Hanuman Jayanthi: ನಿಮ್ಮ ಕಷ್ಟಗಳು ಪರಿಹಾರ ಕಾಣಲು ಹನುಮ ಜಯಂತಿಯಂದು ಈ ಕೆಲಸವನ್ನು ಮಾಡಿ ಖಂಡಿತ ಒಳ್ಳೆಯದಾಗುತ್ತದೆ!

Hanuma Jayanthi ಬೇರೆಲ್ಲ ದೇವರನ್ನು ನಾವು ದೇವರು ಎನ್ನುವ ರೀತಿಯಲ್ಲಿ ಭಯ ಭಕ್ತಿ ಗೌರವಗಳಿಂದ ಪೂಜಿಸುತ್ತೇವೆ ಆದರೆ ಹನುಮಂತನನ್ನು ಮಾತ್ರ ನಮ್ಮ ಸ್ನೇಹಿತ ನಮ್ಮದೇ ಒಳನಾಡಿ ಎನ್ನುವ ರೀತಿಯಲ್ಲಿ ದೇವರಿಗಿಂತ ಹೆಚ್ಚಾಗಿ ಆತ್ಮೀಯವಾಗಿ ಪ್ರೀತಿಸುತ್ತೇವೆ ಹಾಗೂ ಪೂಜಿಸುತ್ತೇವೆ. ಇದು ನಿನ್ನೆ ಇವತ್ತಿನಿಂದ ಪ್ರಾರಂಭವಾಗಿರುವಂತಹ ಪದ್ಧತಿಯಲ್ಲ ಅನಾದಿಕಾಲದಿಂದಲೂ ಕೂಡ ಹನುಮಂತನನ್ನು(Hanumantha) ಹೀಗೆ ನಾವು ಪೂಜಿಸುತ್ತಿದ್ದೇವೆ.

ಇನ್ನು ಇದೇ ಏಪ್ರಿಲ್ ಆರರಂದು ಅಂದರೆ ನಾಳೆ ಹನುಮ ಜಯಂತಿ(Hanuma Jayanthi) ಅಂದರೆ ಹನುಮನ ಜನ್ಮದಿನವನ್ನು ಆಚರಿಸುವಂತಹ ಹಬ್ಬ ಇದ್ದು ಈ ಸಂದರ್ಭದಲ್ಲಿ ಯಾವೆಲ್ಲ ಕೆಲಸ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಹಾಗೂ ನಮ್ಮ ಗ್ರಹಚಾರಗಳು ಕಳೆದು ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಪ್ರತಿ ದಿನ ಅದರಲ್ಲೂ ವಿಶೇಷವಾಗಿ ಮಂಗಳವಾರ ಹನುಮಾನ್ ಚಾಲೀಸಾ(Hanuman Chalisa) ವನ್ನು ಪಠಿಸುವುದರಿಂದ ಹನುಮಾನ ಪ್ರೀತಿಗೆ ನಾವು ಪಾತ್ರರಾಗುತ್ತೇವೆ. ಕಷ್ಟದಲ್ಲಿರುವವರಿಗೆ ಸಹಾಯ ಹಾಗೂ ರೋಗಿಗಳ ಸೇವೆ ಮಾಡುವುದರಿಂದ ಕೂಡ ಹನುಮನ ಕೃಪೆಗೆ ಪಾತ್ರರಾಗಬಹುದು. ಹನುಮ ಜಯಂತಿಯ ದಿನದಂದು ಹನುಮನಿಗೆ ತುಪ್ಪದ ದೀಪವನ್ನು ಹಚ್ಚಿ ಪೂಜೆ ಮಾಡುವುದರ ಮೂಲಕ ಆತನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ಹನುಮನ ಚಿತ್ರಪಟ ಇರುವಂತಹ ಬಾವುಟವನ್ನು ನೀವು ವ್ಯಾಪಾರ ಮಾಡುವಂತಹ ವ್ಯಾಪಾರದ ಸ್ಥಳದಲ್ಲಿ ಅಥವಾ ನಿಮ್ಮ ಮನೆಯ ಮೇಲೆ ಇಟ್ಟರೆ ಸಾಕು ಅನುಮಾನ ಕೃಪೆ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದವರ ಮೇಲೆ ಬಿದ್ದು ಒಳ್ಳೆಯ ದಿನಗಳನ್ನು ನೀವು ಕಾಣಲು ಸಾಧ್ಯ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹಾಗೂ ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ತಪ್ಪದೆ ಹನುಮ ಜಯಂತಿ(Hanuman Jayanthi) ಎಂದು ಅನುಮಾನ ವಿಶೇಷ ಪೂಜೆಯನ್ನು ಮಾಡುವ ಮೂಲಕ ಹನುಮನ ಕೃಪೆಗೆ ಪಾತ್ರರಾಗಿ ಹಾಗೂ ಜೀವನದಲ್ಲಿ ಉನ್ನತಿಯನ್ನು ಸಾಧಿಸಿ.

Leave a Comment

error: Content is protected !!