ನಟಿ ಅನುಷಾ ರಂಗನಾಥ್ ಅವರ ಅದ್ದೂರಿ ಮದುವೆ ಸಂಭ್ರಮ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಆಗಮಿಸಿದ್ದರೂ ನೋಡಿ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಪ್ರಖ್ಯಾತ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಸಹೋದರಿಯ ಅದ್ದೂರಿ ಮದುವೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟಿದ್ದು ಸಾಮಾಜಿಕ ಜಾಲತಾಣದ ತುಂಬೆಲ್ಲ ಅನುಷಾ ರಂಗನಾಥ್ ಅವರ ಈ ಶುಭ ಸಂದರ್ಭದ ಫೋಟೋಗಳು ಭಾರಿ ವೈರಲ್ ಆಗುತ್ತವೆ. ತಮ್ಮ ಬಹುಕಾಲದ ಗೆಳೆಯನನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ಸ್ನೇಹಿತರು ಕುಟುಂಬಸ್ಥರು ಹಾಗೂ ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅನುಷಾ ರಂಗನಾಥ್,

ಸದ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಸಣ್ಣ ತುಣುಕುಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಗೋಕುಲದಲ್ಲಿ ಸೀತೆ ಎಂಬ ಸೀರಿಯಲ್ ಮೂಲಕ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದಂತಹ ಅನುಷಾ ರಂಗನಾಥ್ ವಿನಯ್ ರಾಜಕುಮಾರ್ ಅವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬೆಳ್ಳಿ ತೆರೆಯಲ್ಲಿಯೂ ಮಿಂಚಿದ್ದಾರೆ.

ಇಂಟೀರಿಯರ್ ಡಿಸೈನರ್ ಆಗಿಯೂ ಬೆಂಗಳೂರಿನಲ್ಲಿ ಹೆಸರುವಾಸಿಯಾಗಿದಂತಹ ಅನುಷಾ ಬೆಂಗಳೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಆದಂತಹ ಎಂ ಶ್ರವಣ್ ಎಂಬುವರೊಂದಿಗೆ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದು ಇವರ ಬ್ಯಾಚುಲರೇಟ್ ಪಾರ್ಟಿ ಹಳದಿ ಶಾಸ್ತ್ರ ಮೆಹಂದಿ ಶಾಸ್ತ್ರ ಹಾಗೂ ಮುಹೂರ್ತದ ಕೆಲ ಸುಂದರ ಫೋಟೋಗಳನ್ನು ಮದುವೆಗೆ ಆಗಮಿಸಿದ್ದಂತಹ ಸೆಲೆಬ್ರಿಟಿಗಳು ನವ ವಧು ವರರಿಗೆ ಶುಭಕೋರಿ ಅವರ ಫೋಟೋಗಳನ್ನು ತೆಗೆದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅನುಷಾ ರಂಗನಾಥ್ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ಅಧಿಕೃತವಾಗಿ ಹೊರಬಿತ್ತು.

ತಮ್ಮ ಸ್ನೇಹಿತರೊಂದಿಗೆ ಕಳೆದ ಕೆಲವು ದಿನಗಳ ಹಿಂದಿ ರೆಸಾರ್ಟ್ ಒಂದರಲ್ಲಿ ಬಹಳ ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿಯನ್ನು ಮಾಡಿದಂತಹ ಅನುಷಾ ರಂಗನಾಥ್ ಅಯೋಧ್ಯೆಯ ಉದ್ಘಾಟನೆಯ ದಿನವೇ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇವರ ಮುಂದಿನ ಬದುಕಿಗೆ ಒಳ್ಳೆಯದಾಗಲಿ ಎಂದು ಅಭಿಮಾನಿ ಆಶೀರ್ವದಿಸ ತೊಡಗಿದ್ದಾರೆ. ಮದುವೆಯ ಕೆಲ ಗ್ಲಿಂಪ್ಸ್ ಗಳು ಇನ್ಸ್ಟಾಗ್ರಮ್ ತುಂಬೆಲ್ಲ ಬಾರಿ ವೈರಲ್ ಆಗುತ್ತಿದ್ದು,

ಇದನ್ನು ಸಹೋದರಿ ಆಶಿಕ ರಂಗನಾಥ್ ಮತ್ತು ಆಕೆಯ ಸ್ನೇಹಿತರು ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇನ್ನು ತಂಗಿಯ ನೆಚ್ಚಿನ ಹಾಡುಗಳಿಗೆ ಕಪ್ಪು ಬಣ್ಣದ ಸೀರೆಯುಟ್ಟು ಜಬರ್ದಸ್ತ್ ಪರ್ಫಾರ್ಮೆನ್ಸ್ ನೀಡಿ ಮದುವೆಯ ರಂಗನ್ನು ಇನ್ನಷ್ಟು ಹೆಚ್ಚಿಸಿದ ಮಿಲ್ಕಿ ಬ್ಯುಟಿ ಆಶಿಕ ಯಾವಾಗ ತಮ್ಮ ಸಹೋದರಿಯಂತೆ ವೈಯಕ್ತಿಕ ಬದುಕಿಗೆ ಕಾಲಿಡಲಿದ್ದಾರೆ ಎಂಬುದನ್ನು ಕಾದು ಮಾಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!