Puneeth Rajkumar: ಅಪ್ಪು ಅವರು ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತಿದ್ದದ್ದು ಅದೊಂದು ವಸ್ತು! ಆ ವಸ್ತು ಇದ್ದಲ್ಲಿ ಅಪ್ಪು ಹಾಜರು ಇರ್ತಿದ್ರು!

Appu Birthday ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಕನ್ನಡ ನಾಡು ಕಂಡಂತಹ ಅತ್ಯಂತ ಶ್ರೇಷ್ಠ ನಟರಲ್ಲಿ ಮಾತ್ರವಲ್ಲದೆ ಸಮಾಜೋದ್ಧಾರಕರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದಕ್ಕಾಗಿ ಅವರ ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಗಳ ಸಾಧನೆಯನ್ನು ಗುರುತಿಸಿ ಕರ್ನಾಟಕದ ಅತ್ಯುನ್ನತ ಪ್ರಶಸ್ತಿ ಆಗಿರುವ ಕರ್ನಾಟಕ ರತ್ನ ಅವಾರ್ಡ್(Karnataka Ratna) ಅನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ಯಾವೊಂದು ಕಾರಣಕ್ಕೂ ಕೂಡ ಯಾರ ಜೊತೆಗೂ ಜಗಳ ಮಾಡಿಕೊಂಡವರಲ್ಲ ಅಥವಾ ಯಾವುದೇ ವಿವಾ’ ದಾತ್ಮಕ ವಿಚಾರಗಳಲ್ಲಿ ಕಾಣಿಸಿಕೊಂಡವರಲ್ಲ. ಅದಕ್ಕಾಗಿಯೇ ಅವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಎಂಬುದಾಗಿ ಕರೆಯಲಾಗುತ್ತಿತ್ತು. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರ ಕುರಿತಂತೆ ಹಲವಾರು ವಿಚಾರಗಳು ನಮ್ಮ ಜೀವನದಲ್ಲಿ ಕೂಡ ಹಾಸು ಹೊಕ್ಕಾಗಿತ್ತು ಎನ್ನುವಷ್ಟರ ಮಟ್ಟಿಗೆ ಅವರನ್ನು ನಾವು ಹಚ್ಚಿಕೊಂಡಿದ್ದೆವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅದರಲ್ಲೂ ಅವರ ಇಷ್ಟದ ವಸ್ತುಗಳ ಕುರಿತಂತೆ ನಾವು ಹೆಚ್ಚಾಗಿ ತಿಳಿದುಕೊಳ್ಳಲು ಪ್ರಯತ್ನವನ್ನು ಪಟ್ಟಿದ್ದೇವೆ. ಅದರಲ್ಲೂ ವಿಶೇಷವಾಗಿ ಊಟದ ವಿಚಾರಕ್ಕೆ ಬಂದರೆ ಬೇರೆಯವರಿಗಿಂತ ಅಪ್ಪು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದರು. ನಾನ್ ವೆಜ್(Nonveg) ಪ್ರಿಯ ಆಗಿದ್ದ ಅಪ್ಪು ಅವರಿಗೆ ಮಟನ್ ಎಂದರೆ ಎಲ್ಲಿಲ್ಲದ ಪಂಚಪ್ರಾಣ.

ದಿನಕ್ಕೆ ಒಮ್ಮೆಯಾದರೂ ಮಟನ್ ತಿನ್ನಲೇಬೇಕು ಎನ್ನುವಷ್ಟರ ಮಟ್ಟಿಗೆ ಮಟನ್ ಖಾದ್ಯಗಳ ಕುರಿತಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ವಿಪರೀತವಾದ ಆಸಕ್ತಿಯನ್ನು ಹೊಂದಿದ್ದರು. ಇದನ್ನು ಹಲವಾರು ಸಂದರ್ಶನಗಳಲ್ಲಿ ಅವರೇ ಹೇಳಿಕೊಂಡಿದ್ದರು ಕೂಡ. ಇದಕ್ಕಾಗಿ ಅಪ್ಪು ಅವರ ಅಭಿಮಾನಿಗಳಲ್ಲಿ ಹಲವಾರು ಜನ ಹೋಟೆಲ್ ಮಾಲೀಕರು ಅಪ್ಪು ಅವರಿಗೆ ಇಷ್ಟ ಆಗಿರುವಂತಹ ಖಾದ್ಯಗಳನ್ನು ತಮ್ಮ ಹೋಟೆಲ್ ನಲ್ಲಿ ಕೂಡ ಮೆನುವಿನಲ್ಲಿ ಅವರ ಸ್ಮರಣೆಗಾಗಿ ಹಾಕಿಕೊಂಡಿದ್ದಾರೆ.

Leave a Comment

error: Content is protected !!