ಮಿಸ್ಸಸ್ ಇಂಡಿಯಾ ವಿನ್ನರ್ ಆಗಿದ್ದ ಅತೀ ಸುಂದರ ಯುವತಿ. ಮದುವೆಯಾದ ಮೇಲೆ ಈ ಬ್ಯೂಟಿ ಕ್ವೀನ್ ಬಾಳಲ್ಲಿ ನಡೆದಿದ್ದು ಏನು ಗೊತ್ತಾ

ಜ್ಯೋತಿ ಮಲಾನಿ ಎಂಬ 27 ವರ್ಷದ ಯುವತಿ ಬೆಂಗಳೂರಿನ ನಿವಾಸಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಅತಿಯಾದ ಆಸಕ್ತಿಯನ್ನು ಹೊಂದಿದ್ದ ಇವಳು 2006 ರಿಂದ ಬ್ಯೂಟಿ ಬೆಂಗಳೂರಿನ ಕಾಂಟೆಸ್ಟ್ ಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಳು. ಜ್ಯೋತಿ ಗೆ ಒಂದು ದಿವಸ ಬ್ಯೂಟಿ ಕಂಟೆಸ್ಟ್ ನಲ್ಲಿ ಪಂಕಜ್ ಎಂಬ ಬಿಸಿನೆಸ್ ಮ್ಯಾನ್ ಪರಿಚಯವಾಗುತ್ತದೆ. ಈ ಪಂಕಜ್ ಎಂಬ ವ್ಯಕ್ತಿ ಐರನ್ ವೇರ್ ಬಿಸಿ ನೆಸ್ ಹೊಂದಿದ್ದ. ಈತ ತುಂಬಾ ರಿಚ್ ಬಿಸಿನೆಸ್ ಮೆನ್ ಆಗಿದ್ದ. ಪಂಕಜ್ ಮತ್ತು ಜ್ಯೋತಿ ನಡುವೆ ಸ್ನೇಹ ಬೆಳೆದು ನಂತರ ಸ್ನೇಹ ಪ್ರೀತಿ ಆಗುತ್ತದೆ.

ಆಗತಾನೆ ಪರಿಚಯವಾಗಿದ್ದ ಪಂಕಜ್ ಜ್ಯೋತಿ ಬಳಿ ಹೋಗಿ ತಕ್ಷಣವೇ ಮದುವೆ ಆಗು ಎಂದು ಒತ್ತಾಯಿಸುತ್ತಾನೆ. ಮನೆಯವರನ್ನು ಒಪ್ಪಿಸಿ ಈಗಲೇ ಮದುವೆ ಆಗೋಣ ಎಂದು ಹಟ ಹಿಡಿಯುತ್ತಾನೆ. ಪಂಕಜ್ ನನ್ನ ಹಿತೈಷಿ ಎಂದು ಜ್ಯೋತಿ ಅಂದುಕೊಳ್ಳುತ್ತಾಳೆ. ಇಬ್ಬರ ಜಾ ತಿ ಬೇರೆ ಬೇರೆಯಾಗಿದ್ದರೂ ಸಹ ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದರಿಂದ ಮನೆಯವರನ್ನು ಹಾಗೋ ಹೀಗೋ ಒಪ್ಪಿಸಿ ಮದುವೆ ಆಗಿ ಬಿಡುತ್ತಾರೆ. ಇಬ್ಬರೂ 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮದುವೆಯಾದ ನಂತರ ಜ್ಯೋತಿ ಮತ್ತು ಪಂಕಜ್ ಜೆಪಿ ನಗರದಲ್ಲಿ ಫ್ಲ್ಯಾಟ್ ವೊಂದನ್ನು ಖರೀದಿಸಿ ಅಲ್ಲಿಗೆ ಶಿಫ್ಟ್ ಆಗುತ್ತಾರೆ. ನಂತರ ಜ್ಯೋತಿಗೆ ಹೆಣ್ಣು ಮಗು ಕೂಡ ಹುಟ್ಟುತ್ತೆ. ಮಗುವನ್ನು ಲಾಲನೆ ಪಾಲನೆ ಮಾಡುವುದರ ಸಲುವಾಗಿ ಮಾಡೆಲಿಂಗ್ ಕ್ಷೇತ್ರವನ್ನು ಜ್ಯೋತಿ ಅರ್ಧಕ್ಕೆ ಕೈ ಬಿಡುತ್ತಾಳೆ. ನನ್ನ ಮಗಳು ಬೆಳೆದು ಶಾಲೆಗೆ ಹೋಗುವಷ್ಟು ದೊಡ್ಡವಳಾಗುತ್ತಾಳೆ ಆಗ ಜ್ಯೋತಿ ಮತ್ತೆ ಮೋಡೆಲಿಂಗ್ ಕೆಲಸವನ್ನು ಪ್ರಾರಂಭಿಸುತ್ತಾಳೆ. ಆದರೆ ಮೋಡೆಲಿಂಗ್ ಕ್ಷೇತ್ರವೇ ತನಗೆ ಮುಳ್ಳು ಆಗುತ್ತೇ ಅಂತ ಜ್ಯೋತಿಗೆ ತಿಳಿದಿರಲಿಲ್ಲ.

