ಮಲಗೋ ಮುನ್ನ ಈ ವಸ್ತುಗಳನ್ನು ನಿಮ್ಮಿಂದ ದೂರ ಇಡಿ ಇಲ್ಲಾಂದ್ರೆ ಗಂಡಾಂತರ ಖಚಿತ.

Vasthu Shastra ಬೆಳಿಗ್ಗೆ ಎದ್ದ ತಕ್ಷಣ ಶುಭಕರವಾದ ವಸ್ತುಗಳನ್ನು ಮೊದಲಿಗೆ ನೋಡಿದರೆ ಖಂಡಿತವಾಗಿ ಇಡೀ ದಿನ ಶುಭವಾಗಿರುತ್ತದೆ ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಕೆಲವೊಂದು ವಸ್ತುಗಳನ್ನು ನೋಡಿದರೆ ನಮಗೆ ಅದು ಗ್ರಹಚಾರವಾಗಿ ಕಾಡುತ್ತದೆ ಎಂಬ ಪ್ರತಿತಿ ಕೂಡ ನಮ್ಮ ಪೂರ್ವಜರಲ್ಲಿ ಹಾಗೂ ವಾಸ್ತು ಶಾಸ್ತ್ರದಲ್ಲಿ ಇದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ನಿಮ್ಮ ಮಲಗುವ ಸ್ಥಳದಲ್ಲಿ(Sleeping Place) ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಇಡೀ ದಿನ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದು ಒಳ್ಳೆಯ ಊಟ ಮಾಡಿ ಒಳ್ಳೆಯ ನಿದ್ರೆ ಅಪೇಕ್ಷೆಯಲ್ಲಿ ಪ್ರತಿಯೊಬ್ಬರು ಕೂಡ ಇರುತ್ತಾರೆ. ಆದರೆ ನೀವೇ ನಿಮ್ಮ ಮಲಗುವ ಕೋಣೆಯಲ್ಲಿ ಕೆಲವೊಂದು ದರಿದ್ರೆಗಳನ್ನು ಸೃಷ್ಟಿ ಮಾಡಿರುತ್ತೀರಿ ಹೀಗಾಗಿ ನಿದ್ರಾಹೀನ ಪರಿಸ್ಥಿತಿಯ ಉಂಟು ಮಾಡಿಕೊಳ್ಳುವುದು ಹಾಗೂ ಇನ್ನಿತರ ದಾರಿದ್ರತೆಯನ್ನು ಉಂಟುಮಾಡಿಕೊಳ್ಳುವ ಪರಿಸ್ಥಿತಿಯನ್ನು ನೀವೇ ನಿರ್ಮಾಣ ಮಾಡಿ ಕೊಂಡಿರುತ್ತೀರಿ. ಹೀಗಾಗಿ ನಿಮ್ಮ ಕೋಣೆಯಲ್ಲಿ(Room) ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಇಡಬಾರದು ಇದರಿಂದಾಗಿ ಹಲವಾರು ತಾಪತ್ರಯಗಳನ್ನು ಅನುಭವಿಸಬೇಕಾದ ಪರಿಸ್ಥಿತಿ ನಿಮ್ಮ ಜೀವನದಲ್ಲಿ ಒದಗಿ ಬರಬಹುದು. ಪ್ರಮುಖವಾಗಿ ನೀವು ಮಲಗುವ ಸ್ಥಳ ಸಂಪೂರ್ಣ ಸ್ವಚ್ಛವಾಗಿ ಇರಬೇಕು.

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಎರಡು ಅಂಗೈಗಳನ್ನು ಉಜ್ಜಿಕೊಂಡು ಕಣ್ಣಿಗೆ ಒತ್ತಿಕೊಂಡು ಲಕ್ಷ್ಮಿ ಸ್ತೋತ್ರವನ್ನು ಪಠಿಸಬೇಕು. ಬೆಳಗ್ಗೆ(Morning) ಎದ್ದ ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನಾವೇ ನೋಡಬಾರದು. ಸೊಂಟಕ್ಕಿಂತ ಕೆಳಭಾಗದ ದೇಹದ ಭಾಗಗಳನ್ನು ಕೂಡ ಬೆಳಗ್ಗೆ ಎದ್ದು ತಕ್ಷಣ ನೋಡಬಾರದು. ಮಲಗುವ ಕೋಣೆಯಲ್ಲಿ ಪಾದರಕ್ಷೆಗಳನ್ನು ಇಡಬಾರದು ಇದು ದರಿದ್ರಕ್ಕೆ ಸಮನಾದದ್ದು. ಕೊಳೆಯಾದಂತಹ ಬಟ್ಟೆಯನ್ನು ಯಾವತ್ತೂ ಕೂಡ ಹಾಗೆಯೇ ಕಣ್ಣಿಗೆ ಕಾಣುವಂತೆ ಇಟ್ಟಿರಬಾರದು, ಆ ಜಾಗ ಶುಚಿಯಾಗಿದ್ದರೆ ಮಾತ್ರ ನಿಮಗೆ ಒಳ್ಳೆಯ ಫಲ ಸಿಗುತ್ತದೆ.

ಇನ್ನು ನಿಮ್ಮ ಕೋಣೆಯಲ್ಲಿ ಹನುಮನ ಕಾಳಿ ಮಾತೆಯ ಹಾಗೂ ಶಿವನ ಫೋಟೋ ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳುವುದು ತಪ್ಪು ದೇವರ ಫೋಟೋ ದೇವಸ್ಥಾನದಲ್ಲಿ(Temple) ಅಥವಾ ದೇವರ ಕೋಣೆಯಲ್ಲಿ ಇದ್ದರೆ ಮಾತ್ರ ಚಂದ. ಅಪೂರ್ಣ ನಿದ್ದೆಯಲ್ಲಿ ಯಾವತ್ತು ಎದ್ದೇಳಬೇಡಿ ಎದ್ದ ತಕ್ಷಣ ನಿಮ್ಮ ಮುಖದಲ್ಲಿ ನಗುವಿರಲಿ ಅದು ಇಡೀ ದಿನ ನಿಮ್ಮನ್ನು ಉತ್ಸಾಹ ಭರಿತರನ್ನಾಗಿ ಮಾಡುತ್ತದೆ. ತಪ್ಪದೇ ಈ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಇನ್ನಷ್ಟು ಜನರ ಪ್ರತಿನಿತ್ಯ ಶುಭವಾಗುವಂತೆ ಸಹಾಯ ಮಾಡಿ.

Leave A Reply

Your email address will not be published.

error: Content is protected !!