Pushpa 2: ಪುಷ್ಪ ಸಿನಿಮಾಗೆ ಅಲ್ಲು ಅರ್ಜುನ್ ನಾಯಕ ನಟನಾಗಿ ಮೊದಲ ಆಪ್ಷನ್ ಅಲ್ಲ. ಯಾರಿಗೂ ಗೊತ್ತಿಲ್ಲದ ರಹಸ್ಯ ಬಯಲಾಯಿತು ನೋಡಿ.

Allu Arjun ಪುಷ್ಪ ಸಿನಿಮಾ(Pushpa Film) ಯಾವ ರೀತಿಯಲ್ಲಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಮೊದಲ ಅವತರಿಣಿಕೆಯಲ್ಲಿ 350ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡುವ ಮೂಲಕ ಅದರಲ್ಲೂ ವಿಶೇಷವಾಗಿ ಹಿಂದಿಯಲ್ಲಿ 100 ಕೋಟಿ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದೆ. ಅಲ್ಲು ಅರ್ಜುನ್(Allu Arjun) ಅವರ ಜನಪ್ರಿಯತೆ ಕೂಡ ಇದಕ್ಕೆ ಕಾರಣವೆಂದರೆ ತಪ್ಪಾಗಲಾರದು.

ಈಗಾಗಲೇ ಪುಷ್ಪ 2(Pushpa 2) ಸಿನಿಮಾದ ಬಿಡುಗಡೆಗು ಕೂಡ ಚಿತ್ರತಂಡ ಸಿದ್ಧವಾಗಿದ್ದು ಸಿನಿಮಾದಲ್ಲಿ ಪುಷ್ಪರಾಜ್ ಎಲ್ಲಿದ್ದಾನೆ ಏನು ಮಾಡುತ್ತಿದ್ದಾನೆ ಎನ್ನುವ ಕುತೂಹಲವನ್ನು ಚಿತ್ರತಂಡ ಟೀಸರ್ಗಳ ಮೂಲಕ ಬಿಲ್ಡ್ ಅಪ್ ಮಾಡುತ್ತಿದೆ. ಆದರೆ ನಿಮಗೆ ತಿಳಿದಿರಲಿ ಪುಷ್ಪ ಸಿನಿಮಾಗೆ ಮೊದಲ ಆಯ್ಕೆ ಅಲ್ಲು ಅರ್ಜುನ್ ಅವರು ಆಗಿರಲಿಲ್ಲ.

ಹೌದು ಸುಕುಮಾರ್(Sukumar) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್(Allu Arjun) ಅವರು ಪರ್ಫೆಕ್ಟ್ ನಾಯಕ ನಟನಾಗಿ ಕಾಣಿಸಿಕೊಂಡಿರಬಹುದು ಆದರೆ ಈ ಕಥೆ ಸಿದ್ಧವಾಗಿದ್ದು ಮೊದಲಿಗೆ ಮತ್ತೊಬ್ಬ ತೆಲುಗು ಸೂಪರ್ ಸ್ಟಾರ್ ಗೆ ಎಂಬುದಾಗಿ ಈಗ ತಿಳಿದು ಬಂದಿದೆ.

ಹೌದು ಮಿತ್ರರೇ, ಸುಕುಮಾರ್ ಅವರು ಮೊದಲು ಈ ಕಥೆಯನ್ನು ತೆಲುಗು ಚಿತ್ರರಂಗದ ಮತ್ತೊಬ್ಬ ಸೂಪರ್ ಸ್ಟಾರ್ ಆಗಿರುವಂತಹ ಮಹೇಶ್ ಬಾಬು ಅವರಿಗಾಗಿ ಬರೆದಿದ್ದರು ಆದರೆ ಮಹೇಶ್ ಬಾಬು(Mahesh Babu) ಅವರಿಗೆ ಚಿತ್ರದ ಕಥೆ ಇಷ್ಟವಾಗಿರಲಿಲ್ಲ ಎಂದು ಕಾಣಿಸುತ್ತೆ ಅದಕ್ಕಾಗಿಯೇ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಅದೇನೇ ಇರಲಿ ಪುಷ್ಪ ಸಿನಿಮಾದ ಎರಡನೇ ಭಾಗಕ್ಕಾಗಿ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

error: Content is protected !!