Salman Khan: ಸಲ್ಮಾನ್ ಖಾನ್ ಅವರ ಜೊತೆಗಿನ ಸಂಬಂಧದ ಕುರಿತಂತೆ ನಟಿ ಐಶ್ವರ್ಯ ರೈ ಹೇಳಿದ್ದೇನು? ಇಷ್ಟೊಂದೆಲ್ಲಾ ನಡೆದಿತ್ತಾ?

Aishwarya Rai ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಐಶ್ವರ್ಯ ರೈ(Aishwarya Rai) ಅವರ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಹುಟ್ಟಿದ್ದು ಕರಾವಳಿಯಾದರೂ ಕೂಡ ವಿಶ್ವಮಟ್ಟದಲ್ಲಿ ಭವನ ಸುಂದರಿಯಾಗಿ ಹೆಸರು ಮಾಡಿ ನಂತರ ಬಾಲಿವುಡ್ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ ಮಿಂಚಿ ಮರೆಯುತ್ತಾರೆ. ಇನ್ನು ಸದ್ಯಕ್ಕೆ ಅವರ ವಯಸ್ಸು 50 ಸಮೀಪಿಸಿದರು ಕೂಡ 30ರ ಹರೆಯದ ಯುವತಿಯಂತೆ ಕಾಣುವ ಇಂದಿನ ನಟಿಯರಿಗೂ ಕೂಡ ಕಾಂಪಿಟೇಶನ್ ನೀಡುತ್ತಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಅವರ ಬೇಡಿಕೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ಇಂದಿಗೂ ಕೂಡ ಕಡಿಮೆಯಾಗಿಲ್ಲ. ಐಶ್ವರ್ಯ ರೈ ಅವರ ದಾಂಪತ್ಯ ಜೀವನದ ಕುರಿತಂತೆ ಮಾತನಾಡುವುದಾದರೆ ಅಮಿತಾಬ್ ಬಚ್ಚನ್ ಅವರ ಪುತ್ರ ಖ್ಯಾತ ನಟ ಆಗಿರುವ ಅಭಿಷೇಕ್ ಬಚ್ಚನ್(Abhishek Bacchan) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಇದಕ್ಕೂ ಮುನ್ನ ಅವರ ಹೆಸರು ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಸಲ್ಮಾನ್ ಖಾನ್(Salman Khan) ಅವರ ಜೊತೆಗೆ ಕೇಳಿ ಬಂದಿತ್ತು. ಕೇಳಿಬಂದಿತ್ತು ಎನ್ನುವುದಕ್ಕಿಂತ ಹೆಚ್ಚಾಗಿ ಇಬ್ಬರೂ ಕೂಡ ಜೊತೆಯಾಗಿ ವಾಸಿಸುತ್ತಿದ್ದರು. ಅಷ್ಟರ ಮಟ್ಟಿಗೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಆದರೆ ಇವರಿಬ್ಬರ ಪ್ರೀತಿ ಕೇವಲ ಎರಡು ವರ್ಷಗಳಲ್ಲಿಯೇ ಅಂತ್ಯವಾಯಿತು. ಅಷ್ಟಕ್ಕೂ ಇವರಿಬ್ಬರ ನಡುವೆ ಏನು ನಡೆದಿತ್ತು ಎನ್ನುವುದರ ಬಗ್ಗೆ ನಟಿ ಐಶ್ವರ್ಯ ರೈ ಅವರೇ ಮುಕ್ತವಾಗಿ ಹೇಳಿಕೊಂಡಿದ್ದರು.

ಸಲ್ಮಾನ್ ಖಾನ್ ಅವರ ಜೊತೆಗೆ ಇರಬೇಕಾದರೆ ಅವರ ನಿಂದನೆ ಹಾಗೂ ದೌ’ ರ್ಜನ್ಯಗಳಿಂದಾಗಿ ಐಶ್ವರ್ಯ ರೈ(Aishwarya Rai) ಸಂಪೂರ್ಣವಾಗಿ ಬೇಸತ್ತಿದ್ದರಂತೆ. ಇದಕ್ಕೂ ಮಿಗಿಲನ್ನುವಂತೆ ಸಲ್ಮಾನ್ ಖಾನ್(Salman Khan) ಅವರ ಈ ನಡೆಯನ್ನು ಸಮರ್ಥಿಸಿಕೊಂಡು ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಸ್ಥರು ಐಶ್ವರ್ಯ ರೈ ಅವರ ಕುಟುಂಬಸ್ಥರ ಮೇಲೆ ಕೂಡ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದರಂತೆ ಹೀಗಾಗಿಯೇ ಅವರಿಂದ ದೂರಾದೆ ಎಂಬುದಾಗಿ ಐಶ್ವರ್ಯ ಹೇಳಿದ್ದಾರೆ. ಆದ ನಂತರ ಹಲವಾರು ಸಿನಿಮಾಗಳಿಂದ ಕೂಡ ಐಶ್ವರ್ಯ ರೈ ಸಲ್ಮಾನ್ ಖಾನ್ ಅವರ ಕಾರಣದಿಂದಾಗಿ ಅವಕಾಶ ವಂಚಿತರಾಗಿರುವಂತಹ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ.

Leave a Comment

error: Content is protected !!