ಹಲ್ಲಿನ ಚಿಕಿತ್ಸೆಗೆಂದು ಹೋದ ನಟಿಯ ಮೂತಿ ಏನಾಯ್ತು ನೋಡಿ! ಸುಂದರ ನಟಿಯ ಬಾಳಲ್ಲಿ ವಿಲನ್ ಆದ ಡಾಕ್ಟರ್

ಕೆಲ ದಿನಗಳ ಹಿಂದೆ ಯುವನಟಿ ಚೇತನರಾಜ್ ಬಗ್ಗೆ ನೀವೆಲ್ಲಾ ಓದಿರುತ್ತೀರಿ ಬೊಜ್ಜು ಕರಗಿಸಬೇಕು ಎಂದು ವೈದ್ಯರ ಬಳಿ ಹೋಗಿ ಚಿಕಿತ್ಸೆ ಮಾಡಿಸಿಕೊಂಡ ಚೇತನರಾಜ್ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರ ಯಡವಟ್ಟಿನಿಂದ ಇಹಲೋಕವನ್ನು ತ್ಯಜಿಸಿದರು. ಇದೀಗ ಇನ್ನೊಬ್ಬ ಯುವ ನಟಿ ವೈದ್ಯರ ಯಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಯುವ ನಟಿ ತನ್ನ ಸೌಂದರ್ಯವನ್ನು ಕಳೆದುಕೊಂಡು ಚಿಂತೆಯಲ್ಲಿ ಮುಳುಗಿದ್ದಾಳೆ.

ಈ ಯುವ ನಟಿಯ ಹೆಸರು ಸ್ವಾತಿ ಈಕೆ ಬೆಂಗಳೂರಿನ ಜೆಪಿ ನಗರದ ನಿವಾಸಿ. ಈಕೆ ಈಗಿನ್ನೂ ಬೆಳೆಯುತ್ತಿರುವ ನಟಿ ನಟ ವಿಜಯ ರಾಘವೇಂದ್ರ ಅವರ ಜೊತೆ ಎಫ್‌ಐಆರ್‌ 6 ಟು 6 ಸಿನಿಮಾದಲ್ಲಿ ನಟನೆ ಮಾಡಿದ್ದಾಳೆ. ಹಾಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿ ಸ್ವಾತಿ ಬ್ಯುಸಿ ಆಗಿದ್ದರು.. ಆದರೆ ಇದೀಗ ದಂತವೈದ್ಯರು ಮಾಡಿರುವ ಎಡವಟ್ಟಿನಿಂದ ನಟಿ ಸ್ವಾತಿ ತಲೆಮೇಲೆ ಕೈಹೊತ್ತು ಕುಳಿತಿದ್ದಾಳೆ. ಇಪ್ಪತ್ತು ದಿನಗಳ ಹಿಂದೆ ನಟಿ ಸ್ವಾತಿ ಅವರಿಗೆ ಹಲ್ಲು ನೋವು ಕಾಣಿಸಿಕೊಂಡಿತ್ತು ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದಳು.

ಇಂಟರ್ನೆಟ್ ನಲ್ಲಿ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಒಳ್ಳೆಯ ರಿವ್ಯೂಸ್ ಗಳನ್ನು ನೋಡಿಕೊಂಡು ನಟಿ ಸ್ವಾತಿ ಈ ಆಸ್ಪತ್ರೆಗೆ ಹೋಗಿದ್ದಳು. ಆದರೆ ಇದೀಗ ಅದೇ ಆಸ್ಪತ್ರೆಯ ವೈದ್ಯರು ಈ ನಟಿಯ ಬಾಳಿಗೆ ವಿಲನ್ ಆಗಿದ್ದಾರೆ. ಹಲ್ಲು ನೋವು ಅಂತ ಹೋಗಿದ್ದ ನಟಿ ಸ್ವಾತಿಗೆ ದಂತವೈದ್ಯರು ರೂಟ್ ಕೆನಾಲ್ ಚಿಕಿತ್ಸೆಯನ್ನು ಮಾಡಿದ್ದರು. ರೂಟ್ ಕೆನಲ್ ಮಾಡಿದ ಮರುದಿನವೇ ನಟಿ ಸ್ವಾತಿ ಅವರ ಮುಖವೆಲ್ಲ ಊದಿಕೊಂಡು ವಿಕಾರ ರೂಪವನ್ನು ಪಡೆದುಕೊಂಡಿತು. ಇಪ್ಪತ್ತು ದಿನಗಳಾದರೂ ಸಹ ನಟಿ ಸ್ವಾತಿ ಮುಖ ಏನೂ ಬದಲಾವಣೆ ಕಾಣಿಸಲಿಲ್ಲ. ತದನಂತರ ನಟಿ ಸ್ವಾತಿಗೆ ಇದು ವೈದ್ಯರು ಮಾಡಿರುವ ಎಡವಟ್ಟು ಎಂದು ತಿಳಿಯಿತು.

