Abhishek Ambareesh: ಮದುವೆಯಾಗಿ ಇನ್ನು ಒಂದು ತಿಂಗಳು ಕಳೆದಿಲ್ಲ ಅದಾಗಲೇ ಅಲ್ಲಿ ಕಾಣಿಸಿಕೊಂಡ ಅಭಿಷೇಕ್ ಅಂಬರೀಶ್.

Abhishek Ambareesh ಕನ್ನಡ ಚಿತ್ರರಂಗದ ಮಂಡ್ಯದ ಗಂಡು ಸ್ಟಾರ್ ಅಂಬರೀಶ್ ಅವರ ಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಇದೇ ಜೂನ್ ಐದರಂದು ಅವಿವಾ ಬಿದಪ್ಪ(Aviva Bidapa) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿದೆ.

ಮಂಡ್ಯದಲ್ಲಿ ಬೀಗರೂಟ ಕೂಡ 50 ಸಾವಿರಕ್ಕೂ ಅಧಿಕ ಜನರ ನಡುವೆ ಕೋಟ್ಯಾಂತರ ರೂಪಾಯಿಗಳ ಖರ್ಚು ವೆಚ್ಚದಲ್ಲಿ ಅದ್ದೂರಿಯಾಗಿ ನಡೆದಿರುವುದು ಕೂಡ ನಿಮಗೆ ತಿಳಿದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ನಾವು ಮಾತನಾಡುತ್ತಿರುವುದು ಇವರಿಬ್ಬರ ಜೋಡಿ ಸಾಕಷ್ಟು ಜನರಿಗೆ ಈ ಮುಂಚೆ ತಿಳಿದಿರಲಿಲ್ಲ ಆದರೆ ಮದುವೆ ನಂತರ ಎಲ್ಲಾ ಕಡೆ ಅವರದ್ದೇ ಸುದ್ದಿ.

ಇನ್ನು ಮದುವೆಯಾದ ನಂತರ ಒಂದು ತಿಂಗಳ ಒಳಗೆ ಅಭಿಷೇಕ್ ಅಂಬರೀಶ್ ಅವರು ಆ ಜಾಗದಲ್ಲಿ ಕಾಣಿಸಿಕೊಂಡಿರುವುದು ಎಲ್ಲಾ ಅಭಿಮಾನಿಗಳಿಗೆ ಆಶ್ಚರ್ಯವನ್ನು ತರಿಸಿದೆ. ಸಾಮಾನ್ಯವಾಗಿ ಮದುವೆ ಆದ ನಂತರ ಸ್ವಲ್ಪ ಸಮಯಗಳ ಕಾಲ ರಿಲ್ಯಾಕ್ಸ್ ಮೂಡ್ ನಲ್ಲಿ ಪ್ರತಿಯೊಬ್ಬ ಸೆಲೆಬ್ರಿಟಿಗಳು ಕೂಡ ಇರುತ್ತಾರೆ. ಆದರೆ ಅಭಿಷೇಕ್ ಅಂಬರೀಶ್ ಹಾಗಲ್ಲ.

ಹೌದು ತಮ್ಮ ಸಿನಿಮಾಗಳ ಪ್ರಿಪರೇಷನ್ ಗಾಗಿ ಅಭಿಷೇಕ್ ಅಂಬರೀಶ್(Abhishek Ambareesh) ರವರು ಈಗ ಮತ್ತೆ ಜಿಮ್ ಕಡೆ ಹೊರಟಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಂತಹ ಫೋಟೋ ತುಣುಕನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅಭಿಷೇಕ್ ಅಂಬರೀಶ್ ರವರು ಸಿನಿಮಾದ ಕುರಿತಂತೆ ಯಾವ ರೀತಿ ನಿಷ್ಠೆಯನ್ನು ಹೊಂದಿದ್ದಾರೆ ಎಂಬುದನ್ನು ಇದರ ಮೂಲಕ ಸಾಬೀತುಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!