Sunil Shetty ಮಗಳ ಮದುವೆಯಲ್ಲಿ ಸುನೀಲ್ ಶೆಟ್ಟಿ ಹಾಕಿಕೊಂಡಿದ್ದ ವಾಚ್ ಬೆಲೆ ಕೇಳಿದ್ರೆ ನಡಗ್ತೀರಾ! ಒಂದು ಬಂಗಲೇನೆ ಖರೀದಿಸಬಹುದು.

Sunil Shetty ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಮಂಗಳೂರು ಮೂಲದ ಸಂಜಾತ ಆಗಿರುವ ಸುನಿಲ್ ಶೆಟ್ಟಿ ಅವರು ಇತ್ತೀಚಿಗಷ್ಟೇ ತಮ್ಮ ಮಗಳು ಹಾಗೂ ಬಾಲಿವುಡ್ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಗಿರುವ ಅಥಿಯಾ ಶೆಟ್ಟಿ ರವರನ್ನು ಕನ್ನಡ ಮೂಲದ ಭಾರತ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ಆಗಿರುವ ಕೆ ಎಲ್ ರಾಹುಲ್ ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯನ್ನು ಅತ್ಯಂತ ಆಪ್ತ ವಲಯದವರ ಸಮ್ಮುಖದಲ್ಲಿ ಸುನಿಲ್ ಶೆಟ್ಟಿ ತಮ್ಮ ಖಂಡಾಲ ಫಾರ್ಮ್ ಹೌಸ್ ನಲ್ಲಿ(Farm House) ನೆರವೇರಿಸಿದ್ದಾರೆ.

ಮದುವೆ ಅತ್ಯಂತ ಸರಳವಾಗಿ ಕೆಲವೇ ಕೆಲವು ಆಪ್ತೇಷ್ಟರ ಸಮ್ಮುಖದಲ್ಲಿ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಫೋಟೋ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಹಲ್ಚಲ್ ಸೃಷ್ಟಿಸುತ್ತಿದೆ. ಇನ್ನು ಮದುವೆ ಆದ ನಂತರ ನವದಂಪತಿಗಳಿಗೆ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗರಾಗಿರುವ ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಕೂಡ ಅತ್ಯಂತ ದುಬಾರಿ(Expensive) ಬೆಲೆಯ ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವ ಸುದ್ದಿಗಳನ್ನು ಕೂಡ ಸುನಿಲ್ ಶೆಟ್ಟಿ ತಳ್ಳಿ ಹಾಕಿದ್ದಾರೆ.

Suniel shetty daughter marriage

ಎಲ್ಲದಕ್ಕಿಂತ ಪ್ರಮುಖವಾಗಿ ಸುನಿಲ್ ಶೆಟ್ಟಿ ಅವರು ಕೂಡ ತಮ್ಮ ಅಳಿಯ ಹಾಗೂ ಮಗಳಿಗಿಂತ ಕಡಿಮೆ ಏನಿಲ್ಲ ಎನ್ನುವಂತೆ ಮದುವೆಯಲ್ಲಿ ಸಾಂಪ್ರದಾಯಿಕ(Traditional) ಉಡುಪನ್ನು ತೊಟ್ಟು ಮಿಂಚಿದ್ದರು. ಅವರ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದಕ್ಕೂ ಮಿಗಿಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ಅವರು ತಮ್ಮ ಕೈಗೆ ಕಟ್ಟಿರುವ ವಾಚ್ ಹಾಗೂ ಅದರ ಬೆಲೆ. ಈ ವಾಚ್ ಬೆಲೆಯಲ್ಲಿ ಒಂದು ದೊಡ್ಡ ಮನೆಯನ್ನೇ ಕಟ್ಟಿಸಬಹುದು ಎನ್ನುದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

ಹೌದು ಗೆಳೆಯರೇ ಸುನಿಲ್ ಶೆಟ್ಟಿ ಮದುವೆಯಲ್ಲಿ ಕೈಗೆ ತೊಟ್ಟಿರುವ ವಾಚ್ ಹಬ್ಲೋಟ್(Hublot) ಕಂಪೆನಿಯ ಏರೋಫ್ಯೂಷನ್ ಮೂನ್ ಫೇಸ್ ಕಿಂಗ್ ಆಗಿದೆ. ಇನ್ನು ಇದರ ಬೆಲೆ ಕೂಡ ಭರ್ಜರಿ 28 ಲಕ್ಷ ರೂಪಾಯಿಗೂ ಅಧಿಕ ಎಂಬುದಾಗಿ ತಿಳಿದು ಬಂದಿದೆ‌‌‌‌. ಕೆಲವರು ಇದರ ಬೆಲೆಯನ್ನು ಕೇಳಿ ಮೂಗಿನ ಮೇಲೆ ಕೈ ಇಟ್ಟರೆ ಇನ್ನು ಕೆಲವರು ಮಾತ್ರ ನನ್ನ ನೂರು ರೂಪಾಯಿ ವಾಚಿನಲ್ಲಿ ಕೂಡ ಇದೇ ರೀತಿ ಟೈಮ್ ತೋರಿಸುತ್ತದೆ ಅದಕ್ಕೆ ಯಾಕೆ ಇಷ್ಟೊಂದು ಖರ್ಚು ಮಾಡಿದ್ರಿ ಅಣ್ಣ ಎಂಬುದಾಗಿ ಸುನಿಲ್ ಶೆಟ್ಟಿ ಅವರನ್ನು ಕೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!