Archana: ಆ ನಟ ಹುಡುಗಿಯರನ್ನು ಟ್ರ್ಯಾಪ್ ಮಾಡುತ್ತಾರೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಖ್ಯಾತ ನಟಿ!

Archana Actress ತೆಲುಗು ಚಿತ್ರರಂಗದಲ್ಲಿ ಹಲವಾರು ವರ್ಷಗಳ ಹಿಂದೆ ಹೋದರೆ ನಟಿ ಅರ್ಚನ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದಂತಹ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು ನಂತರ ಮದುವೆಯಾದ ಮೇಲೆ ಚಿತ್ರರಂಗದಿಂದ ವಿರಾಮವನ್ನು ಪಡೆದುಕೊಂಡಿದ್ದಾರೆ. ಆದರೆ ಈಗ ಮತ್ತೆ ಚಿತ್ರರಂಗದಲ್ಲಿ ಕಂಬ್ಯಾಕ್ ಮಾಡಲು ಸಿದ್ಧರಾಗಿರುವ ನಟಿ ಅರ್ಚನಾ(Archana Actress) ಇತ್ತೀಚಿಗಷ್ಟೇ ಭಾಗವಹಿಸಿರುವ ಸಂದರ್ಶನ ಒಂದರಲ್ಲಿ ಸೆನ್ಸೇಷನಲ್ ಉತ್ತರವನ್ನು ನೀಡುವ ಮೂಲಕ ದೊಡ್ಡ ಮಟ್ಟದ ಸುದ್ದಿಯಾಗಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಅರ್ಚನಾ ರವರು ಜನಪ್ರಿಯತೆಯನ್ನು ಪಡೆದಿದ್ದಾರೆ ಆದರೆ ಕಮರ್ಷಿಯಲ್ ಯಶಸ್ಸನ್ನು ಅವರು ಹೊಂದಿಲ್ಲ. ಈಗ ಮರು ಪಾದರ್ಪಣೆ ಮಾಡಲು ತಯಾರಿ ನಡೆಸುತ್ತಿರುವ ಅರ್ಚನಾ ಅವರು ರಾಧಾ ಗೋಪಾಲನ್ ಎನ್ನುವ ಸಿನಿಮಾದಲ್ಲಿ ಚಾನ್ಸ್ ಮಿಸ್ ಆಯ್ತು ಇಲ್ಲದಿದ್ದಲ್ಲಿ ನನ್ನ ಕರಿಯರ್ರೇ ಬೇರೆಯಾಗಿರುತ್ತಿತ್ತು. ಬೇರೆಯವರಲ್ಲ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದವರು ಯಶಸ್ಸನ್ನು ಪಡೆದಿದ್ದಾರೆ ನಾನು ಅವರಂತಲ್ಲ ಎಂಬುದಾಗಿ ಹೇಳಿದ್ದಾರೆ.

archana

ಯಮದೊಂಗ ಸಿನಿಮಾದಲ್ಲಿ ಮಾಡಿರುವಂತಹ ಪಾತ್ರ ನನಗೆ ಪ್ಲಸ್ ಆಗಿತ್ತು. ಇಷ್ಟು ಮಾತ್ರವಲ್ಲದೆ ರಂಗಸ್ಥಲಂ(Rangasthalam) ಚಿತ್ರದಲ್ಲಿ ಅನುಸೂಯ ಮಾಡಿರುವಂತಹ ರಂಗಮ್ಮ ಪಾತ್ರ ನನಗೆ ತುಂಬಾನೇ ಇಷ್ಟ ಆಯ್ತು ಎಂಬುದಾಗಿ ಅರ್ಚನಾ ಹೇಳಿದ್ದಾರೆ. ಚಿತ್ರರಂಗದಲ್ಲಿ ಇರುವಂತಹ ಒಬ್ಬ ನಟ ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆಯನ್ನು ನೀಡಿದ್ದಾರೆ. ಸಿನಿಮಾ ರಂಗದಲ್ಲಿ ಯಾವುದೇ ಸಪೋರ್ಟ್ ಇಲ್ಲದ ನಟಿಯರ ಮೇಲೆ ಟ್ರ್ಯಾಪ್ ಮಾಡಲು ಇಂತಹ ನಟರು ಕಾಯುತ್ತಿರುತ್ತಾರೆ ಆದರೆ ನಾವು ಅಂಥವರಲ್ಲ ನಮಗೆ ನಮ್ಮ ಪೋಷಕರ ಸಪೋರ್ಟ್ ಇದೆ ಎಂಬುದಾಗಿ ಅರ್ಚನ ಹೇಳಿದ್ದಾರೆ.

ಅರ್ಚನಾ(Archana) ಅವರ ಈ ಹೇಳಿಕೆಯ ಮೇರೆಗೆ ತೆಲುಗು ಚಿತ್ರರಂಗದಲ್ಲಿ ಪುರುಷರ ಪಾರು ಪದ್ಯದ ಹೋರಿತಂತೆ ಹಲವಾರು ಪರ ವಿರೋಧ ಚರ್ಚೆಗಳು ನಡೆಯಲು ಪ್ರಾರಂಭವಾಗಿವೆ. ಇನ್ನು ಕೆಲವು ಕಡೆಗಳಲ್ಲಿ ಆ ನಟ ಯಾರಿರಬಹುದು ಎನ್ನುವ ಚರ್ಚೆಗಳು ಕೂಡ ಪ್ರಾರಂಭವಾಗಿದೆ. ಅರ್ಚನಾ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!