Rashmika Mandanna: ಅವಾರ್ಡ್ ಫಂಕ್ಷನ್ ನಲ್ಲಿ ರಶ್ಮಿಕಾ ಮಂದಣ್ಣ ಬಟ್ಟೆ ನೋಡಿ ಕಸದಚೀಲವನ್ನು ಮೈಗೆ ಸುತ್ತಿಕೊಂಡು ಬಂದಿದ್ದು ಯಾಕೆ ಎಂದು ನೆಟ್ಟಿಗರು ಹೇಳಿದ್ದೇಕೆ?

Rashmika Mandanna ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬೇಡಿಕೆಯನ್ನು ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಹೈಯೆಸ್ಟ್ ಡಿಮ್ಯಾಂಡ್ ನಲ್ಲಿ ಇರುವಂತಹ ನಟಿ. ಕಿರಿಕ್ ಪಾರ್ಟಿ(Kirik Party) ಸಿನಿಮಾದಿಂದ ಪ್ರಾರಂಭವಾಗಿದ್ದ ಅವರ ಸಿನಿಮಾ ಜರ್ನಿ ಈಗ ಯಶಸ್ಸಿನ ತುತ್ತ ತುದಿಗೆ ತಲುಪಿದೆ ಎಂದರು ತಪ್ಪಾಗಲಾರದು.

ಪ್ರಮುಖವಾಗಿ ಈಗಿನ್ನು ಕೇವಲ 26 ವರ್ಷದವರಾಗಿರುವ ರಶ್ಮಿಕ ಮಂದಣ್ಣ(Rashmika Mandanna) ಸಾಕಷ್ಟು ವರ್ಷಗಳ ಕಾಲ ಭಾರತೀಯ ಚಿತ್ರರಂಗವನ್ನು ಆಳುವಂತಹ ನಟಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟರ ಮಟ್ಟಿಗೆ ಭಾರತದ ಪ್ರತಿಯೊಂದು ಭಾಷೆಯಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇನ್ನು ಸದಾ ಕಾಲ ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿಯಲ್ಲಿರುವ ರಶ್ಮಿಕ ಮಂದಣ್ಣ ಈಗ ಮತ್ತೊಮ್ಮೆ ತಮ್ಮ ಬಟ್ಟೆಯ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ. ಜೀ ಸಂಸ್ಥೆಯ ಅವಾರ್ಡ್ ಫಂಕ್ಷನ್ ನಲ್ಲಿ(Zee Award Function) ಭಾಗವಹಿಸಿದ್ದ ರಶ್ಮಿಕ ಮಂದಣ್ಣ ಹಾಕಿಕೊಂಡಿರುವ ಗ್ಲಾಮರಸ್ ಬಟ್ಟೆಯನ್ನು ನೋಡಿ ನೆಟ್ಟಿಗರು ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ.

ಹೌದು ಗೆಳೆಯರೇ ಸಖತ್ ಗ್ಲಾಮರಸ್ ಆಗಿರುವ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿರುವ ರಶ್ಮಿಕ ಮಂದಣ್ಣ(Rashmika) ಅವರನ್ನು ನೋಡಿರುವ ನಟಿಗರು ಸೋಶಿಯಲ್ ಮೀಡಿಯಾ ಗಳಲ್ಲಿ ಯಾಕೆ ಗಾರ್ಬೇಜ್ ಕವರ್ ಅನ್ನು ಸುತ್ತಿಕೊಂಡು ಬಂದಿದ್ದೀರಿ ಎಂಬುದಾಗಿ ಟೀಕೆ ಮಾಡುತ್ತಿದ್ದಾರೆ. ಅವಾರ್ಡ್ ಫಂಕ್ಷನ್ ನಲ್ಲಿ ರಶ್ಮಿಕಾ ಮಂದಣ್ಣ ಧರಿಸಿರುವ ಈ ಬಟ್ಟೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!