Vishnuvardhan: ಭಾರತಿ ಹಾಗೂ ವಿಷ್ಣುವರ್ಧನ್ ನಡುವಿನ ವಯಸ್ಸಿನ ಅಂತರವೆಷ್ಟು? ನೀವು ಕೂಡ ಆಶ್ಚರ್ಯ ಪಡೋವಂತ ರಹಸ್ಯ ಇದು!

Bharathi Vishnuvardhan ಕನ್ನಡ ಚಿತ್ರರಂಗದ ಇಬ್ಬರು ಆಲ್ ಟೈಮ್ ಫೇವರೆಟ್ ಜೋಡಿಗಳ ಕುರಿತಂತೆ ಮಾತನಾಡುವುದಾದರೆ ಖಂಡಿತವಾಗಿ ಆ ಲಿಸ್ಟಿನಲ್ಲಿ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ಹಾಗೂ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಪ್ರತಿಭಾನ್ವಿತ ನಟಿ ಆಗಿರುವಂತಹ ಭಾರತಿ ವಿಷ್ಣುವರ್ಧನ್(Bharathi Vishnuvardhan) ರವರು ಖಂಡಿತವಾಗಿ ಕಾಣಿಸಿಕೊಳ್ಳುತ್ತಾರೆ. ಇಬ್ಬರ ಜೋಡಿ ಹಾಗೂ ಪ್ರೀತಿ ಎನ್ನುವುದು ಇಂದಿಗೂ ಕೂಡ ಹಲವರಿಗೆ ಮಾದರಿಯೆನ್ನಬಹುದಾಗಿದೆ.

ವಿಷ್ಣುವರ್ಧನ್(Vishnuvardhan) ಅವರಿಗಿಂತಲೂ ಮುಂಚೆ ಕನ್ನಡ ಚಿತ್ರರಂಗದಲ್ಲಿ ಭಾರತಿ ವಿಷ್ಣುವರ್ಧನ್ ಅವರು ನಾಯಕ ನಟಿಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿದ್ದರು. ಅವರ ನಂತರವಷ್ಟೆ ಚಿತ್ರರಂಗಕ್ಕೆ ಆಂಗ್ರಿ ಯಂಗ್ ಮ್ಯಾನ್ ಆಗಿ ವಿಷ್ಣುವರ್ಧನ್ ರವರು ಕಾಲಿಡುತ್ತಾರೆ.

ನಂತರ ಇವರಿಬ್ಬರೂ ಪ್ರೀತಿಸಿ 1975ರಲ್ಲಿ ಮದುವೆಯಾಗುತ್ತಾರೆ ಮದುವೆಯಾದ ನಂತರವೂ ಕೂಡ ಸಿನಿಮಾಗಳಲ್ಲಿ ನಟಿಸುವುದನ್ನು ಮಾತ್ರ ಇಬ್ಬರೂ ಬಿಡುವುದಿಲ್ಲ. ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕುರಿತಂತೆ ಸಾಕಷ್ಟು ಗೊಂದಲಗಳು ಇದೆ. ವಿಷ್ಣುವರ್ಧನ್ ಗಿಂತ ಭಾರತಿ ವಿಷ್ಣುವರ್ಧನ್(Bharathi Vishnuvardhan) ರವರು ವಯಸ್ಸಿನಲ್ಲಿ ದೊಡ್ಡವರು ಎಂಬುದಾಗಿ ಹೇಳುತ್ತಾರೆ ಆದರೆ ಆದರೆ ನಿಜವಾದ ಚಿತ್ರಣ ಇಲ್ಲಿದೆ ನೋಡಿ.

ಹೌದು ಮಿತ್ರರೇ, ಇವರಿಬ್ಬರ ವಯಸ್ಸಿನ ಅಂತರ ಹೆಚ್ಚೇನು ಇಲ್ಲ ಭಾರತಿ ವಿಷ್ಣುವರ್ಧನ್(Bharathi Vishnuvardhan) ರವರು ವಿಷ್ಣುವರ್ಧನ್ ಅವರಿಗಿಂತ ವಯಸ್ಸಿನಲ್ಲಿ ಕೇವಲ ಒಂದು ತಿಂಗಳು ಮಾತ್ರ ದೊಡ್ಡವರಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾದರಿ ಜೋಡಿಯಾಗಿ ಇಡೀ ಚಿತ್ರರಂಗವನ್ನು ಅವರು ಮೆಚ್ಚುವಂತೆ ಬದುಕಿದ್ದಾರೆ ಎಂದರೆ ತಪ್ಪಾಗಲಾರದು. ಕನ್ನಡ ಚಿತ್ರರಂಗದ ಈ ಜನುಮದ ಜೋಡಿ ಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!