Anasuya Bharadwaj: ಆಂಟಿ ಎಂದು ಕರೆದರೆ ನಟಿ ಅನುಸೂಯ ಭಾರದ್ವಾಜ್ ಅವರಿಗೆ ನಿಜವಾಗಲೂ ಕೋಪ ಬರೋದಕ್ಕೆ ಕಾರಣವೇನು ಎಲ್ಲಿದೆ ನೋಡಿ ನಿಜವಾದ ಮಾಹಿತಿ!

Anasuya Bharadwaj ಈಗಾಗಲೇ ನಟಿ ಹಾಗೂ ನಿರೂಪಕಿಯಾಗಿ ಕಾಣಿಸಿಕೊಂಡಿರುವಂತಹ ಅನಸೂಯ ಭಾರದ್ವಾಜ್(Anasuya Bharadwaj) ಅವರ ಕುರಿತಂತೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಪುಷ್ಪ ಹಾಗೂ ರಂಗಸ್ಥಲಂ ಸಿನಿಮಾದಲ್ಲಿ ಕಾಣಿಸಿಕೊಂಡಿರುವಂತಹ ಈ ನಟಿ ಇಂದಿಗೂ ಕೂಡ ಬೇಡಿಕೆಯಲ್ಲಿರುವಂತಹ ಕಲಾವಿದೆಯರಲ್ಲಿ ಒಬ್ಬರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಹಕಲಾವಿಧೆಯಾಗಿ ಕಾಣಿಸಿಕೊಂಡಿರುವ ಈ ನಟಿ ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.

ಇನ್ನು ಕೆಲವು ವರ್ಷಗಳ ಹಿಂದೆ ಅರ್ಜುನ್ ರೆಡ್ಡಿ(Arjun Reddy) ಹಾಗೂ ಲೈಗರ್ ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲಿ ವಿಜಯ್ ದೇವರಕೊಂಡ(Vijay Deverakonda) ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ಅನಸೂಯ ಭಾರದ್ವಾಜ್ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಆ ಸಂದರ್ಭದಲ್ಲಿ ಅವರನ್ನು ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಆಂಟಿ ಎಂಬುದಾಗಿ ಕರೆಯಲು ಆರಂಭಿಸುತ್ತಾರೆ. ಈ ವಿರುದ್ಧವಾಗಿ ಆಂಟಿ ಎಂದು ಕರೆಯುವುದು ತಪ್ಪು ಎಂಬುದಾಗಿ ಸಾಕಷ್ಟು ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ನಲ್ಲಿ ದೂರನ್ನು ಕೂಡ ದಾಖಲಿಸಿದ್ದರು.

ಇನ್ನು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತರ ಸೆಶನ್ ಅನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಇದೇ ಪ್ರಶ್ನೆಯನ್ನು ಕೇಳಿದ ಅಭಿಮಾನಿಗೆ ಈಗ ಅದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಕ್ಕೆ ನನ್ನ ಬಳಿ ಸಮಯವಿಲ್ಲ ಆದರೂ ಕೂಡ ಮಹಿಳೆಯನ್ನು ಆಂಟಿ ಎಂದು ಸಂಭೋದಿಸುವುದು ಆಕೆಗೆ ಅವಮಾನ ಮಾಡುವಂತಹ ಕೆಲಸ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!