Amulya: ಮಕ್ಕಳೊಂದಿಗೆ ಹೊಸ ವರ್ಷದ ವಿಶೇಷ ಫೋಟೋಶೂಟ್ ಮಾಡಿಸಿದ ಅಮೂಲ್ಯ, ಇಬ್ಬರು ಮಕ್ಕಳು ಅಪ್ಪನಂತಿದ್ದಾರೆ ಎಂದ ನೆಟ್ಟಿಗರು!

Amulya: ಸ್ನೇಹಿತರೆ ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗವನ್ನು ಪ್ರವೇಶಿಸಿ ನಾಯಕ ನಟಿಯಾಗಿ ತಮ್ಮ ಮನೋಜ್ಞ ನಟನೆಯ ಚಾಪನ್ನು ಮೂಡಿಸಿ ಸದ್ಯ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂತೋಷವನ್ನು ಕಾಣುತ್ತಿರುವ ಸಾಕಷ್ಟು ನಟಿಯರಲ್ಲಿ ಅಮೂಲ್ಯ ಕೂಡ ಒಬ್ಬರು ಸರಳ ಹಾಗೂ ಸೌಮ್ಯ ಸ್ವಭಾವದ ಪಾತ್ರಗಳ ಮೂಲಕವೇ ಎಲ್ಲರ ಗಮನಸೆಳೆದಂತಹ ಅಮೂಲ್ಯ (Amulya) ಮದುವೆಯಾದ ನಂತರ ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡು ತಮ್ಮ ಪತಿ ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾ ಸಂಪೂರ್ಣ ಗೃಹಿಣಿ(housewife) ಯಾಗಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾ(Social media)ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಅಮೂಲ್ಯ ಅವರು ಏಳುನೂರು ಸಾವಿರಕ್ಕೂ ಹೆಚ್ಚಿನ ಅನುಯಾಯಿಗಳನ್ನು ಗಳಿಸಿದ್ದು ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ಪೋಸ್ಟ್ಗಳು ಹಾಗೂ ಸ್ಟೋರಿಗಳನ್ನು ಹಂಚಿಕೊಳ್ಳುತ್ತಾ ಸದಾ ನೆಟ್ಟಿಗರೊಂದಿಗೆ ಒಡನಾಟದಲ್ಲಿ ಇರುತ್ತಾರೆ. ಹೀಗಿರುವಾಗ 2024ರ ಹೊಸ ವರ್ಷದ ಸಂಭ್ರಮವನ್ನು ತಮ್ಮ ಮಕ್ಕಳೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿರುವ ಅಮೂಲ್ಯ ಅವರು ಅವಳಿ ಉಡುಪನ್ನು ಧರಿಸಿ ಇಬ್ಬರು ಮುದ್ದಾದ ಮಕ್ಕಳುೊಂದಿಗೆ ವಿಶೇಷ ಫೋಟೋ ಶೂಟ್ಗಳನ್ನು ಮಾಡಿಸಿದ್ದಾರೆ.

ಅಲ್ಲದೆ ಈ ಎಲ್ಲಾ ಸಾಲು ಸಾಲು ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ನಮ್ಮಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು ಎಂಬ ಕ್ಯಾಪ್ಷನ್ ಬರೆದಿದ್ದಾರೆ. ಜಗದೀಶ್ ಮತ್ತು ಅಮೂಲ್ಯ(Jagadish and Amulya) ದಂಪತಿಗಳ ಇಬ್ಬರು ಮುದ್ದಿನ ಮಕ್ಕಳಾದ ಅಥರ್ವ ಮತ್ತು ಆದವ್ ಅವರಿಗೆ ಅವಳಿ ಉಡುಪನ್ನು ಧರಿಸಿ ಅಮೂಲ್ಯ ಕೂಡ ಬಿಳಿ ಬಣ್ಣದ ಶರ್ಟ್ ಹಾಗೂ ಹಸಿರು ಬಣ್ಣದ ಪ್ಯಾಂಟ್ ಹಾಕಿಕೊಂಡು ಅಚ್ಚ ಹಸಿರಿನಿಂದ ಕೂಡಿರುವಂತಹ ಗಾರ್ಡನ್ ನಲ್ಲಿ ಕುಳಿತು ಬಹಳ ಮುದ್ದಾಗಿ ಫೋಟೋಶೂಟ್ ಮಾಡಿಸಿದ್ದು,

ಫೋಟೋ ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಿದೆ. ಇನ್ನು ಎರಡು ಮುದ್ದಾದ ಮಕ್ಕಳ ತಾಯಿಯಾದರೂ ಮಾಸದ ನಟಿ ಅಮೂಲ್ಯ (Amulya) ಅವರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದು, ಅವರ ಚೆಲುವಿಗೆ ಮನಸೋತು ಭಿನ್ನವಿಭಿನ್ನವಾಗಿ ಕಮೆಂಟ್ ಮಾಡುತ್ತಾ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.

Leave a Comment

error: Content is protected !!