ತನ್ನ ಹೆಂಡತಿ ಎಲ್ಲರ ಮುಂದೆ ಅರ್ಧಮರ್ಧ ಬಟ್ಟೆಯನ್ನು ಹಾಕಿಕೊಂಡು ಓಡಾಡುವುದು ಗಂಡ ಪಂಕಜ್ ಗೆ ಸ್ವಲ್ಪ ಕೂಡ ಇಷ್ಟವಿರಲಿಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಈ ರೀತಿಯಾದ ಬಟ್ಟೆಗಳನ್ನು ಹಾಕುವುದು ಸರ್ವೇಸಾಮಾನ್ಯ ಹಾಗೆ ನೋಡಿದರೆ ಈಗಿನ ಕಾಲೇಜ್ ಹುಡುಗಿಯರು ಕೂಡ ಈ ರೀತಿಯ ಬಟ್ಟೆಗಳನ್ನು ಹಾಕುತ್ತಾರೆ ಇದಕ್ಕೆಲ್ಲಾ ನೀವೇ ಎಂದು ಜ್ಯೋತಿ ಗಂಡನಿಗೆ ತಿಳಿಸಿ ಹೇಳಿದ್ದಳು. ದಿನೇದಿನೇ ಗಂಡ ಪಂಕಜ್ ನ ಅನುಮಾನದ ಮನಸ್ಥಿತಿ ಹೆಚ್ಚಾಗುತ್ತಲೇ ಹೋಗುತ್ತದೆ.

ಹೆಂಡತಿ ಬಳಿ ನೀನು ಬೇರೊಬ್ಬ ಪುರುಷನ ಕಾರಿನಲ್ಲಿ ಓಡಾಡುವುದು ಪಬ್ ಗಳಿಗೆ ಹೋಗಿ ಬೇರೆಯವರ ಜತೆ ಎಂಜಾಯ್ ಮಾಡೋದು ನನಗೆ ಸ್ವಲ್ಪ ಕೂಡ ಇಷ್ಟವಿಲ್ಲ ಎಂದು ಗಂಡ ಹೇಳ್ತಾನೆ. ಆಗ ಜ್ಯೋತಿ ಇದೆಲ್ಲ ಮಾಡೆಲಿಂಗ್ ಕ್ಷೇತ್ರದ ಒಂದು ಭಾಗವಷ್ಟೆ ಇದಕ್ಕೆಲ್ಲ ನಾನಾ ರೀತಿಯ ಅರ್ಥವನ್ನು ಕಲ್ಪಿಸಿ ಅತಿರೇಕಕ್ಕೆ ತೆಗೆದುಕೊಂಡು ಹೋಗುವುದು ಬೇಡ ಎಂದು ಗಂಡನಿಗೆ ಬುದ್ಧಿವಾದ ಹೇಳ್ತಾಳೆ.ತನ್ನ ಹೆಂಡತಿಯ ಸಮಜಾಯಿಷಿ ಮಾತುಗಳನ್ನು ಕೇಳುವಷ್ಟು ತಾಳ್ಮೆ ಪಂಕಜ್ ಗೆ ಇರಲಿಲ್ಲ.

