ಇಡೀ ಪ್ರಪಂಚದಲ್ಲಿ ಯಾವ ಹೀರೋಗೂ ಸಿಗದ ಆತಿಥ್ಯ ಅಪ್ಪುಗೆ ಸಿಗಲಿದೆ. ಅಪ್ಪು ಹುಟ್ಟುಹಬ್ಬಕ್ಕೆ ಏನೆಲ್ಲಾ ಕಾರ್ಯಕ್ರಮಗಳು ಇರುತ್ತೆ ಗೊತ್ತಾ

ಒಬ್ಬ ಮನುಷ್ಯನ ನಿಜವಾದ ಬೆಲೆ ಗೊತ್ತಾಗೋದು ಅವನು ಬದುಕಿದ್ದಾಗ ಅಲ್ಲ ಅವನು ಇಲ್ಲದೇ ಇದ್ದಾಗ. ನಾವೆಲ್ಲಾ ಬದುಕಿದ್ದಾಗ ಹಣವನ್ನು ಪರದಾಡುತ್ತದೆ ಆದರೆ ನಿಜವಾಗಲೂ ಮನುಷ್ಯ ಬದುಕಿದ್ದಾಗ ಪ್ರೀತಿಯನ್ನು ಸಂಪಾದನೆ ಮಾಡಬೇಕು. ಬದುಕಿದ್ದಾಗ ಜನರ ಪ್ರೀತಿಯನ್ನು ಹೇಗೆ ಸಂಪಾದನೆ ಮಾಡಬೇಕೆಂದು ಪುನೀತ್ ರಾಜ್ ಕುಮಾರ್ ಅವರು ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಎಂಬುವವರ ಮೇಲೆ ಕನ್ನಡಿಗರಿಗೆ ಹುಚ್ಚು ಪ್ರೀತಿ. ಪುನೀತ್ ಅವರನ್ನು ಕರ್ನಾಟಕದ ಮನೆ ಮಗ ಎಂದರೆ ತಪ್ಪಾಗಲಾರದು.

ಅಪ್ಪು ಬದುಕಿದ್ದಾಗ ಮಾಡಿದ ಸಹಾಯ ಒಂದಲ್ಲ ಎರಡಲ್ಲ.. ಅಪ್ಪು ಸಾವಿರಾರು ಮಂದಿಯ ಮನೆಯ ನಂದಾದೀಪವಾಗಿ ಬೆಳಗುತ್ತಿದ್ದರು. ಇಂದು ಪುನೀತ್ ಅವರ ದೇಹ ನಮ್ಮ ಜೊತೆಗೆ ಇಲ್ಲದೇ ಇದ್ದರೂ ಅಶರೀರಿಕವಾಗಿ ಅಪ್ಪು ಅವರು ನಮ್ಮ ಜೊತೆಗೆ ಸದಾ ಇರುತ್ತಾರೆ. ಮನುಷ್ಯಕುಲ ಇರುವವರಗೂ ಅಪ್ಪು ಅವರ ನೆನಪು ಸದಾ ಇರುತ್ತದೆ. ಸ್ಮಿತ್ ಅವರು ದೈಹಿಕವಾಗಿ ನಮ್ಮನ್ನೆಲ್ಲ ಬಿಟ್ಟು 4 ತಿಂಗಳುಗಳು ಕಳೆದಿವೆ. ಮೊದಲ ಬಾರಿಗೆ ಪುನೀತ್ ಅವರು ಇಲ್ಲದೆ ಅವರ ಹುಟ್ಟುಹಬ್ಬವನ್ನು ನಾವು ಆಚರಿಸಬೇಕಾದ ಪರಿಸ್ಥಿತಿ ಬಂದಿದೆ.

ಮುಂದಿನ ಗುರುವಾರ ಮಾರ್ಚ್ 17 ರಂದು ಪುನೀತ್ ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಲಕ್ಷಾಂತರ ಅಭಿಮಾನಿಗಳು ಸಿದ್ಧರಾಗಿದ್ದಾರೆ. ಇಡೀ ಪ್ರಪಂಚದಲ್ಲೇ ಇದು ಅತ್ಯಂತ ಸಡಗರ ಮತ್ತು ಆಡಂಬರದ ಹುಟ್ಟುಹಬ್ಬ ಎನಿಸಿಕೊಳ್ಳಲಿದೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ತಮ್ಮ ಸ್ವಂತ ಸಂಪಾದನೆಯ ಹಣವನ್ನು ಹೊಂದಿಸಿ ಪುನೀತ್ ಅವರ ಹುಟ್ಟುಹಬ್ಬವನ್ನು ಆಚರಿಸಲು ರೆಡಿಯಾಗಿದ್ದಾರೆ. ಹಿಂದೆ ಯಾವ ಹೀರೋ ಕೂಡ ಆಚರಿಸಿ ಕೊಳ್ಳದಂತಹ ಹುಟ್ಟುಹಬ್ಬ ಇದಾಗಲಿದೆ.

