Kranti Dboss 7 ದಿನಗಳಲ್ಲಿ ಕ್ರಾಂತಿಗಳಿಸಿದ ಒಟ್ಟಾರೆ ಕಲೆಕ್ಷನ್ ಎಷ್ಟು? ಅಸಲಿಯತ್ತು ಇಲ್ಲಿದೆ ನೋಡಿ.

Kranti Collection ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವಂತಹ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದಿಂದಲೂ ಕೂಡ ಕ್ರಾಂತಿ ಸಿನಿಮಾದ ಕುರಿತಂತೆ ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನ ಕೂಡ ಕ್ರಾಂತಿ ಸಿನಿಮಾ 11 ಕೋಟಿ ಆಸುಪಾಸಿನಲ್ಲಿ ಗ್ರಾಸ್ ಕಲೆಕ್ಷನ್(Gross Collection) ಮಾಡಿತ್ತು. ಒಬ್ಬ ಸ್ಟಾರ್ ನಟನ ರೇಂಜ್ ಗೆ ಇದು ಸರಿಸಮನಾದ ಕಲೆಕ್ಷನ್ ಅಲ್ವೇ ಅಲ್ಲ.

ಸಿನಿಮಾದ ಕಥೆ ಕೂಡ ಸಾಕಷ್ಟು ಪ್ರೇಕ್ಷಕರಿಗೆ ಇಷ್ಟ ಆಗಿರಲಿಲ್ಲ. ಕೇವಲ ಎಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿಯೇ ಕ್ರಾಂತಿ ಸಿನಿಮಾಗಿಂತ ಹೆಚ್ಚಾಗಿ ಹಿಂದಿ ಚಿತ್ರರಂಗದ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಹೆಚ್ಚಾಗಿ ಕಲೆಕ್ಷನ್ ಮಾಡಿತ್ತು ಎಂಬುದಾಗಿ ತಿಳಿದು ಬಂದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಒಬ್ಬ ಸಂಗೀತ ನಿರ್ದೇಶಕನಾಗಿದ್ದ ವಿ ಹರಿಕೃಷ್ಣ ಅವರು ನಿರ್ದೇಶಕನಾಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವಲ್ಲಿ ಕ್ರಾಂತಿ ಸಿನಿಮಾದ ಮೂಲಕ ವಿಫಲರಾಗಿದ್ದಾರೆ(Failed) ಎಂಬುದಾಗಿ ಸಿನಿಮಾ ಪಂಡಿತರು ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

ಹೀಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಾಡಿ ಟ್ರಾನ್ಸ್ಫಾರ್ಮಶನ್(Body Transformation) ಹಾಗೂ ನಟನೆಗೆ ಎಲ್ಲರೂ ಕೂಡ ಫಿದಾ ಆಗಿದ್ದು ಒನ್ ಮ್ಯಾನ್ ಶೋ ಆಗಿ ಕ್ರಾಂತಿ ಸಿನಿಮಾದಲ್ಲಿ ಡಿ ಬಾಸ್ ಮಿಂಚಿದ್ದಾರೆ ಎನ್ನುವುದಾಗಿ ಎಲ್ಲರೂ ಪ್ರಶಂಸೆಯ ಸುರಿಮಳೆಯನ್ನು ಸುರಿಯುತ್ತಿದ್ದಾರೆ. ಇನ್ನು ಒಟ್ಟಾರೆಯಾಗಿ ಒಂದು ವಾರದಲ್ಲಿ ಕ್ರಾಂತಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿರಬಹುದು ಎನ್ನುವ ನೀರಿಕ್ಷೆ ಹಾಗೂ ಕಾತುರತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಲ್ಲಿ ಹಾಗೂ ಸಿನಿಮಾ ರಸಿಕರಲ್ಲಿ ಇದೆ.

ಅಧಿಕೃತ ಹಾಗೂ ನಂಬುಗೆಯ ಮೂಲಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ 37 ರಿಂದ 45 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್(Gross Collection) ಅನ್ನು ವಿಶ್ವಾದ್ಯಂತ ಚಿತ್ರಮಂದಿರಗಳ ಬಾಕ್ಸ್ ಆಫೀಸ್ ನಲ್ಲಿ ಮಾಡಿದೆಯಂತೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದನ್ನು ಚಿತ್ರತಂಡದಿಂದಲೇ ನಾವು ಅಧಿಕೃತವಾಗಿ ಕೇಳಬೇಕಾಗಿದೆ ಆದರೆ ಚಿತ್ರತಂಡ ಇದರ ಕುರಿತಂತೆ ಯಾವುದೇ ವಿಚಾರವನ್ನು ಕೂಡ ಬಿಟ್ಟು ಕೊಟ್ಟಿಲ್ಲ. ಇನ್ನೊಂದು ಕಡೆ ಚಿತ್ರತಂಡ 100 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ಕೇಕ್ ಕ’ಟಿಂಗ್ ಅನ್ನು ಕೂಡ ನೀವು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳ ಮುಖಾಂತರ ನೋಡಿರಬಹುದು. ಯಾವುದನ್ನು ನಂಬಬೇಕು ಅಥವಾ ಬಿಡಬೇಕು ಎನ್ನುವ ನಿರ್ಧಾರ ನಿಮಗೆ ಬಿಟ್ಟಿದ್ದಾಗಿದೆ.

Leave a Comment

error: Content is protected !!