ಮತ್ತೊಮ್ಮೆ ವೈರಲ್ ಆಯ್ತು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ, ದಂಪತಿಗಳ ಸುಂದರ ಫೋಟೋಸ್!

ಸ್ನೇಹಿತರೆ, ಕಾಂತರಾ(Kantara) ಸಿನಿಮಾದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವಂತಹ ರಿಷಬ್ ಶೆಟ್ಟಿ ಸದ್ಯ ಕಾಂತರಾ ಭಾಗ ಎರಡರ ಕೆಲಸದಲ್ಲಿ ತೊಡಗಿಕೊಂಡಿದ್ದು, ಕನ್ನಡಕ್ಕೆ ಮತ್ತೊಂದು ಡಿವೈನ್ ಬ್ಲಾಕ್ ಬಸ್ಟರ್ ಸಿನಿಮಾ ಕೊಡಲು ಸಕಲ ತಯಾರಿಯನ್ನು ನಡೆಸುತ್ತಿದ್ದಾರೆ. ಹೀಗಿರುವಾಗ ಮೊನ್ನೆ ಅಷ್ಟೇ ಕಾಂತರಾ ಸಿನಿಮಾ ಬಿಡುಗಡೆಗೊಂಡು ಒಂದು ವಾರವನ್ನು ಪೂರೈಸಿದ ಖುಷಿಯಲ್ಲಿ ಪ್ರಗತಿ ಶೆಟ್ಟಿ(Pragathi Shetty) ಇಬ್ಬರು

ಕಾಂತರಾ ಸಿನಿಮಾದ ಮೇಕಿಂಗ್ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸುವುದರ ಜೊತೆಗೆ ತಮ್ಮ ಕನಸಿನ ಸಿನಿಮಾಗೆ ಬಹುದೊಡ್ಡ ಮಟ್ಟದ ಸಕ್ಸಸ್ ನೀಡಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು. ಇದರ ಸೆಲೆಬ್ರೇಶನ್ ಸಮಯದಲ್ಲಿ ಇಬ್ಬರು ಬ್ಲಾಕ್ ಅಂಡ್ ಬ್ಲಾಕ್ ಉಡುಪನ್ನು ಧರಿಸಿ ಫೋಟೋಗೆ ಫೋಸ್ ನೀಡಿದ್ದು ಆ ಕೆಲವು ಫೋಟೋಗಳನ್ನು ರಿಷಬ್ ಪತ್ನಿ

ಪ್ರಗತಿ ಶೆಟ್ಟಿ(Pragathi Shetty) ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಸದಾ ಕಾಲ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವಂತಹ ರಿಷಬ್ ಶೆಟ್ಟಿ ದಂಪತಿಗಳು ಮತ್ತೊಮ್ಮೆ ಟ್ರೆಡಿಶನಲ್ ಆಗಿ ನೆಟ್ಟಿಗರ ಮುಂದೆ ಬಂದಿದ್ದು, ರಿಷಬ್ ಶೆಟ್ಟಿ(Rishab Shetty) ಕಪ್ಪು ಬಣ್ಣದ ಶರ್ಟ್ ಹಾಗೂ ಪಂಚೆ ಧರಿಸಿ ಉದ್ದನೆಯ ಗಡ್ಡ ಹಾಗೂ ಕೂದಲನ್ನು ಬಿಟ್ಟು ಬಹಳ ರಗಡ್ಡಾಗಿ ಕಾಣಿಸಿಕೊಂಡರೆ

ಇತ್ತ ಪ್ರಗತಿ ಶೆಟ್ಟಿಯವರು ಕಪ್ಪು ಹಾಗೂ ಚಿನ್ನ ಮಿಶ್ರಿತವಿರುವ ಸೀರೆಯನ್ನು ಉಟ್ಟು ಬಹಳ ಸುಂದರವಾಗಿ ಕ್ಯಾಮೆರಾದ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಕೆಲ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿರುವ ಪ್ರಗತಿ ಅವರು ಕಪ್ಪು ಮತ್ತು ಚಿನ್ನದಲ್ಲಿ ಕಿರಣವಿರುವ ಹಾಗೆ ನಾವಿಬ್ಬರು ಹೊಳೆಯುತ್ತಿರುತ್ತೇವೆ ಎಂಬ ಕ್ಯಾಪ್ಷನ್ ಬರೆದಿದ್ದಾರೆ.

ಸದ್ಯ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಶೀತಲ್ ಶೆಟ್ಟಿ(Sheetal Shetty) ಸೇರಿದಂತೆ ಮುಂತಾದ ಸೆಲೆಬ್ರಿಟಿಗಳು ಸುಂದರ ದಂಪತಿಗಳ ಫೋಟೋಗೆ ಕಮೆಂಟ್ ಮಾಡುತ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!