2019 ರಲ್ಲಿ ಜ್ಯೋತಿ ಮಾಡೆಲಿಂಗ್ ಕ್ಷೇತ್ರದ ಮಿಸಸ್ ಇಂಡಿಯಾ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಆ ದಿನ ಕರ್ನಾಟಕದ ಅತ್ಯಂತ ದಿನಪತ್ರಿಕೆಗಳನ್ನು ಮತ್ತು ಟಿವಿಯಲ್ಲಿ ಜ್ಯೋತಿಕಾ ಅವರ ಸಾಧನೆಯನ್ನು ಹೊಗಳುತ್ತಾರೆ. ಹೆಂಡತಿಯ ಸಾಧನೆಯನ್ನು ನೋಡಿ ಹೊಗಳಬೇಕಿದ್ದ ಗಂಡ ಅಸೂಯೆ ಪಡೋಕೆ ಪ್ರಾರಂಭಿಸುತ್ತಾನೆ. ಪಂಕಜ್ ದೃಷ್ಟಿಕೋನವೇ ಬದಲಾಗುತ್ತದೆ. ಜ್ಯೋತಿ ಬಳಿ ನಿನಗೆ ಬೇರೆ ಗಂಡಸರ ಜೊತೆ ಸಂಪರ್ಕವಿದೆ ನೀನು ಅ ಕ್ರಮ ಸಂಬಂಧಗಳನ್ನು ಹೊಂದಿದ್ದಿಯಾ ಎಂದು ಚು ಚ್ಚು ಮಾತುಗಳನ್ನು ಆಡಲು ಆರಂಭಿಸುತ್ತಾನೆ.

ಗಂಡನ ಇಂತಹ ಅಸಹ್ಯ ಮಾತುಗಳನ್ನು ಕೇಳಿ ಜ್ಯೋತಿಗೆ ತುಂಬಾ ಬೇಸರವಾಗುತ್ತದೆ ತನ್ನ ಮಗಳ ತಲೆಯ ಮೇಲೆ ಆಣೆ ಮಾಡಿ ನಾನು ಬೇರೆ ಗಂಡಸರ ಜೊತೆ ಕೆಟ್ಟದಾದ ಸಂಬಂಧವನ್ನು ಹೊಂದಿಲ್ಲ ಎಂದು ಪ್ರಮಾಣ ಮಾಡುತ್ತಾಳೆ. ಬಂದ ಮೇಲೆ ಅನುಮಾನ ಪಡಬೇಡಿ ಎಂದು ಎಷ್ಟೇ ಹೇಳಿದರೂ ಕೂಡ ಪಂಕಜ್ ಮನಸ್ಸು ಕರಗಲಿಲ್ಲ. 2019 ಅಗಸ್ಟ್ 7 ನೇ ತಾರೀಕಿನ ರಾತ್ರಿ ಪಂಕಜ್ ಮತ್ತು ಜ್ಯೋತಿ ಊಟ ಮುಗಿಸಿದ್ದರು ಊಟ ಮುಗಿದ ತಕ್ಷಣ ಇದೇ ವಿಷಯಕ್ಕೆ ಮತ್ತೆ ಮನೆಯಲ್ಲಿ ವಾದ ವಿವಾದ ಉಂಟಾಗುತ್ತದೆ. ಸಿಡಿಮಿಡಿಗೊಂಡ ಪಂಕಜ್ ನಾನು ಇನ್ಮೇಲೆ ನಿನ್ನ ಜೊತೆ ಬದ್ಕಲ್ಲ ನನ್ನ ಸಹೋದರನ ಮನೆಗೆ ಹೋಗ್ತೀನಿ ಅಂತ ಹೊರಟೇ ಬಿಡುತ್ತಾನೆ.

