Actress Yash: ಮಕ್ಕಳೊಂದಿಗೆ ಬೀಚ್ ಬಳಿ ಯಶ್ ಹಾಗೂ ರಾಧಿಕಾ ಇಲ್ಲಿವೆ ತುಂಟಾಟದ ಕ್ಯೂಟೆಸ್ಟ್ ಫೋಟೋಸ್

Actress Yash: ಸ್ನೇಹಿತರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ತಮ್ಮ ಫ್ಯಾಮಿಲಿ ಫೋಟೋ ಹಂಚಿಕೊಳ್ಳುತ್ತ ಸದ್ದು ಮಾಡುವಂತಹ ರಾಧಿಕಾ ಪಂಡಿತ್ (Radhika Pandit) ಮತ್ತು ರಾಕಿಂಗ್ ಸ್ಟಾರ್ ಯಶ್(Yash) ಕಳೆದ ಕೆಲ ದಿನಗಳ ಹಿಂದಷ್ಟೇ ಮಕ್ಕಳೊಂದಿಗೆ ಬೀಚ್ ಬಳಿ ಮುದ್ದಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ಶೂಟಿಂಗ್ ಕೆಲಸಗಳ ನಡುವೆಯೂ ತಮ್ಮ ಹೆಂಡತಿ ಹಾಗೂ ಮಕ್ಕಳಿಗೋಸ್ಕರ ಬಿಡುವು ಮಾಡಿಕೊಂಡು ಆಗಾಗ ತಮ್ಮ ಮನೆಯವರೊಟ್ಟಿಗೆ ಪ್ರವಾಸಿ ತಾಣಗಳಿಗೆ ತೆರಳುವಂತಹ ರಾಕಿಂಗ್ ಸ್ಟಾರ್ ಯಶ್ ಈ ಬಾರಿ ಬೀಚ್(Beach) ಒಂದರ ಬಳಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.

ಬೀಚಿನ ದಡದಲ್ಲಿ ಕುಳಿತು ಅಲೆಯಲ್ಲೂ ವೀಕ್ಷಿಸುತ್ತ ಯಶ್ ಹಾಗೂ ರಾಧಿಕಾ ಪಂಡಿತ್ ಫೋಟೋ ಕ್ಲಿಕ್ಕಿಸಿಕೊಂಡರೆ, ಆನಂತರ ಮಗಳು ಐರ(Ira) ತಮ್ಮ ತಂದೆಯ ಹೆಗಲ ಮೇಲೆ ಕುಳಿತು ಅವರ ಪಕ್ಕದಲ್ಲಿ ಕುಳಿತಿರುವ ತಾಯಿಯ ತುಟಿಗೆ ಚುಂಬಿಸಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಮ್ಮ ಮಗಳ ನಡುವೆ ಇರುವಂತಹ ಪ್ರೀತಿ ಹಾಗೂ ಬಾಂಧವ್ಯ ಕಂಡು ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಈ ಎಲ್ಲಾ ಫೋಟೋಗಳನ್ನು ಇಂಗ್ಲೀಷ್ನ ಹಾಡೊಂದಕ್ಕೆ ಸಿಂಕ್ ಮಾಡಿ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾರ್ಟ್ ಎಮೋಜಿಯನ್ನು ಹಾಕಿ ತಮ್ಮ ಅಪರೂಪದ ಕ್ಷಣಗಳನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬರುತ್ತಿದ್ದು,

ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರನ್ನು ಮೇಲಿಂದ ಮೇಲೆ ತಮ್ಮ ಮುಂದಿನ ಸಿನಿಮಾ ಯಾವುದು? ಅದರ ಹಿಂಟ್ ಕೊಡಿ ಎಂದೆಲ್ಲಾ ಕೇಳ ತೊಡಗಿದ್ದಾರೆ. ಇನ್ನು ಕೆಲವರು ಕ್ಯೂಟ್ ಫ್ಯಾಮಿಲಿ(cute family), ನನ್ ಸಮುದ್ರ ನೀನು ಎಂದೆಲ್ಲ ರಕ್ಷಿತ್ ಶೆಟ್ಟಿ (Rakshith Shetty) ಅವರ ಸಪ್ತಸಾಗರದ ಆಚೆಯಲ್ಲೂ ಸಿನಿಮಾದ ಡೈಲಾಗ್ ಅನ್ನು ಕಮೆಂಟ್ ಮಾಡುತ್ತಾ ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದನ್ನೂ ಓದಿ ಅಮೆರಿಕದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬೀದಿ-ಬೀದಿ ಸುತ್ತುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್!

Leave a Comment

error: Content is protected !!