ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗುವ ಮುನ್ನವೇ ಇನ್ನೊಬ್ಬ ನಟನೊಂದಿಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದ ನಟಿ ಮಹಾಲಕ್ಷ್ಮಿ!

ತಮಿಳು ಕಿರುತೆರೆಯ ನಿರೂಪಕಿ ಹಾಗೂ ಖ್ಯಾತ ನಟಿ ಆಗಿರುವ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರ ಮದುವೆ ವಿಚಾರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಯಾಕೆಂದರೆ ಮಹಾಲಕ್ಷ್ಮಿ ಅವರು ನೋಡಲು ಸುಂದರಿ ಆಗಿದ್ದಾರೆ ಹಾಗೂ ಈ ಕಡೆ ರವೀಂದ್ರನ್ ಚಂದ್ರಶೇಖರ್ ಅವರು ದಡೂತಿಯಾಗಿದ್ದಾರೆ ಇಬ್ಬರೂ ಕೂಡ ಮ್ಯಾಚಿಂಗ್ ಅಲ್ಲ ಎನ್ನುವುದಾಗಿ ಎಲ್ಲರೂ ಕೂಡ ವಾದಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಕುರಿತಂತೆ ಹಲವಾರು ಟೀಕೆ ಮತ್ತು ಟ್ರೋಲಿಂಗ್ ವಿಡಿಯೋಗಳು ಹಾಗೂ ಪೋಸ್ಟ್ಗಳು ಹರಿದಾಡಲು ಪ್ರಾರಂಭಿಸಿದ್ದವು. ಆದರೆ ಇವರಿಬ್ಬರೂ ಇದು ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಈಗ ನಟಿ ಮಹಾಲಕ್ಷ್ಮಿ ಅವರ ಕುರಿತಂತೆ ಮತ್ತೊಂದು ವಿಚಾರ ಹೊರಬಂದಿದ್ದು ಮೊದಲನೇ ಪತಿ ಅನಿಲ್ ಅವರಿಗೆ ವಿವಾಹ ವಿಚ್ಛೇದನ ನೀಡಿದ ನಂತರ ಅವರ ಕುರಿದಂತೆ ಒಂದು ಆಶ್ಚರ್ಯಕರ ಎನಿಸುವಂತಹ ಸುದ್ದಿ ಒಂದು ಹೊರ ಬಂದಿದೆ.

ಹೌದು ಗೆಳೆಯರೇ ಮಹಾಲಕ್ಷ್ಮಿಯವರು ಮೊದಲನೇ ಗಂಡ ಅನಿಲ್ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಬೇರೆ ಆದ ನಂತರ ಅವರು ತಮ್ಮ ಸಹನಟ ಆಗಿರುವ ಈಶ್ವರ್ ರಘುನಾಥ್ ಅವರ ಜೊತೆಗೆ ಬೇಡದ ಸಂಬಂಧವನ್ನು ಹೊಂದಿದ್ದರು ಎಂಬುದಾಗಿ ಅವರ ಪತ್ನಿ ಜಯಶ್ರೀ ಈಗ ಹೇಳಿಕೊಂಡಿದ್ದಾರೆ. ರಾತ್ರಿ ಪರಸ್ಪರ ವಿಡಿಯೋ ಕಾಲ್ ಮಾಡಿ ತನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂಬುದಾಗಿ ಮಹಾಲಕ್ಷ್ಮಿ ಅವರ ವಿರುದ್ಧ ಆರೋಪವನ್ನು ಕೂಡ ಮಾಡಿದ್ದರಂತೆ.

ಇನ್ನು ಈ ಕಡೆ ನೋಡುವುದಾದರೆ ರವೀಂದ್ರನ್ ಚಂದ್ರಶೇಖರ್ ಅವರಿಗೂ ಕೂಡ ಈಗಾಗಲೇ ಮದುವೆಯಾಗಿ ವಿವಾಹ ವಿಚ್ಛೇದನವನ್ನು ನಡೆದು ನಂತರ ಹಲವಾರು ವರ್ಷಗಳ ಕಾಲ ನಿರ್ಮಾಪಕರಾಗಿ ಕೆಲಸ ಮಾಡಿದ ನಂತರವೇ ಮಹಾಲಕ್ಷ್ಮಿ ಅವರೊಂದಿಗೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಯಿಂದ ಈಗ ಮದುವೆ ಆಗಿ ಇಬ್ಬರೂ ಕೂಡ ಪತಿ-ಪತ್ನಿಯರಾಗಿದ್ದಾರೆ. ಮಹಾಲಕ್ಷ್ಮಿ ಅವರ ಈ ವಿಚಾರಗಳು ಖಂಡಿತವಾಗಿ ರವೀಂದ್ರ ಚಂದ್ರಶೇಖರ್ ಅವರಿಗೆ ತಿಳಿಯದೆ ಇರುವುದೇನಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!