ತನ್ನ ಗಂಡನೇ ನನ್ನನ್ನು ಅನುಮಾನದಿಂದ ನೋಡುತ್ತಿದ್ದಾನೆ. ಪಂಕಜ್ ಗೆ ನನ್ನ ಮೇಲೆ ಅಪವಾದ ನನ್ನ ಮಗಳ ಮೇಲೆ ಯಾವುದೇ ಕನಿಕರ ಅಥವಾ ಕಾಳಜಿಯಿಲ್ಲ ಎಂದು ಜ್ಯೋತಿ ಆ ದಿನ ರಾತ್ರಿ ಒಂದು ಕಟು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ತನ್ನ ಪುಟ್ಟ ಮಗುವನ್ನು ಕರೆದುಕೊಂಡು 21 ನೇ ಅಂತಸ್ತಿಗೆ ಹೋಗುತ್ತಾಳೆ. 21 ನೇ ಅಂತಸ್ತಿನ ಮಹಡಿಯ ಮೇಲಿಂದ ಮೊದಲು ತನ್ನ ಮಗಳನ್ನು ಎಸೆಯುತ್ತಾಳೆ ಮಗ್ಗಲು ಕೆಳಗೆ ಬೀಳುವುದರೊಳಗೆ ಜ್ಯೋತಿ ಕೂಡ ಜಿಗಿಯುತ್ತಾಳೆ. ಅಮ್ಮ ಮಗಳು ಇಬ್ಬರೂ ಅಲ್ಲೇ ಜೀವವನ್ನು ಕಳೆದುಕೊಳ್ಳುತ್ತಾರೆ.

ವಿನಾಕಾರಣ ಜ್ಯೋತಿಯನ್ನು ಪಂಕಜ್ ಅನುಮಾನಿಸಿದ ಕಾರಣವೇ ಜ್ಯೋತಿ ಈ ಕೆಲಸವನ್ನು ಮಾಡಿದ್ದಾಳೆ ಇದಕ್ಕೆಲ್ಲ ಪಂಕಜ್ ಕಾರಣ ಎಂದು ಜ್ಯೋತಿ ಕುಟುಂಬ ದವರು ಕಂಪ್ಲೆಂಟ್ ದಾಖಲು ಮಾಡಿದ್ದಾರೆ . ಪೊಲೀಸರು ಪಂಕಜ್ ನ ಮೇಲೆ ಕೇಸನ್ನು ದಾಖಲು ಮಾಡಿದ್ದಾರೆ. ಜ್ಯೋತಿಗೆ ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಹೇಗೆ ನಿಭಾಯಿಸಬೇಕೆಂಬ ಚೆನ್ನಾಗಿ ತಿಳಿದಿತ್ತು ಆದರೆ ಪಂಕಜ್ ನಂತಹ ಅನುಮಾನಸ್ಪದ ಜೀವಿಯ ಜತೆ ಬದುಕುವುದು ಇವಳಿಗೆ ತುಂಬಾ ಕಷ್ಟವಾಗಿತ್ತು. ಪ್ರತಿಯೊಬ್ಬ ಹೆಣ್ಣಿಗೂ ಅವಳದ್ದೆ ಆದ ಸಾಮಾಜಿಕ ಬದುಕು ಇರುತ್ತದೆ. ಅದನ್ನು ನಿಭಾಯಿಸುವ ಶಕ್ತಿ ಹೆಣ್ಣಿಗೆ ಇರುತ್ತೆ ಇದನ್ನ ಪ್ರತಿಯೊಬ್ಬ ಗಂಡನು ಅರ್ಥ ಮಾಡಿಕೊಳ್ಳುವಂತಹ ಉದಾರ ಭಾವನೆ ಹೊಂದಿರಬೇಕು.

Leave A Reply

Your email address will not be published.

error: Content is protected !!