Actrese Ramya: ರಮ್ಯಾ ಅವರನ್ನು ಬೆಂಬಿಡದೆ ಕಾಡಿದ್ದ ಆ ಆರೋಗ್ಯ ಸಮಸ್ಯೆ ಏನು ಗೊತ್ತಾ?

Actress Ramya ನಟಿ ರಮ್ಯಾ(Ramya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಪರವಾಗಿ ರಾಜಕೀಯದಲ್ಲಿ ಕೂಡ ಸಾಕಷ್ಟು ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವಂತಹ ಅನುಭವವನ್ನು ಹೊಂದಿದ್ದಾರೆ ಈಗಲೂ ಕೂಡ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರವನ್ನು ನಡೆಸುತ್ತಿದ್ದಾರೆ.

ಸದ್ಯಕ್ಕೆ ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಳ್ಳಲಿರುವ ಉತ್ತರಕಾಂಡ ಸಿನಿಮಾದಲ್ಲಿ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಮತ್ತೆ ರಮ್ಯಾ ಅವರು ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದರ ನಡುವೆ ಈಗ ಮತ್ತೆ ರಾಜಕೀಯ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ ಕೂಡ.

ಇದರ ನಡುವೆ ಚುನಾವಣೆ ಪ್ರಚಾರದ ನಡುವಲ್ಲಿ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿರುವ ರಮ್ಯಾ(Ramya) ಅವರು ಅದರಲ್ಲಿ ತಾವು ಅನುಭವಿಸಿದಂತಹ ಆರೋಗ್ಯ ಸಮಸ್ಯೆಯ ಕುರಿತಂತೆ ಕೂಡ ಹೇಳಿಕೊಂಡಿದ್ದಾರೆ.

ಒಂದು ಸಮಯದಲ್ಲಿ ಅವರಿಗೆ ಕಾಲಿನಲ್ಲಿ ಟ್ಯೂಮರ್ ಇದ್ದ ಕಾರಣ ಅದನ್ನು ಆಪರೇಷನ್ ಮಾಡಿ ತೆಗೆಸಿದ್ದಾರಂತೆ. ಈ ಸಂದರ್ಭದಲ್ಲಿ ಅವರು ಚಿತ್ರರಂಗದಿಂದ ಹಾಗೂ ರಾಜಕೀಯ ಎರಡು ಕ್ಷೇತ್ರಗಳಿಂದಲೂ ಕೂಡ ಸಾಕಷ್ಟು ವರ್ಷಗಳ ಕಾಲ ಯಾವುದೇ ಕಾರ್ಯ ಚಟುವಟಿಕೆ ಇಲ್ಲದೇ ದೂರ ಇದ್ದರು. ರಮ್ಯಾ ಅವರ ಜೀವನದ ಈ ವಿಚಾರದ ಕುರಿತಂತೆ ನಿಮಗೆ ತಿಳಿದಿತ್ತಾ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!