
Ration Card: ರೇಷನ್ ಕಾರ್ಡ್ ಇದ್ದವರು ಜೂನ್ 30 ರೊಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಉಚಿತ ರೇಷನ್ ಸಿಗಲ್ಲ
Ration Card New Updates: ಇಷ್ಟು ದಿನ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಈಗ ಆಧಾರ್ ಕಾರ್ಡ್ ಜೊತೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ಆದೇಶ ಹೊರಡಿಸಿದೆ ಏಕೆಂದರೆ ನಕಲಿ ಪಡಿತರ ಚೀಟಿಯನ್ನು ರದ್ದುಗೊಳಿಸಲು ಈ ಯೋಜನೆಯನ್ನು ಮಾಡಿದೆ.
Ration Card New Updates
ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ ಲಿಂಕ್ ಮಾಡದೆ ಇದ್ದರೆ ಪಡಿತರ ಚೀಟಿ ರದ್ದು ಮಾಡುವುದಾಗಿ ತಿಳಿಸಿದೆ ಅದರಂತೆ ಜೂನ್ 30ರೊಳಗೆ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಇಲ್ಲದಿದ್ದರೆ ಜುಲೈ 1 ರಿಂದ ಪಡಿತರಕ್ಕೆ ಸಿಗುವ ಉಚಿತ ಅಕ್ಕಿ ಲಭ್ಯವಾಗುವುದಿಲ್ಲ. ತಪ್ಪು ಜನರು ಪಡಿತರ ಚೀಟಿ ಪಡೆಯುವುದನ್ನ ತಪ್ಪಿಸಲು ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಅರ್ಹರಿಗೆ ಮಾತ್ರ ಗ್ಯಾಸ್ ಹಾಗೂ ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಲಾಗಿದೆ.
RBI 2000 NOTE: 2000 ನೋಟ್ ಹಿಂಪಡೆದ RBI. ಜನರಲ್ಲಿ ಶುರುವಾಯಿತು ಕಳವಳ
ನಕಲು ಪಡಿತರ ಚೀಟಿ ಬರುತ್ತಿರುವುದರಿಂದ ಈ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ. ಆಯಾ ರಾಜ್ಯ ಸರ್ಕಾರಗಳು ಕುಡಾ ಸ್ವೀಕರಿಸಿ ತಮ್ಮ ನಿಯಮಾನುಸಾರ ಹೊಸ ಪಡಿತರ ಚೀಟಿಯನ್ನು ಜಾರಿಗೊಳಿಸುತ್ತಿದೆ ಅದಕ್ಕಾಗಿ ಎಲ್ಲರೂ ಒಂದೇ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಯಾರಾದರೂ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಸದೆ ಇದ್ದರೆ ತಕ್ಷಣ ಮಾಡಿಸಿಕೊಳ್ಳಿ. ಸರ್ಕಾರದ ಪ್ರಜೆಗಳಾದ ನಾವು ಸರ್ಕಾರದ ನಿಯಮವನ್ನು ಗೌರವಿಸಿ ಅದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ನಕಲಿ ಪಡಿತರ ಚೀಟಿಯನ್ನು ತೆಗೆದು ಹಾಕಲು ಸರ್ಕಾರಕ್ಕೆ ಸ್ಪಂದಿಸಿ.
ಇದನ್ನೂ ಓದಿ:ಜಾಸ್ತಿ ಕರೆನ್ಸಿ ನೋಟ್ ಪ್ರಿಂಟ್ ಮಾಡುವುದಿಲ್ಲ ಯಾಕೆ ಗೊತ್ತಾ? ಇದರ ಹಿಂದಿದೆ ಎಲ್ಲರೂ ತಿಳಿಯಬೇಕಾಗಿರುವ ರಹಸ್ಯ.