ದಂತ ವೈದ್ಯರು ಏನು ಮಾಡಿದ್ದಾರೆ ಅಂದರೆ ನಟಿ ಸ್ವಾತಿಗೆ ಅನಸ್ತೇಶಿಯಾ ಇಂಜೆಕ್ಷನ್ ಕೊಡುವ ಬದಲು ಬೇರೆ ವಿಧವಾದ ಇಂಜೆಕ್ಷನ್ ಕೊಟ್ಟಿದ್ದಾರೆ. ಇದು ಸೈಡ್ ಎಫೆಕ್ಟ್ ಆಗಿ ನಟಿ ಸ್ವಾತಿ ಅವರ ಮುಖ ದಪ್ಪವಾಗಿ ಉಳಿದುಕೊಂಡಿದೆ. ಇದೀಗ ಡಾಕ್ಟರ್ ಗೆ ನಟಿ ಸ್ವಾತಿ ಕಾಲ್ ಮಾಡಿದರೆ ಡಾಕ್ಟರ್ ಫೋನ್ ರಿಸೀವ್ ಮಾಡುತ್ತಿಲ್ಲ. ಡಾಕ್ಟರ್ ಮುಂಬೈನಲ್ಲಿ ಇದ್ದೀನಿ ಅಂತಿದ್ದಾರೆ.ಸದ್ಯದ ಮಟ್ಟಿಗೆ ಸ್ವಾತಿ ವಿಕಾರವಾದ ಮುಖವನ್ನು ಇಟ್ಟುಕೊಂಡು ಮನೆಯಿಂದ ಹೊರಬರಲಾರದೆ ನರಕ ಅನುಭವಿಸುತ್ತಿದ್ದಾಳೆ .

ಈ ಘಟನೆ ನಡೆಯುವುದಕ್ಕೂ ಮುಂಚೆ ನಟಿಸುವ ಹೊತ್ತಿಗೆ ಹಲವಾರು ಅವಕಾಶಗಳು ಬಂದಿದ್ದವು ಹಲವಾರು ಸಿನಿಮಾಗಳಿಗೆ ನಟಿ ಸ್ವಾತಿ ಸಹಿ ಕೂಡ ಇದ್ದರು. ಇದೀಗ ಎಲ್ಲಾ ಅವಕಾಶಗಳು ನಟಿಸುವ ಹೊತ್ತಿಗೆ ಕೈ ತಪ್ಪಿವೆ. ಚಿತ್ರೀಕರಣಕ್ಕೂ ಹೋಗಲಾರದೆ ಬೇರೆ ಕೆಲಸವನ್ನು ಮಾಡಲಾಗದೆ ನಟಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ವೈದ್ಯರ ಎಡವಟ್ಟಿನಿಂದ ನಟಿ ಸ್ವಾತಿ ಕಂಗಾಲಾಗಿದ್ದಾರೆ. ಮತ್ತು ದಯವಿಟ್ಟು ಯಾರೂ ಕೂಡ ಓರಿಕ್ಸ್ ಡೆಂಟಲ್ ಕ್ಲಿನಿಕ್‌ಗೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ

Leave A Reply

Your email address will not be published.

error: Content is protected !!