ಸೂರ್ಯದೇವನ ಕೃಪೆಯಿಂದ ಈ 4 ರಾಶಿಗಳಿಗೆ ಒಂದು ತಿಂಗಳು ಭಾರಿ ಅದೃಷ್ಟ..

Kannada Horoscope September Month: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹವು ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಪ್ರವೇಶ ಮಾಡಿದಾಗ, ಆ ಗ್ರಹದ ಸಂಚಾರದ ಪರಿಣಾಮ ಆ ರಾಶಿಯ ಮೇಲೆ ಬೀರುತ್ತದೆ. ಜೊತೆಗೆ ಎಲ್ಲ 12 ರಾಶಿಗಳ ಮೇಲು ಪರಿಣಾಮ ಬೀರುತ್ತದೆ. ಇದು ಸಕಾರಾತ್ಮಕ ಪರಿಣಾಮ ಆಗಿರಬಹುದು ಅಥವಾ ನಕಾರಾತ್ಮಕ ಪರಿಣಾಮ ಆಗಿರಬಹುದು. ಇದೀಗ ಸೆಪ್ಟೆಂಬರ್ 17ರಂದು ಸೂರ್ಯದೇವನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದಾನೆ, ಕನ್ಯಾ ರಾಶಿಯಲ್ಲಿ ಈಗಾಗಲೇ ಮಂಗಳ ಇದ್ದಾನೆ. ಇನ್ನು ಸೂರ್ಯನು ಆಕ್ಟೊಬರ್ 17ರ ವರೆಗು ಇದೇ ರಾಶಿಯಲ್ಲೇ ಇರಲಿದ್ದು, ಸೂರ್ಯನ ಈ ಸಂಚಾರದಿಂದ 4 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಆ ನಾಲ್ಕು ರಾಶಿಗಳು ಯಾವುವು? ಅವುಗಳ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಸಿಂಹ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಮೇಲೆ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ. ಈ ವೇಳೆ ಖರ್ಚು ಜಾಸ್ತಿ ಆಗಿದೆ ಎನ್ನಿಸಿದರು ಕೂಡ, ಅದರಿಂದ ನಿಮಗೆ ಒಳ್ಳೆಯದಾಗುತ್ತದೆ. ಈ ಖರ್ಚು ನಿಮ್ಮ ಮನೆಯಲ್ಲೇ ಪೂಜೆ ಪುನಸ್ಕಾರಗಳಿಗೆ ಉಪಯೋಗ ಆಗುವ ಹಾಗೆ ಆಗುತ್ತದೆ. ವಾಹನ ಅಥವಾ ಆಸ್ತಿ ಖರೀದಿ ಮಾಡಲು ಇದು ಸರಿಯಾದ ಸಮಯ. ಹೂಡಿಕೆ ಮಾಡುವುದಕ್ಕೂ ಇದು ಸೂಕ್ತ ಸಮಯ ಆಗಿದೆ.

Kannada Horoscope September Month

ತುಲಾ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಕೂಡ ಒಳ್ಳೆಯ ಪರಿಣಾಮ ಬೀರುತ್ತದೆ. ಈ ವೇಳೆ ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಬೇರೆ ಕಡೆ ಸೇರಿಕೊಂಡಿರುವ ನಿಮ್ಮ ಹಣ ವಾಪಸ್ ನಿಮ್ಮ ಕೈಸೇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಈ ಸಮಯದಲ್ಲಿ ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗುತ್ತದೆ.

ಧನು ರಾಶಿ :- ನಿಮಗೂ ಕೂಡ ಸೂರ್ಯನ ಸ್ಥಾನ ಬದಲಾವಣೆ ಇಂದ ಒಳ್ಳೆಯ ಫಲ ಸಿಗುತ್ತದೆ. ಒಳ್ಳೆಯ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಮನೆಯಲ್ಲಿ ನಡೆಯಬೇಕಾದ ಪುಣ್ಯ ಕಾರ್ಯಗಳನ್ನು ನೀವೇ ನಡೆಸುತ್ತೀರಿ. ಈ ವೇಳೆ ತಂದೆ ತಾಯಿಯ ಸಪೋರ್ಟ್ ಸಿಗುತ್ತದೆ. ದೇವರಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿಮಗೆ ಆಸಕ್ತಿ ಶುರುವಾಗುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಮಾಧುರ್ಯತೆ ಇರುತ್ತದೆ, ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಈ ರಾಶಿಯವರ ಮೇಲೆ ಕೂಡ ಉತ್ತಮ ಪ್ರಭಾವ ಬೀರುತ್ತದೆ. ಒಂದು ವೇಳೆ ಈ ರಾಶಿಯವರಿಗೆ ನೆಗಟಿವ್ ಪ್ರಭಾವ ನಡೆಯುತ್ತಿದ್ದರೆ, ಇನ್ನುಮುಂದೆ ಅದು ಪಾಸಿಟಿವ್ ಆಗುತ್ತದೆ. ಬ್ಯುಸಿನೆಸ್ ನಲ್ಲಿ ದಿಢೀರ್ ಧನಲಾಭ ಪಡೆಯುತ್ತೀರಿ. ನೀವು ಪಡುವ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ಸಿಗುತ್ತದೆ. ಬ್ಯುಸಿನೆಸ್ ನಲ್ಲಿರುವ ವಾತಾವರಣದಿಂದ ನಿಮಗೆ ಸಂತೋಷವಾಗುತ್ತದೆ.

Leave a Comment

error: Content is protected !!