Chanakya Neethi: ಈ ಲಕ್ಷಣಗಳು ಪುರುಷನಲ್ಲಿದ್ದರೆ ಮಹಿಳೆಯರು ಅವರೇ ನಿಮ್ಮ ಹಿಂದೆ ಬರ್ತಾರೆ! ಯಾವ ಗುಣಲಕ್ಷಣಗಳು ಇಲ್ಲಿವೆ ನೋಡಿ.

Chanakya Neethi ಇತಿಹಾಸ ಪ್ರಸಿದ್ಧ ಮೇಧಾವಿಯಾಗಿರುವಂತಹ ಚಾಣಕ್ಯರ ಗ್ರಂಥ(Chanakya Grantha) ಹಾಗೂ ವಿಚಾರಧಾರೆಗಳು ಇಂದಿನ ಕಲಿಯುಗದಲ್ಲಿ ಕೂಡ ಪ್ರಸ್ತುತ ಎನಿಸುವಂತಿದೆ ಎಂದರೆ ತಪ್ಪಾಗಲಾರದು. ಇನ್ನು ಅವರು ಬರೆದಿಟ್ಟಿರುವಂತಹ ಚಾಣಕ್ಯ ನೀತಿ ಗ್ರಂಥದಲ್ಲಿ ಯಶಸ್ವಿ ಹಾಗೂ ಎಲ್ಲರೂ ಮೆಚ್ಚುವಂತಹ ಜೀವನವನ್ನು ನಡೆಸಲು ಯಾವ ರೀತಿಯ ಗುಣಗಳನ್ನು ಹೊಂದಿರಬೇಕು ಎಂಬುದಾಗಿ ಬರೆದಿದ್ದಾರೆ. ಅದನ್ನೇ ಅನುಸರಿಸಿ ಇಂದಿಗೂ ಕೂಡ ಹಲವಾರು ಯಶಸ್ವಿ ವ್ಯಕ್ತಿಗಳು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಇನ್ನು ಇಂದಿನ ಲೇಖನಿಯಲ್ಲಿ ನಾವು ಚಾಣಕ್ಯ(Chanakya) ಗ್ರಂಥದ ಪ್ರಕಾರ ಯಾವೆಲ್ಲಾ ಗುಣಗಳು ಇದ್ದರೆ ಮಹಿಳೆಯರು ಪುರುಷರನ್ನು ಮೆಚ್ಚುತ್ತಾರೆ ಅಥವಾ ಇಷ್ಟ ಪಡುತ್ತಾರೆ ಎನ್ನುವ ವಿಚಾರದ ಕುರಿತಂತೆ ತಿಳಿಯೋಣ. ಮೊದಲಿಗೆ ಪುರುಷರ ಪ್ರಾಮಾಣಿಕ ಗುಣ ಎನ್ನುವುದು ಮಹಿಳೆಯರಿಗೆ ಪುರುಷರನ್ನು ಆಕರ್ಷಿಸಲು ಇರುವಂತಹ ಪ್ರಮುಖವಾದ ಗುಣಾಂಶ ಎಂದು ಹೇಳಬಹುದಾಗಿದೆ.

ಇನ್ನು ಯಾವತ್ತೂ ಕೂಡ ಸುಳ್ಳು ಹೇಳದಂತಹ ಪುರುಷರನ್ನು ಕೂಡ ಮಹಿಳೆಯರ ಸಾಕಷ್ಟು ಇಷ್ಟಪಡುತ್ತಾರೆ. ಪ್ರತಿಯೊಂದು ಸಂದರ್ಭಗಳಲ್ಲಿ ಮಹಿಳೆಯರನ್ನು ಗೌರವದಿಂದ ಮಾತನಾಡಿಸುವಂತಹ ಪುರುಷರು ಕೂಡ ಮಹಿಳೆಯರಿಗೆ(Womens) ಆಕರ್ಷಿತರಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ಮಹಿಳೆ ಕೂಡ ತಾನು ತನ್ನ ನೆಚ್ಚಿನ ಪುರುಷನಿಂದ ಗೌರವದಿಂದ ನಡೆಸಿಕೊಳ್ಳಬೇಕು ಎನ್ನುವುದನ್ನು ಅಪೇಕ್ಷಿಸುತ್ತಾಳೆ.

ತನ್ನ ಪ್ರತಿಯೊಂದು ಮಾತುಗಳನ್ನು ಕೂಡ ಮಹಿಳೆ ತನ್ನ ನೆಚ್ಚಿನ ಪುರುಷ ಕೇಳಬೇಕು ಎನ್ನುವುದಾಗಿ ಅಪೇಕ್ಷಿಸುತ್ತಾರೆ. ಬೇರೆಯವರೊಂದಿಗೆ ಅವನ ನಡವಳಿಕೆ ಹೇಗಿರುತ್ತದೆ ಎನ್ನುವುದರ ಕುರಿತಂತೆ ಕೂಡ ನಿಗಾ ವಹಿಸುತ್ತಾರೆ. ಇವುಗಳನ್ನೆಲ್ಲ ಪರೀಕ್ಷಿಸಿದ ನಂತರವೇ ಪುರುಷರತ್ತ ಮಹಿಳೆ ಆಕರ್ಷಿತವಾಗುತ್ತಾಳೆ ಎಂಬುದಾಗಿ ಚಾಣಕ್ಯರು(Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.

Leave a Comment

error: Content is protected !!