ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ನಟಿಸಿದ್ದು ಕೇವಲ ಬೆರಳೆಣಿಕೆ ಎಷ್ಟು ಸಿನಿಮಾ ಮಾತ್ರ ಆದರೆ ಆರು ತಿಂಗಳ ಮಗುವಾಗಿನಿಂದಲೇ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನಾಗಿ ಜನ್ಮ ತಾಳಿದವರಿಗೆ ಎನ್ನುವುದು ಎಲ್ಲರೂ ಕೂಡ ಮೆಚ್ಚುವಂತಹ ವಿಚಾರ ಎಂದರೆ ತಪ್ಪಾಗಲಾರದು.
ಇನ್ನು ಅವರ ಮರಣಾ ನಂತರ ಜನರಿಗೆ ಗೊತ್ತಿಲ್ಲದಿರುವ ಹಲವಾರು ವಿಚಾರಗಳು ಒಂದೊಂದಾಗಿಯೇ ಹೊರಬಂದಿದೆ. ಅವುಗಳಲ್ಲಿ ಅಪ್ಪು ಅವರು ಜನರಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿರುವ ಹಾಗೂ ಆರ್ಥಿಕ ಸಹಾಯವನ್ನು ನೀಡಿರುವಂತಹ ವಿಚಾರಗಳೇ ಹೆಚ್ಚು ಎನ್ನಬಹುದಾಗಿದೆ.
Kannadati serial actress ranjani aghavan about puneet rajkumar
ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಆಗಿರುವ ಕನ್ನಡತಿ ಧಾರವಾಹಿಯ ಭುವಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ರಂಜಿನಿ ರಾಘವನ್ ಅವರ ಬಗ್ಗೆ. ರಂಜನಿ ರಾಘವನ್ ಅವರು ಲೇಟೆಸ್ಟ್ ಆಗಿ ತಮ್ಮ instagram ಖಾತೆಯಲ್ಲಿ ಅಪ್ಪು ಅವರ ಜೊತೆಗೆ ಇರುವಂತಹ ಒಂದು ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಇದರ ಹಿನ್ನೆಲೆಯನ್ನು ಕೂಡ ಕ್ಯಾಪ್ಷನ್ನಲ್ಲಿ ಬರೆದಿದ್ದು ಎಲ್ಲರೂ ಕೂಡ ಬಾವುಕರಾಗುವಂತೆ ಮಾಡಿದೆ. ಹೌದು ಮಿತ್ರರೇ, ರಾಜಹಂಸ ಸಿನಿಮಾದ ಪ್ರಮೋಷನ್ ವಿಚಾರವಾಗಿ ಅಪ್ಪು ಅವರನ್ನು ಭೇಟಿ ಮಾಡೋಕೆ ಹೋದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ರಂಜನಿ ರಾಘವನ್ ಅವರಿಗೆ ನಮ್ಮ ಮನೆಯಲ್ಲಿ ನಿಮ್ಮ ಧಾರವಾಹಿ ಎಲ್ಲರೂ ಕೂಡ ನೋಡ್ತಾರೆ ಎಂಬುದಾಗಿ ಮೆಚ್ಚುಗೆಯನ್ನು ಸೂಚಿಸಿದ್ದರು. ಅದೇ ಸಂದರ್ಭದಲ್ಲಿ ತೆಗೆದುಕೊಂಡ ಸೆಲ್ಫಿ ಫೋಟೋ ಇದಾಗಿದ್ದು ಇದನ್ನು ರಂಜನಿ ರಾಘವನ್ ಅವರು ಪೋಸ್ಟ್ ಮಾಡುವ ಮೂಲಕ ಹಳೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.