Culture: ಬೆಳಗ್ಗೆ ಎದ್ದ ತಕ್ಷಣ ನಾವು ಮಾಡಬೇಕಾದಂತಹ ಕಾರ್ಯಗಳೇನು. ಚಾಣಕ್ಯರೇ ಹೇಳಿದ ಮಾತಿದು.

Chanakaya Neethi ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಷ್ಟಪಡಬೇಕು ದುಡಿಯಬೇಕು ಎಂಬುದಾಗಿ ಭಾವಿಸುತ್ತಾರೆ ಆದರೆ ಎಲ್ಲದಕ್ಕೂ ಕೂಡ ನಮ್ಮ ಬೆಳಗಿನ ಆರಂಭ ಎನ್ನುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ನಮ್ಮ ದಿನ ಒಳ್ಳೆಯದಾಗಲು ಬೆಳಗ್ಗೆ ಎದ್ದ ತಕ್ಷಣ ನಾವೆಲ್ಲರೂ ಏನು ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ. ಮಹಾ ಮೇಧಾವಿಗಳಾಗಿರುವ ಚಾಣಕ್ಯರೆ(Chanakya) ತಮ್ಮ ಗ್ರಂಥದಲ್ಲಿ ಇದನ್ನೆಲ್ಲಾ ಬರೆದಿಟ್ಟಿದ್ದಾರೆ.

ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಎರಡು ಕರಗಳನ್ನು ಉಜ್ಜಿಕೊಂಡು ಕರಾಗ್ರೆ ವಸತಿ ಕರಮಧ್ಯ ಸರಸ್ವತಿ ಮಂತ್ರವನ್ನು ಹೇಳಬೇಕಾಗಿದೆ. ಇದರಿಂದಾಗಿ ನಿಮ್ಮ ದಿನ ದೈವಿಕ ಅನುಭವದಿಂದ ಪ್ರಾರಂಭವಾಗುತ್ತದೆ. ಇದಾದ ನಂತರ ಮೊದಲಿಗೆ ಸೂರ್ಯ ನಮಸ್ಕಾರ ದಂತಹ ವ್ಯಾಯಾಮಗಳನ್ನು ಮಾಡುವುದು ದೈಹಿಕ ಶಕ್ತಿಯ ಪುನಶ್ಚೇತನಕ್ಕೆ ಕಾರಣವಾಗುತ್ತದೆ.

ಅದಾದ ನಂತರ ಆದಷ್ಟು ಬೇಗ ಶುಚಿಯಾಗಿ ನಿಮ್ಮ ದೈಹಿಕ ಸುಚಿತ್ವವನ್ನು ಕಾಪಾಡಿಕೊಳ್ಳುವುದು ಕೂಡ ಪ್ರಮುಖ ಆರಂಭವಾಗಿದೆ. ಸರಿಯಾದ ಸಮಯಕ್ಕೆ ತಿಂಡಿಯನ್ನು ತಿಂದು ನೀವು ಮಾಡುವಂತಹ ಕೆಲಸದ ಯೋಚನೆ ಹಾಗೂ ಯೋಜನೆಯನ್ನು ಅದಕ್ಕೂ ಹೊರಡುವ ಮುನ್ನವೇ ನಿಮ್ಮ ತಲೆಯಲ್ಲಿ ಯೋಚಿಸಿ ಇಟ್ಟುಕೊಳ್ಳುವುದು ಉತ್ತಮ. ಮನೆಯಿಂದ ಹೊರಗೆ ಹೊರಡುವ ಮುನ್ನ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಳ್ಳಿ.

ಇವಿಷ್ಟನ್ನು ಮಾಡಿದರೆ ಖಂಡಿತವಾಗಿ ನಿಮ್ಮ ಇಡೀ ದಿನದ ಆರಂಭ ಎನ್ನುವುದು ಅತ್ಯಂತ ಅರ್ಲಾದಕರವಾಗಿ ಪ್ರಾರಂಭವಾಗುತ್ತದೆ ಹಾಗೂ ಇಡೀ ದಿನ ಖಂಡಿತವಾಗಿ ನಿಮಗೆ ಉತ್ತಮ ಲಾಭವನ್ನು ನೀಡುವಂತಹ ಘಟನೆಗಳೇ ಹೆಚ್ಚಾಗಿ ನಡೆಯುತ್ತವೆ ಎಂದು ಚಾಣಕ್ಯ ಗ್ರಂಥದಲ್ಲಿ ಚಾಣಕ್ಯರು ವಿವರಿಸಿದ್ದಾರೆ.

Leave a Comment

error: Content is protected !!