Abhishek Ambareesh: ಅಭಿಷೇಕ್ ಅಂಬರೀಶ್ ಅವರ ಮದುವೆ ಯಾವಾಗ ಎಲ್ಲಿ ಹೇಗೆ ನಡೆಯುತ್ತೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್!

Abhishek Ambareesh ರೆಬಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸುಮಲತಾ ಅಂಬರೀಶ್(Sumalatha Ambareesh) ದಂಪತಿಗಳು ಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್ ಈಗಾಗಲೇ ಅಮರ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಾಯಕ ನಟನಾಗಿ ಭರವಸೆಯ ಪ್ರದರ್ಶನವನ್ನು ನೀಡುವ ಮೂಲಕ ತಮ್ಮ ತಂದೆಯ ಲೆಗಸ್ಸಿಯನ್ನು ಚಿತ್ರರಂಗದಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ನಡುವಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ತಮ್ಮ ಬಹುಕಾಲದ ಗೆಳತಿ ಆಗಿರುವಂತಹ ಅವಿವಾ ಬಿದ್ದಪ್ಪ(Aviva Bidapa) ಅವರ ಜೊತೆಗೆ ಡಿಸೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಂಶ ಅವರು ಇದೇ ಜೀವನ ಒಂಬತ್ತು ಹಾಗೂ ಹತ್ತನೇ ತಾರೀಕಿನಂದು ಅರಮನೆ ಮೈದಾನದಲ್ಲಿ ಸಾವಿರಾರು ಗಣ್ಯರ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿ ನಿಂತಿದ್ದಾರೆ. ಈ ಮೂಲಕ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಚಿತ್ರರಂಗದಿಂದ ದಾಂಪತ್ಯ ಜೀವನದ ಕಡೆಗೆ ಹೆಜ್ಜೆ ಹಾಕುತ್ತಿರುವ ನಟರಲ್ಲಿ ಅಭಿಷೇಕ್ ಅಂಬರೀಶ್(Abhishek Ambareesh) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ 10,000ಕ್ಕೂ ಅಧಿಕ ಜನರು ಬರುವಂತಹ ಸಾಧ್ಯತೆ ಇದೆ ಎಂಬುದಾಗಿ ಅಂದಾಜಿಸಲಾಗಿದ್ದು ಸುಮಲತಾ ಅಂಬರೀಶ್ ಅವರು ಈಗಾಗಲೇ ನರೇಂದ್ರ ಮೋದಿ(Narendra Modi) ಅಮಿತ್ ಶಾ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಹಲವಾರು ಸಿನಿಮಾ ಕ್ಷೇತ್ರದ ಗಣ್ಯರನ್ನು ಕೂಡ ಆಹ್ವಾನಿಸಿದ್ದಾರೆ.

ಇನ್ನು ಜೂನ್ 12ನೇ ತಾರೀಖಿನಂದು ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಬಿದ್ದಪ್ಪ ಅವರ ರಿಸೆಪ್ಶನ್ ಬೀಗರ ಊಟ ಕಾರ್ಯಕ್ರಮ ಮಂಡ್ಯದಲ್ಲಿ ನಡೆಯಲಿದೆ ಎಂಬುದಾಗಿದೆ. ಒಟ್ಟಾರೆಯಾಗಿ ಹಲವಾರು ವರ್ಷಗಳ ಪ್ರೀತಿಯ ನಂತರ ತಾನು ಪ್ರೀತಿಸಿದ ಹುಡುಗಿಯನ್ನು ಅಭಿಷೇಕ್ ಅಂಬರೀಶ್ ರವರು ಮದುವೆಯಾಗಲು ಹೊರಟಿದ್ದು ಅವರಿಗೆ ಶುಭಾಶಯಗಳು ಕಾಮೆಂಟ್ ಮಾಡುವ ಮೂಲಕ ತಿಳಿಸೋಣ ಬನ್ನಿ.

Leave a Comment

error: Content is protected !!