಆದರೆ ಸಿನಿಮಾ ಸೆಟ್ಟಿರುವ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ್ದಾರೆ. ಪುನೀತ್ ರಾಜಕುಮಾರ್ ಅವರು ನಟಿಸಬೇಕಾಗಿದ್ದ ದ್ವಿತ್ವ ಸಿನಿಮಾ ಅನ್ನು ಲೂಸಿಯಾ ಪವನ್ ಕುಮಾರ್ ಅವರು ಮತ್ತೊಬ್ಬ ಸ್ಟಾರ್ ನಟನಿಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಗಳು ಈಗ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಓಡಾಡುತ್ತಿದೆ. ಅಷ್ಟಕ್ಕೂ ಆ ಸ್ಟಾರ್ ನಟ ಕನ್ನಡದವರಲ್ಲ ಹಾಗಾದರೆ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಇತ್ತೀಚಿನ ವರ್ಷಗಳಲ್ಲಿ ಪುಷ್ಪಾ ಸಿನಿಮಾದಲ್ಲಿ ಮತ್ತು ವಿಕ್ರಂ ಸಿನಿಮಾದಲ್ಲಿ ತಮ್ಮ ಅತ್ಯದ್ಭುತ ಪಾತ್ರಗಳ ಮೂಲಕ ಸಂಚಲನ ಸೃಷ್ಟಿಸಿರುವ ಮಲಯಾಳಂ ಸಿನಿಮಾ ರಂಗದ ಪ್ರತಿಭಾನ್ವಿತ ನಟ ಫಹಾದ್ ಫಾಸಿಲ್ ಅವರಿಗೆ ದ್ವಿತ್ವ ಸಿನಿಮಾ ವನ್ನು ಪವನ್ ಕುಮಾರ್ ಅವರ ನಿರ್ದೇಶನ ಮಾಡಲಿದ್ದಾರೆ ಎಂಬುದಾಗಿ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಓಡಾಡುತ್ತಿದೆ. ಇದು ಎಷ್ಟು ಮಟ್ಟಿಗೆ ನಿಜ ಎಂಬುದನ್ನು ಮುಂದಿನ ದಿನಗಳಲ್ಲಿ ಚಿತ್ರ ತಂಡ ಅಧಿಕೃತವಾಗಿಯೇ ಘೋಷಣೆ ಮಾಡಬೇಕಾಗಿದೆ.

Leave A Reply

Your email address will not be published.

error: Content is protected !!