Anushree: ನಿರೋಪಕಿ ಅನುಶ್ರೀಗೆ ಕಲಾ ಶಿರೋಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಗದ್ದುಗೆ ಮಠದ ಸ್ವಾಮೀಜಿ

ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ತಮ್ಮ ಚಿಟಪಟ ಮಾತಿನ ಮೂಲಕವೇ ಜನಪ್ರಿಯತೆ ಪಡೆದಿರುವಂತಹ ಅನುಶ್ರೀ(Anushree) ಅವರು ಕಳೆದ ಕೆಲವು ದಿನಗಳ ಹಿಂದೆ ಕುಳ್ಳುರು ಗದ್ದುಗೆ ಮಹಾ ಸಂಸ್ಥಾನದ ವತಿಯಿಂದ ಕಲಾ ಶಿರೋಮಣಿ(Kala Shiromani) ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಈ ಕುರಿತಾದ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಹೃತ್ಪೂರ್ವಕ ಧನ್ಯವಾದಗಳು ಅನುಶ್ರೀ(Anushree) ತಿಳಿಸಿದ್ದು, ಸದ್ಯ ಈ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದೆ.

ಮೂಲತಃ ತುಳುನಾಡಿನವರಾದ ಅನುಶ್ರೀ ಅವರು ನಟಿಯಾಗಬೇಕೆಂಬ ಆಸೆಯಿಂದ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಆದರೆ ಆರಂಭಿಕ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗದ ಕಾರಣ ತಮ್ಮ ಅದ್ಭುತ ನೃತ್ಯ ಪ್ರತಿಬಭೆ ಇಂದ ಕನ್ನಡ ಕಿರುತೆರೆ ಪ್ರೋಗ್ರಾಮ್ಗಳಲ್ಲಿ(Television programs) ಸ್ಪರ್ಧಿಯಾಗಿ ಭಾಗವಹಿಸಿದರು. ಆನಂತರ ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿ ತಮ್ಮ ವ್ಯಕ್ತಿತ್ವ ಎಂತದ್ದು ಎಂದು ಕರುನಾಡಿಗರಿಗೆ ಪರಿಚಯ ಮಾಡಿಕೊಟ್ಟಂತಹ ಅನುಶ್ರೀ ನಿರೂಪಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಆ ಅವಧಿಯಲ್ಲಿ ಕೇವಲ ಬೆರಣಿಕೆಯಷ್ಟು ನಿರೂಪಕರಿದ್ದ ಕಾರಣ ಅನುಶ್ರೀ ಅವರಿಗೆ ಆಂಕರಿಂಗ್ ಲೋಕ ಕೈ ಹಿಡಿಯುತ್ತದೆ. ಸಾಕಷ್ಟು ರಿಯಾಲಿಟಿ ಶೋಗಳು ಸಿನಿಮಾ ಇವೆಂಟ್ಗಳು ಹಾಗೂ ಮುಂತಾದ ಹಾಸ್ಯ ಕಾರ್ಯಕ್ರಮಗಳನ್ನು ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ನಡೆಸಿಕೊಡಲು ಪ್ರಾರಂಭ ಮಾಡಿದಂತಹ ಅನುಶ್ರೀ ಇಂದು ಕನ್ನಡದ ನಂಬರ್ ಒನ್ ಆಂಕರ್. ನಿರೂಪಣೆಯ ಜೊತೆಗೆ ನಟಿಯಾಗಿಯೂ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಅನುಶ್ರೀ ಹಲವಾರು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಸಹ ನಟಿಯಾಗಿ ಬಣ್ಣ ಹಚ್ಚಿದ್ದಾರೆ.

ಇಂದಿಗೂ ಕೂಡ ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಿರುವಂತಹ ಅನುಶ್ರೀ ಅವರು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ವೀಕ್ಷಕರಿಗೆ ತಮ್ಮದೇ ರೀತಿಯಲ್ಲಿ ಎಂಟರ್ಟೈನ್ಮೆಂಟ್ ನೀಡುತ್ತಿರುವಂತಹ ಅನುಶ್ರೀ ಅವರ ಪ್ರತಿಭೆಯನ್ನು ಗುರುತಿಸಿದ ಕುಳ್ಳೂರು ಗದ್ದುಗೆ ಮಹಾ ಸಂಸ್ಥಾನದ ಸ್ವಾಮೀಜಿಗಳು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಆ ಸಮಯದಲ್ಲಿ ಅವರಿಗೆ ಕಲಾ ಶಿರೋಮಣಿ(Kala Shiromani) ಎಂಬ ಪ್ರಶಸ್ತಿಯನ್ನು ನೀಡಿದ್ದಾರೆ. ಈ ಕುರಿತದ ಕೆಲವು ಸುಂದರ ಫೋಟೋಗಳನ್ನು ಅನುಶ್ರೀ(Anushree) ಅವರು ತಮ್ಮ instagram ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!