Ajay Rao: ನಟ ಅಜಯ್ ರಾವ್ ಅವರ ಸುಂದರ ಕುಟುಂಬ, ಅಪ್ಪನಂತೆ ಮಗಳು ಕೂಡ ತುಂಬಾನೇ ಕ್ಯೂಟ್

ಸ್ನೇಹಿತರೆ ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಹಾಗೂ ಕೃಷ್ಣ ಟಾಕೀಸ್ ಸಿನಿಮಾಗಳ ಮೂಲಕ ಕನ್ನಡದ ಕೃಷ್ಣನೆಂದೇ ಪ್ರಖ್ಯಾತಿ ಪಡೆದಿರುವಂತಹ ನಟ ಅಜಯ್ ರಾವ್(Ajay Rao) ಅವರ ಸುಂದರ ಫ್ಯಾಮಿಲಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಬಹಳ ಮುದ್ದಾಗಿ ಇರುವಂತಹ ಅಜಯ್ ರಾವ್ ಅವರ ಮಗಳ ಫೋಟೋ ನೋಡಿ ನೆಟ್ಟಿಗರು ವಾವ್ ಎಂದಿದ್ದಾರೆ.

ಹೌದು ಗೆಳೆಯರೇ ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಯಶಸ್ವಿ ಚಿತ್ರಗಳ ಮೂಲಕ ಬಹು ಬೇಡಿಕೆಯನ್ನು ಪಡೆದುಕೊಂಡಿರುವಂತಹ ನಟ ಅಜಯ್ ರಾವ್(Ajay Rao) ಅವರು ಇಂದಿಗೂ ಕೂಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಿಂದ ಜನಪ್ರಿಯತೆ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ಮನೋರಂಜನೆ ನೀಡುತ್ತಿದ್ದಾರೆ.

ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟ ಅಜಯ್ ರಾವ್(Ajay Rao) ಅವರು ಆಗಾಗ ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಶೇರ್ ಮಾಡಿಕೊಂಡು ವೈರಲಾಗುತ್ತಿರುತ್ತಾರೆ. ಹೀಗಿರುವಾಗ ಅಜಯ್ ರಾವ್ ತಮ್ಮ ಪತ್ನಿ ಹಾಗೂ ಮಗಳ ಜೊತೆಗೆ ತೆಗೆಯಲಾದ ಸುಂದರ ಗ್ರೂಪ್ ಫೋಟೋ ಒಂದನ್ನು ಹಂಚಿಕೊಂಡಿದ್ದು ಈ ಫೋಟೋ ನೆಟ್ಗರನ್ನು ಆಕರ್ಷಿಸುತ್ತಿದೆ.

ಏಳು ವರ್ಷಗಳ ಕಾಲ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ತಮ್ಮ ಬಹುಕಾಲದ ಗೆಳತಿ ಸ್ವಪ್ನ ಅವರೊಂದಿಗೆ ಡಿಸೆಂಬರ್ 18, 2014ರಂದು ಬಹಳ ಅದ್ದೂರಿಯಾಗಿ ಗುರು ಹಿರಿಯರ ಮತ್ತು ಆತ್ಮೀಯರ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಅಜಯ್ ರಾವ್(Ajay Rao) 10 ವರ್ಷಗಳ ಕಾಲ ಸಣ್ಣ ಮನಸ್ತಾಪ ಜಗಳಗಳಿಲ್ಲದೆ, ಬಹಳ ಅನ್ಯೋನ್ಯವಾಗಿ ಇತರರಿಗೆ ಆದರ್ಶವಾಗುವಂತೆ ತಮ್ಮ ದಾಂಪತ್ಯ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಇನ್ನು ಸ್ವಪ್ನ ಮತ್ತು ಅಜಯ್ ರಾವ್ ದಂಪತಿಗಳಿಗೆ ಕರಿಷ್ಮಾ (Cherishma) ಎಂಬ ಮುದ್ದಾದ ಮಗಳಿದ್ದು ಆಗಾಗ ತಮ್ಮ ಮಗಳ ಸುಂದರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಜಯ್ ರಾವ್ ಹಂಚಿಕೊಳ್ಳುತ್ತಿರುತ್ತಾರೆ, ಅಪ್ಪನಂತೆ ಮಗಳು ನೋಡಲು ಬಹಳ ಮುದ್ದಾಗಿದ್ದು ಸದ್ಯ ತಮ್ಮ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಚರಿಷ್ಮ ಮುಂದಿನ ದಿನಮಾನಗಳಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ ಮಿಂಚಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!