ಪುನೀತ್ ಸಾ’ವಿನ ವಿಷಯ ಇನ್ನೂ ಕೂಡ ಅತ್ತೆ ನಾಗಮ್ಮನಿಗೆ ಗೊತ್ತಿಲ್ಲ. ನಾಗಮ್ಮನ ಮುಗ್ಧ ಮಾತುಗಳನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಬೇಜಾರ್ ಆಗುತ್ತೆ

ಆ ದೇವರ ನಡೆ ನಿಜಕ್ಕೂ ರಹಸ್ಯ. ಒಳ್ಳೆಯವರನ್ನು ಅತಿಬೇಗನೆ ತಂದ ಬರೀ ಕರೆಸಿಕೊಳ್ಳುತ್ತಾ ಕೆಟ್ಟದ್ದನ್ನು ಮಾಡುವವರನ್ನು ಭೂಮಿಯ ಮೇಲೆ ಇರಿಸುತ್ತಾನೆ. ಅಪ್ಪು ನಂತಹ ತಿನ್ನದಂಥ ಮನಸ್ಸಿನ ವ್ಯಕ್ತಿಯನ್ನು ದೇವರು ಗಡಿಬಿಡಿ ಮಾಡಿ ಕರೆಸಿಕೊಂಡಿದ್ದು ನಿಜಕ್ಕೂ ದೇವರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆ ದೇವರಿಗೆ ಪುನೀತ್ ರಾಜ್ ಕುಮಾರ್ ಮೇಲೆ ಅಸೂಯೆ ಬಂದು ತನ್ನ ಬಳಿ ಕರೆಸಿಕೊಂಡಿರ ಬೇಕು. ಅಪ್ಪು ಇಲ್ಲದೆ ಇಂದು ಇಡೀ ಕರ್ನಾಟಕವೇ ಸಂಕಟ ಪಡುತ್ತಿದೆ.

ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಇಹಲೋಕವನ್ನು ತ್ಯಜಿಸಿರುವ ವಿಷಯ ಇಡೀ ಕರ್ನಾಟಕಕ್ಕೆ ತಿಳಿದಿದೆ. ಅವರು ತೀರಿಕೊಂಡು ಇಂದಿಗೆ 4 ತಿಂಗಳುಗಳು ಕಳೆಯುತ್ತ ಬಂದಿವೆ. ಆಶ್ಚರ್ಯಕರ ಮತ್ತು ಭಾವನಾತ್ಮಕ ವಿಷಯ ಏನೆಂದರೆ ಪುನೀತ್ ಅವರ ಅತ್ತೆ ನಾಗಮ್ಮನಿಗೆ ಪುನೀತ್ ಅವರು ಇಲ್ಲ ಎಂಬ ವಿಷಯ ಇಲ್ಲಿವರೆಗೆ ಕೂಡ ಗೊತ್ತಿಲ್ಲ. ತನ್ನ ಅಳಿಯ ಇಲ್ಲೇ ಇದ್ದಾನೆ. ಸಿನಿಮಾಗಳಲ್ಲಿ ನಟನೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾನೆ ಎಂದು ನಾಗಮ್ಮ ನಂಬಿಕೊಂಡಿದ್ದಾರೆ.

ನಾಗಮ್ಮ ಅವರು ಯಾರು ಎಂಬ ವಿಷಯ ನಿಮಗೆ ಗೊತ್ತಿಲ್ಲದೆ ಇದ್ದರೆ ಇವರು ರಾಜ್ ಕುಮಾರ್ ಅವರ ತಂಗಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಗಮ್ಮ ಅವರು ಅತ್ತೆಯಾಗುತ್ತಾರೆ. ನಾಗಮ್ಮ ಅವರಿಗೆ ಪುನೀತ್ ಅವರೆಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಯಾಕೆಂದರೆ ಕಪ್ಪು ಚಿಕ್ಕವರಿದ್ದಾಗ ಲಾಲನೆ ಪಾಲನೆ ಮಾಡಿ ಪುನೀತ್ ಅವರನ್ನು ಸಾಕಿ ಸಲುಹಿದ್ದು ನಾಗಮ್ಮ. ಅಪ್ಪು ಅವರು ಚಿಕ್ಕವರಿದ್ದಾಗ ಡಾಕ್ಟರ್ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರು ಸಿನಿಮಾಗಳ ಕೆಲಸಗಳಲ್ಲಿ ಬಿಜಿಯಾಗಿದ್ದರು.