ಮಾರ್ಚ್ 17 ಗುರುವಾರದಂದು ಪುನೀತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಪ್ಪುವವರ ಕೊನೆಯ ಚಿತ್ರವಾದ ಜೇಮ್ಸ್ ಬಿಡುಗಡೆಯಾಗಲಿದೆ. ಬೆಂಗಳೂರಿನ ವೀರೇಶ್ ಥಿಯೇಟರ್ ಮುಂದೆ ಅಪ್ಪು ಅವರ 32 ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಅಪ್ಪು ಅವರ ಎಲ್ಲಾ ಸಿನೆಮಾ ಗಳ ಕಟ್ ಔಟ್ ಗಳನ್ನು ನಿಲ್ಲಿಸಲಾಗಿದೆ. ಒಬ್ಬ ನಟನ ಚಿತ್ರ ಬಿಡುಗಡೆಯಾಗುವ ದಿನ 32 ಕಟೌಟ್ ಗಳನ್ನು ನಿಲ್ಲಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಹಾಗೆ ಗುರುವಾರ ಬೆಳಿಗ್ಗೆ ಪುನೀತ್ ಅವರ ಕಟೌಟ್ ಗೆ ಹೆಲಿಕಾಪ್ಟರ್ ನಿಂದ ಹೂವಿನ ಸುರಿಮಳೆ ಸುರಿಯಲಿದೆ.

ಇಷ್ಟೇಲ್ಲ ಅಪ್ಪು ಅವರ ಹುಟ್ಟಿದ ದಿನ ಸಾವಿರಾರು ಅನಾಥ ಮಕ್ಕಳಿಗೆ ವೃದ್ಧಾಶ್ರಮಗಳಿಗೆ ಮತ್ತು ಬಡಮಕ್ಕಳಿಗೆ ಬಟ್ಟೆ ಪುಸ್ತಕ ಮತ್ತು ಊಟಗಳನ್ನು ನೀಡಲಾಗುತ್ತದೆ. ರ ಕ್ತದಾನ ನೇತ್ರದಾನ ಮತ್ತು ಅನ್ನದಾನ ಶಿಬಿರಗಳನ್ನು ನಡೆಸಲಾಗುತ್ತಿದೆ. ಸುಮಾರು 20 ರಿಂದ 30 ಸಾವಿರ ಜನರು ಅಪ್ಪು ಅವರ ಹುಟ್ಟುಹಬ್ಬದ ದಿನ ಮೆರವಣಿಗೆಯನ್ನು ನಡೆಸುತ್ತಾರೆ. ಇಷ್ಟೆಲ್ಲಾ ವಿಜೃಂಭಣೆಯ ಕಾರ್ಯಕ್ರಮಗಳು ಅಪ್ಪು ಅವರ ಹುಟ್ಟುಹಬ್ಬದ ದಿನ ನೆರವೇರಲಿದೆ.

ಗುರುವಾರ ಅಪ್ಪು ಅವರ ಜೇಮ್ಸ್ ಚಿತ್ರಬಿಡುಗಡೆಯಾಗುವ ದಿನ ಬೇರೆ ಯಾವುದೇ ಚಿತ್ರ ಕೂಡ ಕರ್ನಾಟಕದಲ್ಲಿ ಬಿಡುಗಡೆ ಕಾಣುತ್ತಿಲ್ಲ. ಕಳೆದ 2 ತಿಂಗಳಿಂದ ಸತತವಾಗಿ ಅಪ್ಪು ಅವರ ಹುಟ್ಟುಹಬ್ಬಕ್ಕೆ ಮತ್ತು ಅಪ್ಪು ಅವರ ಕೊನೆಯ ಚಿತ್ರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಅಪ್ಪು ಅವರ ಈ ಹುಟ್ಟುಹಬ್ಬದ ಆಡಂಬರವನ್ನು ಇಡೀ ಭಾರತವೇ ತಿರುಗಿ ನೋಡುವುದಂತೂ ಖಚಿತ. ಇಂತಹ ಆತಿಥ್ಯ ಸಿಗಬೇಕೆಂದರೆ ಅದು ಪುನೀತ್ ರಾಜ್ ಕುಮಾರ್ ರಂತಹ ವ್ಯಕ್ತಿಗೆ ಮಾತ್ರ ಸಾಧ್ಯ.

Leave A Reply

Your email address will not be published.

error: Content is protected !!