Meghana Raj ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿರುವ ಸುಂದರ್ ರಾಜ್(Sundar Raj) ಹಾಗೂ ಪ್ರಮೀಳಾ ಜೋಷಾಯಿ ಅವರ ಮಗಳಾಗಿರುವ ಮೇಘನ ರಾಜ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಾರಂಭದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ನಾಯಕಿಯಾಗಿ ಪಾದರ್ಪಣೆ ಮಾಡುತ್ತಾರೆ. ಅದಾದ ನಂತರ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೇಘನಾ ರಾಜ್ ಯಶ್(Yash) ನಟನೆಯ ರಾಜಾಹುಲಿ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ಕಾಣಿಸಿಕೊಳ್ಳುತ್ತಾರೆ.
ಸಾಕಷ್ಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಚಿರು ಸರ್ಜಾ(Chiru Sarja) ಅವರನ್ನು ಎರಡು ಧರ್ಮಗಳ ಪ್ರಕಾರ ಮದುವೆಯಾಗುತ್ತಾರೆ. ಇನ್ನೇನು ಜೀವನ ಚೆನ್ನಾಗಿ ಪ್ರಾರಂಭವಾಗಬೇಕು ಎನ್ನುವ ಹೊತ್ತಿಗೆ ಚಿರು ಸರ್ಜಾ ಅವರು ಅಕಾಲಿಕವಾಗಿ ಮರಣವನ್ನು ಹೊಂದುತ್ತಾರೆ. ಒಂಟಿಯಾಗಿದ್ದ ಮೇಘನಾ ರಾಜ್(Meghana Raj) ಅವರ ಬಾಳಿಗೆ ಬೆಳಕಾಗಿ ಬಂದಿದ್ದು ಅವರ ಮಗನಾಗಿರುವ ಜೂನಿಯರ್ ಚಿರು ಸರ್ಜಾ. ಚಿತ್ರರಂಗದಿಂದ ದೂರವಿದ್ದ ನಟಿ ಮೇಘನಾ ರಾಜ್ ಮತ್ತೆ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ.
ಹೌದು ಗೆಳೆಯರೇ, ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳ ತೀರ್ಪುಗಾರರಾಗಿ ಹಾಗೂ ಜಾಹೀರಾತುಗಳ ಬ್ರಾಂಡ್ ಅಂಬಾಸಿಡರ್ ಆಗಿ ಈಗಾಗಲೇ ಮೇಘನಾ ರಾಜ್ ಕಾರ್ಯ ನಿರ್ವಹಿಸಿದ್ದಾರೆ. ತತ್ಸಮ ತದ್ಭವ ಎನ್ನುವ ಸಿನಿಮಾಾಗೆ ಕೂಡ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಚಿತ್ರರಂಗಕ್ಕೆ ಮತ್ತೊಮ್ಮೆ ನಟಿಯಾಗಿ ಕಂಬ್ಯಾಕ್ ಮಾಡಿರುವ ಮೇಘನ ರಾಜ್(Meghana Raj) ಈಗ ಎಷ್ಟು ಸಂಭಾವನೆಯನ್ನು ಪಡೆಯುತ್ತಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.
ಒಂದು ಕಾಲದಲ್ಲಿ ಟಾಪ್ ನಾಯಕ ನಟಿಯರಲ್ಲಿ ಒಬ್ಬರಾಗಿದ್ದ ಮೇಘನಾ ರಾಜ್ ನಟನೆಯಲ್ಲಿ ಕೂಡ ಪ್ರಬುದ್ಧತೆಯನ್ನು ಹೊಂದಿದ್ದಾರೆ. ಚಿತ್ರರಂಗದ ಮೇಧಾವಿಗಳ ಪ್ರಕಾರ ಒಂದು ಸಿನಿಮಾಗೆ ಈಗ ಮೇಘನ ರಾಜ್(Meghana Raj) ರವರು ಏನಿಲ್ಲವೆಂದರು 35 ರಿಂದ 40 ಲಕ್ಷ ರೂಪಾಯಿ ಸಂಬಾವನಿಯನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಅಂದಾಜು ಹಾಕಲಾಗಿದೆ. ನಿಮ್ಮ ಪ್ರಕಾರ ಮೇಘನಾ ರಾಜ್ ನಟನೆಯ ಯಾವ ಸಿನಿಮಾ ಇಷ್ಟ ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.