ಜ್ವರ ನಿವಾರಿಸುವ ತುಳಸಿ ಎಲೆ ಹಾಗೂ ಜೇನುತುಪ್ಪ

ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ ಅಂತಹ ಸಮಸ್ಯೆಗಳಲ್ಲಿ ಈ ಜ್ವರ ಕೂಡ ಒಂದಾಗಿದೆ. ಈ ಜ್ವರ ಯಾಕೆ ಬರುತ್ತೆ ಹಾಗೂ ಇದಕ್ಕೆ ಕಾರಣಗಳೇನು ಇದನ್ನು ಪರಿಹರಿಸುವ ಮನೆಮದ್ದುಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ಜ್ವರ ಬರಲು ಕಾರಣ ಸೋಂಕು ಉಂಟು ಮಾಡುವ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು. ಕೆಲವೊಮ್ಮೆ ದೈಹಿಕ ಶ್ರಮ ಅಥವಾ ಅತ್ಯಂತ ಹೆಚ್ಚಾದ ಮಾನಸಿಕ ಶ್ರಮ ಅಥವಾ ಒತ್ತಡವು ಕೂಡ ಜ್ವರ ಬರುವಂತೆ ಮಾಡಬಹುದು. ಇನ್ನು ಜ್ವರ ಅನ್ನೋದು ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯಿಂದ ಗುಣವಾಗುತ್ತದೆ.

ಕೆಲವು ವಿಶೇಷ ಸಂದರ್ಭಗಳಲ್ಲಿ ಜ್ವರಕ್ಕೆ ಮಲೇರಿಯಾ ದಂತಹ ಸಾಂಕ್ರಾಮಿಕ ರೋಗಗಳು ಆಗಿರಬಹುದು ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. ಹಾಗಲ್ಲದೆ ಜ್ವರಕ್ಕೆ ಕಾರಣ ಕೇವಲ ವಾತಾವರಣದಲ್ಲಿನ ದಿಡೀರ್ ವ್ಯತ್ಯಾಸ, ಶೀತ ನೆಗಡಿ ಅಥವಾ ವೈರಸ್ ಹಾಗೂ ಬ್ಯಾಕ್ಟಿರಿಯಾ ಸೋಂಕು ಆಗಿದ್ದಲ್ಲಿ ಕೆಳಗೆ ತಿಳಿಸಿರುವ ಕೆಲವು ಸಲಹೆಗಳು ಅದ್ಭುತವಾಗಿ ಕೆಲಸ ಮಾಡುತ್ತದೆ.

ಒಂದು ಚಮಚ ಮೆಂತ್ಯದ ಕಾಳುಗಳನ್ನು ಕುದಿಸಿ ಟೀ ತಯಾರಿಸಿ ಬಿಸಿ ಬಿಸಿಯಾಗಿ ಕುಡಿಯುವುದರಿಂದ ಜ್ವರ ಗುಣವಾಗುತ್ತದೆ, ಇದಕ್ಕೆ ರುಚಿಯಾಗಿ ಸ್ವಲ್ಪ ಜೇನುತುಪ್ಪವನ್ನು ಕೂಡ ಬೆರೆಸಿಕೊಳ್ಳಬಹುದು. ಇನ್ನು ಜ್ವರದ ತಾಪ ಹೆಚ್ಚಾಗಿದ್ದರೆ ಗಂಧದ ಲೇಪವನ್ನು ಹಣೆಯ ಮೇಲೆ ಹಚ್ಚುವುದರಿಂದ ಜ್ವರದ ತಾಪ ಕಡಿಮೆಯಾಗುವುದು.

ತುಳಸಿ ಎಲೆ ಮತ್ತು ಜೇನುತುಪ್ಪ ಜ್ವರ ಗುಣಮಾಡುತ್ತದೆ, ಹೌದು ೫೦ ಗ್ರಾಂ ತುಳಸಿ ಎಲೆಗಳನ್ನು ಜಜ್ಜಿ ರಸ ತಗೆಯಿರಿ ಅದಕ್ಕೆ ೪ ಚಮಚ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಾಮಾನ್ಯ ಜ್ವರ ಗುಣವಾಗುತ್ತದೆ.

ಮೂರನೆಯ ಮನೆಮದ್ದು ದಾಲ್ಚಿನ್ನಿ ಚಕ್ಕೆ ಹಾಗೂ ಟೊಮೊಟೊ, ಟೊಮೊಟೊ ಸೂಪನ್ನು ತಯಾರಿಸಿ ಅದಕ್ಕೆ ಅರ್ಧ ಚಮಚ ದಾಲ್ಚಿನ್ನಿ ಚಕ್ಕೆಯನ್ನು ಬೆರಸಿ ಇದನ್ನು ಜ್ವರವಿರುವ ರೋಗಿಗೆ ದಿನಕ್ಕೆ ಎರಡು ಬಾರಿ ಕುಡಿಸುವುದರಿಂದ ಜ್ವರ ಗುಣಮುಖವಾಗುತ್ತದೆ. ಇವುಗಳಲ್ಲಿ ನಿಮಗೆ ಯಾವುದು ಅತಿ ಸುಲಭವೋ ಅದನ್ನು ಮಾಡಿ ಜ್ವರ ನಿಯಂತ್ರಿಸಿಕೊಳ್ಳಬಹುದಾಗಿದೆ.

Leave a Comment

error: Content is protected !!