Dboss: ದರ್ಶನ್ ಮನೆಗೆ ನುಗ್ಗಿ ಹೊಡಿತೀನಿ ಅಂದಿದ್ದ ಅಪ್ಪು ಫ್ಯಾನ್ ಗತಿ ಈಗ ಏನಾಗಿದೆ ಗೊತ್ತಾ?

Appu Fan ಕಳೆದ ಸಾಕಷ್ಟು ತಿಂಗಳುಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅಭಿಮಾನಿಗಳ ನಡುವೆ ಅಹಿತಕರ ವಾತಾವರಣ ಸೃಷ್ಟಿಯಾಗಿದೆ ಇದು ಕೇವಲ ಅಭಿಮಾನಿಗಳ ನಡುವೆ ಮಾತ್ರವಲ್ಲದೆ ನಟರ ನಡುವೆ ಕೂಡ ವೈಶಮ್ಯ ಬೆಳೆಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸಪೇಟೆಯ ಘಟನೆ ಹೊರಬಂದ ಮೇಲಂತೂ ಈ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿದೆ.

ಅದರಲ್ಲೂ ದರ್ಶನ್ ರವರ ಬಗ್ಗೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿರುವ ಸುಬ್ಬು(Subbu) ಎನ್ನುವಾತ ಮನೆಗೆ ನುಗ್ಗಿ ಹೊ’ ಡೆಯುವುದರ ಬಗ್ಗೆ ಮಾತನಾಡಿದ್ದ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದರ ವಿರುದ್ಧ ದರ್ಶನ್ ಅಭಿಮಾನಿಗಳು ವ್ಯಾಪಕವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಹೌದು, ಇದರ ಬೆನ್ನಲ್ಲೇ ದರ್ಶನ್(Darshan) ಅವರ ವಿರುದ್ಧವಾಗಿ ಮಾತನಾಡಿದ್ದ ಸುಬ್ಬು ಎನ್ನುವ ಅಪ್ಪು ಅಭಿಮಾನಿಯನ್ನು ದರ್ಶನ್ ಅಭಿಮಾನಿಗಳು ದರ್ಶನ್ ರವರ ಆರ್ ಆರ್ ನಗರದ ಮನೆಯ ಮುಂದೆ ನಿಲ್ಲಿಸಿ ನಿನಗೆ ಧಂ ಇದ್ದರೆ ಮನೆಗೆ ಹೋಗಿ ನುಗ್ಗಿ ಹೊ’ಡಿ ಎನ್ನುವುದಾಗಿ ಪಂಥಾಹ್ವಾನ ಮಾಡಿದ್ದಾರೆ. ಈ ವಿಡಿಯೋ ಕೂಡ ಎಲ್ಲ ಕಡೆ ವೈರಲ್ ಆಗಿದೆ.

ಇನ್ನು ಇದೇ ಸಂದರ್ಭದಲ್ಲಿ ಸುಬ್ಬು ಕೂಡ ತನ್ನ ತಪ್ಪನ್ನು ಅರಿತು ಬೇರೆಯವರ ಕುಮ್ಮಕ್ಕಿನ ಮೇಲೆ ನಾನು ಈ ರೀತಿ ನಡೆದುಕೊಂಡಿದ್ದೇನೆ ಎಂಬುದಾಗಿ ಎಲ್ಲರ ಎದುರು ದರ್ಶನ್ ರವರಿಗೆ ಕ್ಷಮೆಯನ್ನು ಕೇಳಿದ್ದಾನೆ. ಈ ಸಂದರ್ಭದಲ್ಲಿ ದರ್ಶನ್(Darshan) ರವರು ಮನೆಯಲ್ಲಿ ಇರಲಿಲ್ಲ ಎನ್ನುವುದನ್ನು ಕೂಡ ನಾವೆಲ್ಲರೂ ನೆನಪಿಟ್ಟುಕೊಳ್ಳಬೇಕು. ಇನ್ನು ಮುಂದಾದರೂ ಅಭಿಮಾನಿಗಳ ನಡುವಿನ ಈ ಹಗ್ಗ ಜಗ್ಗಾಟ ಕಡಿಮೆಯಾಗಲಿ ಎಂಬುದಾಗಿ ಆಶಿಸೋಣ.

Leave a Comment

error: Content is protected !!