ನವರಸ ನಾಯಕ ಜಗ್ಗೇಶ್ ಅವರು ಸಿನಿಮಾಗಿಂತಲೂ ಕಿರುತೆರೆಯಲ್ಲಿ ಪಡೆಯುವ ಸಂಭಾವನೆ ಕೇಳಿ ಅವರ ಹೆಂಡತಿಯೇ ಶಾಕ್??

ನಟ ನಟಿಯರು ತಮ್ಮ ಅಭಿನಯಕ್ಕಾಗಿ, ನಿರೂಪಣೆಗಾಗಿ, ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎಂಬ ವಿಚಾರವಾಗಿ ವೀಕ್ಷಕರಿಗೆ ಕುತೂಹಲವಿರುತ್ತದೆ. ಆದರೆ ಕಿರುತೆರೆಯವರಿರಲಿ, ಚಿತ್ರರಂಗದ ಕಲಾವಿದರಿರಲಿ ಈ ವಿಚಾರವನ್ನು ಬಹಿರಂಗವಾಗಿ ಮಾತನಾಡುವುದು ಕಡಿಮೆ. ಜಗ್ಗೇಶ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ.

ತೋತಾಪುರಿ ಸಿನಿಮಾದಲ್ಲಿ ನಟ ಜಗ್ಗೇಶ್ ಅವರು ಮುದ್ದಾದ ನಗುಮುಖದ ನಟಿ, ಅದಿತಿ ಪ್ರಭುದೇವ ಅವರೊಂದಿಗೆ ತೆರೆ ಹಂಚಿಕೊಂಡಿದ್ದು, ಸಿನಿಮಾದ ರಿಲೀಸ್ ಸಮಯದಲ್ಲಿ ರಾಜ್ಯಾದ್ಯಂತ ಪ್ರಮೋಶನ್ ಕಾರ್ಯವನ್ನು ಮಾಡಿದ್ದರು. ಇದೇ ವೇಳೆ ಆಯೋಜಿಸಲಾದ ಪ್ರೆಸ್ ಮೀಟ್ ಒಂದರಲ್ಲಿ ತಮ್ಮ ಸಂಭಾವನೆಯನ್ನು ರಿವೀಲ್ ಮಾಡಿರುವ ತಮ್ಮ ಸಂಭಾವನೆಯನ್ನು ರಿವೀಲ್ ಮಾಡಿರುವ ಜಗ್ಗೇಶ್ ಅವರು ‘ತೋತಾಪುರಿ ಸಿನಿಮಾವನ್ನು ನೋಡಿ, ಪ್ರೋತ್ಸಾಹಿಸಿ, ನಮ್ಮನ್ನು ಹಾರೈಸಿ’ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ನಟಿಸಿದರೆ ಜಗ್ಗೇಶ್ ಅವರು ಸುಮಾರು ಎರಡು ಕೋಟಿ ಸಂಭಾವನೆ ಪಡೆಯುತ್ತಾರೆ. ‘ಸಿನಿಮಾಗಿಂತಲೂ ಟಿವಿ ಮಾಧ್ಯಮಗಳಲ್ಲಿಯೇ ನನಗೆ ಹೆಚ್ಚು ಸಂಭಾವನೆ ದೊರಕುತ್ತದೆ. ವರ್ಷಕ್ಕೊಂದೆರೆಡು ಸಿನಿಮಾ ಮಾಡುತ್ತೇನೆ. ರಿಯಾಲಿಟಿ ಶೋನಿಂದ 3 ಕೋಟಿ ಸಂಭಾವನೆ ಸಿಗುತ್ತದೆ. ನಾನು ನನ್ನ ಹೆಂಡತಿ ನನ್ನ ಮಕ್ಕಳು ಸುಖವಾಗಿ, ನೆಮ್ಮದಿಯಿಂದ ಜೀವಿಸಲು ಇಷ್ಟು ಸಾಕು. ಜೀವನಕ್ಕಾಗಿ ಒಂದು ಒಳ್ಳೆಯ ಉದ್ಯೋಗವಿರುವಾಗ ಹೆಚ್ಚೇನೂ ಬೇಡ’ ಎಂದು ಮಾಧ್ಯಮದ ಎದುರಲ್ಲಿ ನವರಸ ನಾಯಕರಾದ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.

ನಟ ಜಗ್ಗೇಶ್ ಅವರು ಜಿ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ 4 ವೇದಿಕೆಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ 1 ನಿಂದ ಇಲ್ಲಿಯವರೆಗೂ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಾ, ಪ್ರೇಕ್ಷಕರ ಮನರಂಜಿಸುತ್ತಾ ಉತ್ತಮ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ಸಿನಿಮಾರಂಗಗಳಿಗಿಂತ ಕಿರುತೆರೆಯ ಲೋಕದಲ್ಲಿಯೇ ಬಹು ಬೇಡಿಕೆಯ ನಟರಾಗಿ ಜಗ್ಗೇಶ್ ಅವರು ಮಿಂಚುತ್ತಿರುವುದು ಅವರ ಸಂಭಾವನೆಯನ್ನು ಕೇಳಿಯೇ ಖಚಿತವಾಗುತ್ತದೆ.

Leave a Comment

error: Content is protected !!