Puneeth Rajkumar: ಅಪ್ಪು ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡುವೆ ವಯಸ್ಸಿನ ಅಂತರವೆಷ್ಟು? ಇಲ್ಲಿದೆ ನೋಡಿ.

Puneeth Rajkumar ಅಪ್ಪು ಅವರ ಸಿನಿಮಾ ಜರ್ನಿಯ ಬಗ್ಗೆ ಪ್ರತಿಯೊಬ್ಬರೂ ಕೂಡ ಮಾತನಾಡುತ್ತಾರೆ ಹಾಗೂ ಹೆಚ್ಚಿನವರಿಗೆ ಇದರ ಕುರಿತಂತೆ ತಿಳಿದಿವೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ದಾಂಪತ್ಯ ಜೀವನದ ಲವ್ ಸ್ಟೋರಿಯ ಬಗ್ಗೆ. ಹೌದು ಮಿತ್ರರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಪ್ರೇಮ್ ಕಹಾನಿಯ ಬಗ್ಗೆ ನಾವು ಮಾತನಾಡಲು ಹೊರಟಿರುವುದು.

ಇಬ್ಬರೂ ಕೂಡ 1996ರ ಸಿನಿಮಾ ಚಿತ್ರೀಕರಣ ಒಂದರಲ್ಲಿ ಸಾಮಾನ್ಯ ಸ್ನೇಹಿತರ ಮೂಲಕ ಭೇಟಿಯಾಗುತ್ತಾರೆ. ನಂತರ ಅಪ್ಪು ಅವರಿಗೆ ಅಶ್ವಿನಿ ಅವರ ಮೇಲೆ ಪ್ರೀತಿ ಮೂಡುತ್ತದೆ. ಹೀಗಿದ್ದರೂ ಕೂಡ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲು ಪುನೀತ್ ರಾಜಕುಮಾರ್ ಅವರು ಎಂಟು ತಿಂಗಳು ಕಾಯುತ್ತಾರೆ. ನಂತರ ಅಶ್ವಿನಿ ಅವರಿಗೆ ಧೈರ್ಯ ತೆಗೆದುಕೊಂಡು ಪುನೀತ್ ರಾಜಕುಮಾರ್ ಅವರು ಪ್ರಪೋಸ್ ಮಾಡಿ ಅಶ್ವಿನಿ ಅವರು ಕೂಡ ಒಪ್ಪಿಕೊಳ್ಳುತ್ತಾರೆ. ನಂತರ ಇವರಿಬ್ಬರ ಮದುವೆ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ 1999 ರಲ್ಲಿ ನಡೆಯುತ್ತದೆ.

Appu With Wife

ಕನ್ನಡ ಚಿತ್ರರಂಗದ ಸ್ಟಾರ್ ದಂಪತಿಗಳಲ್ಲಿ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಇಬ್ಬರೂ ಕೂಡ ಆದರ್ಶ ದಂಪತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಧೃತಿ ಹಾಗೂ ಒಂದಿತ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಲವಾರು ಜನರಿಗೆ ಗೊಂದಲವಿದೆ ಅದರ ಬಗ್ಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ವಯಸ್ಸನ್ನು ಗಮನಿಸುವುದಾದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್(Puneeth Rajkumar) ಅವರಿಗಿಂತ ವಯಸ್ಸಿನಲ್ಲಿ ಐದು ವರ್ಷ ದೊಡ್ಡವರು ಆದರೆ ಇವರಿಬ್ಬರ ಪ್ರೀತಿಯ ಮುಂದೆ ಅವರ ವಯಸ್ಸಿನ ಅಂತರ ನಗಣ್ಯ ಎಂದು ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅವರ ಹಿಂದಿನ ದೊಡ್ಡ ಶಕ್ತಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿಂತುಕೊಂಡಿದ್ದರು‌. ಈಗ ಅಪ್ಪು(Appu) ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅಶ್ವಿನಿ ಅವರ ಬೆಂಬಲದ ಶಕ್ತಿಯಾಗಿ ಅವರು ಅಭಿಮಾನಿಗಳಲ್ಲಿ ನೆಲೆಸಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

Leave a Comment

error: Content is protected !!