Appu Birthday: ಅಪ್ಪು ಬರ್ತಡೆಗೆ ಎಷ್ಟು ಸಾವಿರ ಜನಕ್ಕೆ ಊಟ ರೆಡಿ ಆಗ್ತಿದೆ ಗೊತ್ತಾ? ಅನ್ನದಾತ ನಮ್ಮೆಲ್ಲರ ಅಪ್ಪು.

Puneeth Rajkumar ಅಣ್ಣಾವ್ರ ಕಿರಿಯ ಮಗ ಆಗಿದ್ದರೂ ಕೂಡ ಕನ್ನಡಿಗರ ನೆಚ್ಚಿನ ನಟ ಆಗಿದ್ದರು ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar). ಅವರು 46ನೇ ವಯಸ್ಸಿಗೆ ಅಗಲಿದ್ದು ನಿಜಕ್ಕೂ ಕೂಡ ನಮ್ಮೆಲ್ಲರನ್ನು ನೋ’ ವಿನ ಕೂಪಕ್ಕೆ ತಳ್ಳಿದೆ. ತಾವಿದ್ದಷ್ಟು ವರ್ಷ ಸಿನಿಮಾ ಹಾಗೂ ಜನಸೇವೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಾಧನೆಯನ್ನು ಮಾಡಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಜನರ ಸೇವೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದರು ಕೂಡ ಯಾರೊಂದಿಗೂ ಈ ವಿಚಾರವನ್ನು ಪ್ರಚಾರಕ್ಕಾಗಿ ಹೇಳಿದವರಲ್ಲ. ಇದು ನಮ್ಮೆಲ್ಲರ ನೆಚ್ಚಿನ ಅಪ್ಪು(Appu) ಅವರ ಬಂಗಾರದ ಮನಸ್ಸಿಗೆ ನಾವು ನೀಡುವಂತಹ ಒಂದು ಜೀವಂತ ಉದಾಹರಣೆಯಾಗಿದೆ ಎನ್ನಬಹುದಾಗಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬ ಕನ್ನಡಿಗನು ಅವರ ಜೀವನವನ್ನು ಆದರ್ಶವಾಗಿ ತೆಗೆದುಕೊಂಡು ಜೀವನ ನಡೆಸಬೇಕು.

ಇಂದಿನ ಪಠ್ಯಪುಸ್ತಕಗಳಲ್ಲಿ ಕೂಡ ಅವರ ಜೀವನವನ್ನು ಪಾಠವನ್ನಾಗಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ ಎಂದರೆ ಅವರ ಸಾಧನೆ ಎಷ್ಟು ಇರಬಹುದು ಎಂಬುದನ್ನು ನೀವೇ ಅಂದಾಜು ಮಾಡಬಹುದಾಗಿದೆ. ಇನ್ನು ಇಂದು ಅವರ ಜನ್ಮದಿನಾಚರಣೆಯ ಪ್ರಯುಕ್ತವಾಗಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ಈಗಾಗಲೇ ಅವರ ಸಮಾಧಿಗೆ ಅಲಂಕಾರವನ್ನು ಮಾಡಿದ್ದು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದಾರೆ. ಇನ್ನು 80,000ಕ್ಕೂ ಅಧಿಕ ಅಭಿಮಾನಿಗಳಿಗೆ ಪುನೀತ್(Puneeth) ಅವರ ನೆಚ್ಚಿನ ಪಲಾವ್ ಅನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಮರಣ ಹೊಂದಿದ ನಂತರ ಕೂಡ ಎಲ್ಲರಿಗೂ ಅನ್ನದಾತನಾಗಿರುವ ಪುನೀತ್ ರಾಜಕುಮಾರ್(Puneeth Rajkumar) ರವರಿಗೆ ನಮ್ಮೆಲ್ಲರ ನಮನ. ಸೂರ್ಯ ಚಂದ್ರ ರಿರುವ ತನಕವೂ ಕೂಡ ಅವರ ಹೆಸರು ಅಜರಾಮರವಾಗಿರಲಿ.

Leave a Comment

error: Content is protected !!