Salman Khan: ಮುನಿಸಿಕೊಂಡಿದ್ದ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಇಬ್ರೂ ಒಂದಾದ್ರ? ವೈರಲ್ ಆಯ್ತು ವೀಡಿಯೋ!

Aishwarya Rai ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಐಶ್ವರ್ಯ ರೈ ಅವರು ತಮ್ಮ ಕರಿಯರ್ ನಲ್ಲಿ ಪೀಕ್ ನಲ್ಲಿ ಇದ್ದ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಸಲ್ಮಾನ್ ಖಾನ್(Megastar Salman Khan) ಅವರ ಜೊತೆಗೆ ರಿಲೇಷನ್ಶಿಪ್ ನಲ್ಲಿ ಇದ್ದರು. ಆದರೆ ಇವರಿಬ್ಬರ ನಡುವೆ ಇದ್ದಂತಹ ವೈಮನಸ್ಸಿನ ಕಾರಣದಿಂದಾಗಿ ಇಬ್ಬರೂ ಕೂಡ ಬೇರೆ ಬೇರೆ ಆಗಿರುತ್ತಾರೆ. ಇದು ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಹೌದು ಗೆಳೆಯರೇ, ಅದಾದ ನಂತರ ಐಶ್ವರ್ಯ ರೈ ಅಭಿಷೇಕ್ ಬಚ್ಚನ್(Abhishek Bachchan) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಈಗಾಗಲೇ ಅವರಿಗೆ ಆರಾಧ್ಯ ಎನ್ನುವ ಮಗಳು ಕೂಡ ಇದ್ದಾಳೆ. ಆದರೆ ಇದಾದ ನಂತರ ಸಲ್ಮಾನ್ ಖಾನ್(Salman Khan) ರವರು ಮಾತ್ರ ಮದುವೆಯಾಗಲು ಹೋಗಲಿಲ್ಲ. ಹಲವಾರು ನಟಿಯರ ಜೊತೆಗೆ ಅವರ ಹೆಸರು ಕೇಳಿ ಬಂದಿರಬಹುದು ಆದರೆ ಯಾವ ಸಂಬಂಧವೂ ಕೂಡ ಹೆಚ್ಚು ಕಾಲಗಳ ಬಾಳಿಕೆಯನ್ನು ಹೊಂದಿರಲಿಲ್ಲ.

ಇದಾದ ನಂತರ ಇಬ್ಬರೂ ಕೂಡ ಯಾವುದೇ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಹಾಗೂ ಒಬ್ಬರು ಹೋದ ಕಾರ್ಯಕ್ರಮಕ್ಕೆ ಇನ್ನೊಬ್ಬರು ಹೋಗುವ ಕೆಲಸವನ್ನು ಕೂಡ ಮಾಡುತ್ತಿರಲಿಲ್ಲ. ಆದರೆ ಈಗ ಮೊದಲ ಬಾರಿಗೆ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ವಿಡಿಯೋ ಕೂಡ ವೈರಲ್ ಆಗಿದ್ದು ಇದು ನಡೆದಿರುವುದು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಕಾರ್ಯಕ್ರಮದಲ್ಲಿ.

ಒಂದೇ ಕಾರ್ಯಕ್ರಮದಲ್ಲಿ ಇವರಿಬ್ಬರೂ ಬಂದಿದ್ದು ನಿಜ ಆದರೆ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಡಿಯೋ ಮಾತ್ರ ಎಡಿಟ್ ಮಾಡಲಾಗಿರುವುದು ಎಂಬುದಾಗಿ ಕೊನೆಗೆ ತಿಳಿದು ಬಂದಿದೆ. ಆದರೂ ಕೂಡ ಒಂದು ಕ್ಷಣ ಈ ದೃಶ್ಯವನ್ನು ನೋಡಿದ ಪ್ರತಿಯೊಬ್ಬರು ಕೂಡ ಇಬ್ಬರು ಒಂದಾಗಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತು ಎಂಬುದಾಗಿ ತಮ್ಮ ಕಲ್ಪನಾ ಲೋಕಕ್ಕೆ ಕಾಲಿಟ್ಟಿದ್ದಂತೂ ನಿಜ.

Leave a Comment

error: Content is protected !!