Chanakya Neethi: ಚಾಣಕ್ಯ ನೀತಿಯ ಪ್ರಕಾರ ಈ 5 ವಿಚಾರಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ.

Chanakya Neethi ಭಾರತದ ಇತಿಹಾಸದಲ್ಲಿ ಮೌರ್ಯ ಸಾಮ್ರಾಜ್ಯವನ್ನು(Mourya Empire) ಕಟ್ಟಿ ಬೆಳೆಸಿದಂತಹ ಚಾಣಕ್ಯರಿಗೆ ಅವರದ್ದೇ ಆದಂತಹ ಒಂದು ಮಹತ್ವದ ಸ್ಥಾನವಿದೆ. ಇವರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಬರೆದಿರುವಂತಹ ವಿಚಾರಗಳು ಇಂದಿಗೂ ಕೂಡ ಪ್ರಸ್ತುತವಾಗಿದ್ದು ಇಂದಿನ ಜೀವನದಲ್ಲಿ ಶ್ರೀಮಂತರಾಗಲು ಬೇಕಾಗುವಂತಹ ಐದು ಅಂಶಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೇದಾಗಿ ಪರಿಶ್ರಮ(Hardwok). ಸುಮ್ಮನೆ ಕೂತು ಕಷ್ಟಪಡದೇ ಶ್ರೀಮಂತರಾಗಲು ಯಾರ ಮೇಲೆ ಕೂಡ ಸಾಧ್ಯವಿಲ್ಲ. ಹೀಗಾಗಿ ಕಷ್ಟಪಟ್ಟರೆ ಮಾತ್ರ ಶ್ರೀಮಂತಿಕೆಯ ಹಾದಿ ನಿಮ್ಮ ಕಣ್ಣಿಗೆ ಕಾಣಬಲ್ಲದು. ಎರಡನೇದಾಗಿ ಶಿಸ್ತು(Discipline). ಶಿಸ್ತಿಲ್ಲದ ಜೀವನ ಹಳಿತಪ್ಪಿದ ರೈಲಿನಂತಾಗುತ್ತದೆ. ಹೀಗಾಗಿ ನೀವು ನಿಮ್ಮ ಜೀವನವನ್ನು ಶಿಸ್ತಿನಿಂದ ನಡೆಸುತ್ತಿದ್ದೀರಿ ಎಂದಾದರೆ ಮಾತ್ರ ಆ ಜೀವನಕ್ಕೊಂದು ನೈತಿಕತೆ ಇರುತ್ತದೆ ಎಂಬುದಾಗಿ ಅಂದುಕೊಳ್ಳಬಹುದಾಗಿದೆ.

ಮೂರನೇದಾಗಿ ಹಣದ ಉಳಿತಾಯ(Money Saving). ನೀವು ಎಷ್ಟೇ ದುಡಿದರೂ ಕೂಡ ಹಣವನ್ನು ಉಳಿತಾಯ ಮಾಡಿಲ್ಲವೆಂದರೆ ಭವಿಷ್ಯದಲ್ಲಿ ಆಗುವಂತಹ ವಿಪತ್ತುಗಳಿಂದ ಪಾರಾಗಲು ಸಾಧ್ಯವಿಲ್ಲ. ಹೀಗಾಗಿ ಹಣ ಉಳಿತಾಯ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವುದು ಮತ್ತೊಂದು ಪ್ರಮುಖ ಅಂಶವಾಗಿದೆ. ರಿಸ್ಕ್ ಇದ್ದಷ್ಟು ಅದಕ್ಕೆ ಸಿಗುವಂತಹ ಬಹುಮಾನಗಳು ಕೂಡ ಅದಕ್ಕಿಂತ ದೊಡ್ಡದಾಗಿರುತ್ತದೆ. ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸುವುದು ಹಾಗೂ ಅದನ್ನು ಗೆಲ್ಲುವುದು ನಿಮ್ಮ ಆತ್ಮವಿಶ್ವಾಸವನ್ನು ಹಾಗೂ ಜೀವನದ ರೀತಿಯಲ್ಲಿ ಬದಲಾಯಿಸುತ್ತದೆ.

ಎಲ್ಲಕ್ಕಿಂತ ಪ್ರಮುಖವಾಗಿ ಹಾಗೂ ಕೊನೆಯದಾಗಿ ನೀವು ಸಂಪಾದಿಸುವಂತಹ ಹಣದ ಸರಿಯಾದ ಬಳಕೆ ಮಾಡುವುದನ್ನು ಕಲಿಯಬೇಕು. ಸರಿಯಾದ ಕಡೆಗಳಲ್ಲಿ ನಿಮ್ಮ ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಿದಲ್ಲಿ ಮಾತ್ರ ಅದರಿಂದ ನೀವು ಇನ್ನಷ್ಟು ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Leave a Comment

error: Content is protected !!