ಮನೆಯ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೇಘ ಶೆಟ್ಟಿ ಹಾಗು ಅನಿವೃದ್ದ್ ಅವರ ಅಪರೂಪದ ಫೋಟೋಸ್

ಕಳೆದ ಕೆಲ ದಿನಗಳ ಹಿಂದಷ್ಟೇ ವಿಷ್ಣುವರ್ಧನ್ ಮನೆಯಲ್ಲಿ ಅದ್ದೂರಿ ಗೃಹಪ್ರವೇಶದ ಕಾರ್ಯಕ್ರಮ ನೆರವೇರಿತ್ತು, ಇವಂದು ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಸಾಕಷ್ಟು ಸಿನಿ ತಾರೆಯರು ಹಾಗೂ ಸೀರಿಯಲ್ ಆಕ್ಟ್ರೆಸ್ಸ್ ಗಳು ಭಾಗಿಯಾಗಿ ಅದ್ದೂರಿ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿಷ್ಣುವರ್ಧನ್(Vishnuvardhan) ಅವರ ಕನಸಿನ ಕೂಸಾಗಿದ್ದಂತಹ ಐಷಾರಾಮಿ ಬಂಗಲೆಯನ್ನು ಭಾರತೀ ವಿಷ್ಣುವರ್ಧನ್ (Bharathi Vishnuvardhan) ಮತ್ತು ಅವರ ಅಳಿಯರಾದಂತಹ ಅನಿರುದ್ಧ(Anirudh)

ನನಸು ಮಾಡುವ ಮೂಲಕ ಆ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತಹ ಮೇಘ ಶೆಟ್ಟಿ(Megha Shetty) ವಿಷ್ಣುವರ್ಧನ್ ಅವರ ಸಂಪೂರ್ಣ ಕುಟುಂಬದೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಅದೆಲ್ಲವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡರು. ಹೀಗೆ ಅನಿರುದ್ಧ ಹಾಗೂ ಕುಟುಂಬದೊಂದಿಗೆ ಬಹಳ ಆತ್ಮೀಯವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವಂತಹ ಮೇಘ ಶೆಟ್ಟಿ(Megha Shetty)

ತಮ್ಮ ಮೊದಲ ಬಣ್ಣದ ಬದುಕಿನ ಕರಿಯರ್ನಲ್ಲಿ ಅನಿರುದ್ಧ ಅವರಂತ ಅದ್ಭುತ ನಟರೊಂದಿಗೆ ತೆರೆಹಂಚಿಕೊಳ್ಳುವಂತಹ ಅವಕಾಶ ಗಿಟ್ಟಿಸಿಕೊಂಡು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ನಲ್ಲಿ ಆರ್ಯವರ್ಧನ್ ಅಳಿಯ ಅನಿರುದ್ಧವರ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಕನ್ನಡಿಗರ ಮನೆಮಗಳಾಗಿ ಹೋದರು. ಸೌಮ್ಯ ಸ್ವಭಾವದ ಹುಡುಗಿಯಾಗಿ ಎಲ್ಲರ ಮನ ಗೆದ್ದಂತಹ ಮೇಘ ಶೆಟ್ಟಿ ಸೀರಿಯಲ್ ಕೆಲಸಗಳಲ್ಲಿ

ಬ್ಯುಸಿ ಇರುವಾಗಲೇ ದಿಲ್ ಪಸಂದ್ ಹಾಗೂ ಟ್ರಿಪಲ್ ರೈಡಿಂಗ್ನಂತಹ ಸಿನಿಮಾಗಳಲ್ಲಿ ಅಭಿನಯಿಸಿ ಸಿನಿ ಪ್ರೇಕ್ಷಕರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯದರು. ಸದ್ಯ ತಮ್ಮ ಅದ್ಭುತ ಫ್ಯಾಶನ್ ಸೆನ್ಸ್ ನಿಂದಾಗಿ ವಿಭಿನ್ನ ರೀತಿಯ ಉಡುಪು ಹಾಗೂ ಆಭರಣಗಳನ್ನು ಧರಿಸಿ ಫೋಟೋಗೆ ಬಹಳ ಬೋಲ್ಡ್ ಆಗಿ ಪೋಸ್ ನೀಡುತ್ತಾ ಅದೆಲ್ಲವನ್ನು ತಮ್ಮ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಪೋಸ್ಟ್ ಮಾಡಿ ನೆಟ್ಟಿಗರನ್ನು ಸೆಳೆಯುವ ಮೇಘ ಕಳೆದ ಕೆಲವು ದಿನಗಳ ಹಿಂದೆ ಅವರು ಈ ಕೆಲವು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಸದ್ಯ ಈ ಫೋಟೋ ಭಾರಿ ವೈರಲ್ ಆಗುತ್ತಿದ್ದು ಅನಿರುದ್ಧವರ ಮನೆ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ತೆಗೆಯಲಾದ ಸುಂದರ ಚಿತ್ರಣಗಳಾಗಿದ್ದು, ಮೂಲವೊಂದರ ಮಾಹಿತಿಯ ಪ್ರಕಾರ ನಟಿ ಮೇಘ ಶೆಟ್ಟಿ(Megha Shetty) ಅನಿರುದ್ಧ(Anirudh) ಅವರ ಮನೆಯ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರಿಗೆ ಬರೋಬ್ಬರಿ 8 ಲಕ್ಷ ಬೆಲೆಬಾಳುವಂತಹ ಟಿವಿ ಒಂದನ್ನು ಉಡುಗೊರೆಯಾಗಿ ನೀಡಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Leave a Comment

error: Content is protected !!