Yash 19: ನರ್ತನ್ ಹೋದ್ರು ಮತ್ತೊಬ್ರು ಬಂದ್ರು! ಯಶ್ ಅವರ ಮುಂದಿನ ಸಿನಿಮಾದ ಡೈರೆಕ್ಟರ್ ಇವ್ರೆ ಅಂತೆ?

Rocking Star Yash ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವೇ ಕಳೆದಿದ್ದರೂ ಕೂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಇಂದಿಗೂ ಕೂಡ ಎಲ್ಲಾ ಕಡೆ ಗೊಂದಲಗಳೆ ತುಂಬಿರುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಯಶ್(Yash) ಅಭಿಮಾನಿಗಳು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ರಾಕಿ ಬಾಯ್ ಮುಂದಿನ ನಡೆ ಏನು ಎಂಬುದರ ಕುರಿತಂತೆ, ಚಿಂತಾಕ್ರಾಂತವಾಗಿದೆ.

ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ರವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಊಹಾಪವುಗಳು ಕೂಡ ಓಡಾಡುತ್ತಿರುವುದು ಈ ಚಿಂತೆ ಹೆಚ್ಚಾಗಲು ಮತ್ತೊಂದು ಕಾರಣ ಎನಿಸುವಂತೆ ಕಂಡುಬರುತ್ತಿದೆ. ಮೊದಲಿಗೆ ನರ್ತನ್(Narthan) ರವರ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ರೇಂಜ್ ನಲ್ಲಿ ಸಿನಿಮಾ ಮೂಡಿಬರಲಿದೆ ಎನ್ನುವುದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆದರೆ ಅವರು ಬೈರತಿ ರಣಗಲ್(Bhairathi Ranagal) ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂದು ಅಧಿಕೃತವಾಗಿ ಅನೌನ್ಸ್ ಆಗುವ ಮೂಲಕ ಅದು ಕೂಡ ಸುಳ್ಳಾಯಿತು.

ಈಗ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಸಿನಿಮಾವನ್ನು ಕೆ ವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಅದರ ನಿರ್ದೇಶಕರು ಕೂಡ ಬದಲಾಗಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ ಆದರೆ ಇದು ಎಷ್ಟರ ಮಟ್ಟಿಗೆ ನಂಬಲು ಸಾಧ್ಯ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು ಆದರೂ ಕೂಡ ಆ ನಿರ್ದೇಶಕ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ರೋಬೋ ಸೇರಿದಂತೆ ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಸ್ಟಾರ್ ನಿರ್ದೇಶಕ ಆಗಿರುವ ಶಂಕರ್ ರವರು ಯಶ್ ಅವರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಸದ್ಯಕ್ಕೆ ಅವರು ಕಮಲ್ ಹಾಸನ್(Kamal Haasan) ನಟನೆಯ INDIAN 2 ಸಿನಿಮಾದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬಿಜಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!