ಈ ಸಮಯದಲ್ಲಿ ಅಪ್ಪು ಅವರನ್ನು ಪ್ರತಿದಿನ ಬೆಳಿಗ್ಗೆ ಯಿಂದ ಸಂಜೆವರೆಗೆ ನಾಗಮ್ಮ ಅವರೇ ನೋಡಿಕೊಳ್ಳುತ್ತಿದ್ದರು. ಪುನೀತ್ ಅವರು ಕೂಡ ನಾಗಮ್ಮ ಅವರ ಮೇಲೆ ತಾಯಿಯಷ್ಟೇ ಪ್ರೀತಿ ತೋರುತ್ತಿದ್ದರು. ನಾಗಮ್ಮ ಅವರಿಗೆ 90 ವರ್ಷ ವಯಸ್ಸಾಗಿದೆ ಆದರೆ ಇಂದಿಗೆ ಕೂಡ ಇವರು ಗಟ್ಟಿಮುಟ್ಟಾಗಿರುವುದು ತುಂಬಾ ಖುಷಿಯ ವಿಚಾರ. ನಾಗಮ್ಮ ಅವರಿಗೆ ಪುನೀತ್ ಅವರು ತೀರಿಕೊಂಡ ದಿನ ದಿಂದ ಇಲ್ಲಿಯವರೆಗೆ ದೊಡ್ಮನೆ ಕುಟುಂಬದ ಯಾವ ಸದಸ್ಯರೂ ಕೂಡ ಈ ವಿಷಯವನ್ನು ತಿಳಿಸಿಲ್ಲ.

ಹೌದು ಸ್ನೇಹಿತರೆ.. ನಾಗಮ್ಮ ಅವರಿಗೆ ವಯಸ್ಸಾದ ಕಾರಣ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾಗಮ್ಮ ಅವರು ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ವೈದ್ಯರು ಇವರ ಮನೆಗೆ ಬಂದು ಪ್ರತಿದಿನ ಇವರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಾಗಮ್ಮ ಅವರಿಗೆ ಅಪ್ಪು ಅವರು ಇಲ್ಲ ಎಂಬ ವಿಷಯ ತಿಳಿದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತೆ. ಮತ್ತು ಮಾನಸಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಇದೇ ಕಾರಣದಿಂದ ನಾಗಮ್ಮ ಅವರಿಗೆ 4 ತಿಂಗಳಾದರೂ ಅಪ್ಪು ಇಲ್ಲ ಎಂಬ ವಿಷಯ ತಿಳಿದೇ ಇಲ್ಲ.

ನಾಗಮ್ಮ ಅವರು ಇಂದು ಕೂಡ ಅಪ್ಪು ಬದುಕಿದ್ದಾರೆ ಎಂದು ಅಂದುಕೊಂಡು ಪುನೀತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಮತ್ತು ಬಿಡುಗಡೆ ಕಂಡಿರುವ ಜೇಮ್ಸ್ ಚಿತ್ರಕ್ಕೆ ಶುಭ ಕೋರಿದ್ದಾರೆ. ನಾಗಮ್ಮ ಅವರ ಈ ಮುಗ್ಧ ಪರಿಸ್ಥಿತಿಯನ್ನು ನೋಡಿದರೆ ನಿಜಕ್ಕೂ ನಮ್ಮ ಮನಸ್ಸು ಚುರ್ ಅನ್ನುತ್ತದೆ. ಅಯ್ಯೋ ದೇವರೇ ನೀನು ನಿಜವಾಗಲೂ ಇದ್ದೀಯಾ ? ಒಳ್ಳೆಯ ವ್ಯಕ್ತಿಯನ್ನು ಉಳಿಸಿಕೊಳ್ಳಲು ಯೋಗ್ಯತೆ ನಿನಗೆ ಇಲ್ಲವೋ ಎಂದು ದೇವರಿಗೆ ಪ್ರಶ್ನಿಸೋಣ ಎಂದು ಅನಿಸುತ್ತದೆ.

Leave A Reply

Your email address will not be published.

error: Content is protected !!