After Life: ಮರಣ ಹೊಂದಿದ ನಂತರ ಆತ್ಮ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

After Life ಆತ್ಮ ಹಾಗೂ ದೇಹ ಎರಡು ಬೇರೆ ಬೇರೆ ವಿಚಾರಗಳು ಎನ್ನುವುದನ್ನು ನಾವು ನಮ್ಮ ಪುರಾತನ ಗ್ರಂಥಗಳ(Ancient Literature) ಮುಖಾಂತರ ತಿಳಿದ ಕೊಂಡಿದ್ದೇವೆ. ಒಂದು ದೇಹದಲ್ಲಿ ತನ್ನ ಕೆಲಸ ಮುಗಿಸಿದ ನಂತರ ಆತ್ಮ ಎನ್ನುವುದು ಬೇರೊಂದು ದೇಹಕ್ಕೆ ಚಲಿಸುತ್ತದೆ ಎಂಬುದು ಪುರಾಣ ಗ್ರಂಥಗಳ ಮುಖಾಂತರ ಸಾಬೀತಾಗಿರುವಂತ‌ಹ ವಿಚಾರವಾಗಿದೆ. ಆತ್ಮವೂ ಕೂಡ ದೇಹದಿಂದ ಹೊರಬರಲು ಸಾಕಷ್ಟು ಕಷ್ಟಪಡುತ್ತದೆ ಯಾಕೆಂದರೆ ದೇಹವನ್ನು ಬಿಟ್ಟು ಹೋಗುವುದು ಅದಕ್ಕೆ ಕೂಡ ಇಷ್ಟ ಇರುವುದಿಲ್ಲ.

ಹೀಗಿದ್ದರೂ ಕೂಡ ಸಮಯ ಬಂದಾದ ಮೇಲೆ ಅಥವಾ ಆ ದೇಹದ ಅವಧಿ ಮುಗಿದ ನಂತರ ಆತ್ಮ(Soul) ಅಲ್ಲಿರಲು ಸಾಧ್ಯವೇ ಇಲ್ಲ. ಗ್ರಂಥಗಳ ಪ್ರಕಾರ ಆತ್ಮ ದೇಹದ ದಹನ ಆದ ನಂತರ ಮೂರರಿಂದ ನಾಲ್ಕು ದಿನಗಳ ಕಾಲ ಚಿ’ ತೆ ಅಥವಾ ತನ್ನ ಸಂಬಂಧಿಕರ ಸಮೀಪದಲ್ಲಿ ಅವರ ಮೇಲಿರುವ ಪ್ರೀತಿ ಹಾಗೂ ಮೋಹಗಳಿಂದ ಓಡಾಡುತ್ತಲೇ ಇರುತ್ತದೆ. ನಂತರ ಮೋಹವನ್ನು ತ್ಯಜಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ.

ಅದಾದ ನಂತರ ಒಂಬತ್ತು ದಿನಗಳ ಕಾಲ ತಾನು ನೋಡಬೇಕೆಂದಿರುವ ಸ್ಥಳಗಳನ್ನು ಹಾಗೂ ಈಗಾಗಲೇ ಓಡಾಡಿರುವ ಪ್ರದೇಶವನ್ನು ತನ್ನ ಪ್ರೀತಿ ಪಾತ್ರರನ್ನು ಹಾಗೂ ತಾನು ಮತ್ತು ತನ್ನನ್ನು ದ್ವೇಷಿಸಿರುವವರನ್ನು ಎಲ್ಲರನ್ನೂ ಕೂಡ ನೋಡುತ್ತದೆ ಹಾಗೂ ನನಗಾಗಿ ಇನ್ನೂ ಕೂಡ ಬೇಸರ ಪಡುತ್ತಿರುವವರಿಗೆ ದುಃಖ ಪಡುತ್ತದೆ.

ಕೊನೆಯ ಸಂಸ್ಕಾರ(Final Rites) ಹಾಗೂ ಎಲ್ಲಾ ರೀತಿಯ ಶಾಸ್ತ್ರಗಳು ವಿಧಿ ವಿಧಾನದಂತೆ ನೆರವೇರಿದ ನಂತರ ಈ ಭೂಮಿಯಲ್ಲಿ ನನ್ನ ಎಲ್ಲಾ ಋಣ ತೀರಿತೆಂದು ಭಾವಿಸಿ ಆತ್ಮವು ಬೇರೊಂದು ದೇಹದ ಮೂಲಕ ಮರು ಹುಟ್ಟು ಪಡೆಯುತ್ತದೆ. ಇದು ನಡೆಯುವುದು 11ನೇ ದಿನದ ನಂತರ. ಇದೇ ಮಿತ್ರರೇ ಆತ್ಮ ದೇಹದಿಂದ ಹೊರಹೋದ ನಂತರ ಆಗುವಂತಹ ಘಟನೆಗಳು.

Leave a Comment

error: Content is protected !!