Pathaan ಒಂದೇ ವಾರದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಪಠಾಣ್. ಗಳಿಸಿದ್ದು ಎಷ್ಟು ನೂರು ಕೋಟಿ ಗೊತ್ತಾ?

Pathaan ವಾರ್ ಸಿನಿಮಾ ಅನ್ನು ನಿರ್ದೇಶನ(Direction) ಮಾಡಿದ್ದ ಸಿದ್ಧಾರ್ಥ ಆನಂದ್ ಅವರ ನಿರ್ದೇಶನದಲ್ಲಿಯೇ ಕಿಂಗ್ ಖಾನ್ ನಾಯಕ ನಟನಾಗಿ ನಟಿಸಿರುವ ಪಠಾಣ್ ಸಿನಿಮಾ ಇದೇ ಜನವರಿ 25ರಂದು ಹಿಂದಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿತ್ತು. ನಾಲ್ಕು ವರ್ಷಗಳಿಗೂ ಅಧಿಕಕಾಲದ ನಂತರ ಶಾರುಖ್ ಖಾನ್ ನಾಯಕ ನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಪ್ರೇಕ್ಷಕರು ಮುಗಿ ಬಿದ್ದು ಸಿನಿಮಾವನ್ನು ನೋಡಿದ್ದರು.

ಬಿಡುಗಡೆಗು ಮುನ್ನ ಸಾಕಷ್ಟು ವಿವಾದ ಹಾಗೂ ನೆಗೆಟಿವ್ ಪ್ರಚಾರಗಳಿಂದ ಬಳಲಿದ್ದ ಪಠಾಣ್ ಬಿಡುಗಡೆಯಾದ ನಂತರ ಎದೆಯುಬ್ಬಿಸಿ ಬಾಕ್ಸಾಫೀಸ್ ನಲ್ಲಿ ಗೆದ್ದು ಬೀಗಿತ್ತು. ಎಲ್ಲಾ ಕಡೆ ಮೊದಲ ದಿನವೇ ಪಠಣ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ಹೆಗ್ಗಳಿಕೆಯನ್ನು ಪಡೆಯಿತು. ಪ್ರತಿಯೊಂದು ಕಡೆಗಳಲ್ಲಿ ಸಿನಿಮಾದ ಕುರಿತಂತೆ ಸಕಾರಾತ್ಮಕ ಪ್ರತಿಕ್ರಿಯೆಗಳು ಜನರಿಂದ ಬರಲಾರಂಬಿಸಿದವು. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ ಮತ್ತು ಜಾನ್ ಅಗ್ರಹಂ ವಿಲನ್ ರೂಪದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ್ ಖಾನ್ ಅವರ ಅತಿಥಿಪಾತ್ರ(Guest Appearance) ಚಿತ್ರದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ.

Srk Pathaan

ಈಗಾಗಲೇ ಕೆಜಿಎಫ್ ಚಾಪ್ಟರ್ 2 ಹಾಗೂ ಆರ್ ಆರ್ ಆರ್ ಸಿನಿಮಾಗಳ ದಾಖಲೆಯನ್ನು ಒಂದೊಂದಾಗಿ ಪಠಾಣ್ ಮುರಿಯುತ್ತಿರುವುದು ಮತ್ತೆ ಹಿಂದಿ ಚಿತ್ರರಂಗ ಮರುಜನ್ಮ ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಸದ್ಯದ ಮಟ್ಟಿಗೆ ಮೊದಲ ವಾರಕ್ಕೆ ಪಠಾಣ್ ಸಿನಿಮಾ ಕಲೆಕ್ಷನ್ ಮಾಡಿರುವ ಗಳಿಕೆಯ ಕುರಿತಂತೆ ಪ್ರತಿಯೊಬ್ಬರೂ ಕೂಡ ಕುತೂಹಲ ಭರಿತರಾಗಿದ್ದಾರೆ. ಅಷ್ಟಕ್ಕೂ ಮೊದಲ ವಾರ ಅಂತ್ಯಕ್ಕೆ ಪಠಾಣ್ ಸಿನಿಮಾದ ಕಲೆಕ್ಷನ್(Collection) ಎಷ್ಟಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ, ಬಿಗ್ ಬಜೆಟ್ ಫಿಲಂ ಮೇಕಿಂಗ್ ಸಂಸ್ಥೆ ಆಗಿರುವ ಯಶ್ ರಾಜ್ ಫಿಲಂಸ್ ಸಂಸ್ಥೆಯ ನಿರ್ಮಾಣದಲ್ಲಿ(Productional) ಮೂಡಿ ಬಂದಿರುವ ಪಠಾಣ್ ಸಿನಿಮಾ ಮೊದಲ ವಾರಕ್ಕೆ ಭರ್ಜರಿ 637 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ. ಗೆಲುವಿನ ನಗೆ ಬೀರಿರುವ ಶಾರುಖ್ ಖಾನ್ ನಾಯಕ ನಟನಾಗಿ ನಟಿಸಿರುವ ಪಠಾಣ್ ಸಿನಿಮಾ ಪ್ರತಿಯೊಂದು ವರ್ಗದ ಪ್ರೇಕ್ಷಕರನ್ನು ಕೂಡ ಮೆಚ್ಚಿಸುವ ಮೂಲಕ ಬಾಲಿವುಡ್ ಚಿತ್ರರಂಗದ ಕಡೆಗೆ ಪ್ರೇಕ್ಷಕರ ಒಲವು ಮತ್ತೆ ಹೆಚ್ಚಾಗುವಂತೆ ಮಾಡಿದೆ.

Leave a Comment

error: Content is protected !!