Chandan Gowda: ಯೂಟ್ಯೂಬರ್ ಚಂದನ್ ಗೌಡಗೆ ಮಾಧ್ಯಮದವರು ಯಾಕೆ ಸಪೋರ್ಟ್ ಮಾಡ್ಲಿಲ್ಲ ಗೊತ್ತಾ. ಆ ನಟನೇ ಕಾರಣವಂತೆ.

Chandan Gowda ಈ ಬಾರಿ ಕರ್ನಾಟಕ ರಾಜ್ಯದಲ್ಲಿ ನಡೆದಿರುವಂತಹ ವಿಧಾನಸಭಾ ಚುನಾವಣೆ ಸಾಕಷ್ಟು ಕಾರಣಗಳಿಗಾಗಿ ವಿಶೇಷವಾಗಿತ್ತು. ಅದರಲ್ಲೂ ಈ ಬಾರಿ ಕೆಲವೊಂದು ಅಭ್ಯರ್ಥಿಗಳು ಕೂಡ ವಿಶೇಷವಾಗಿ ಸದ್ದು ಮಾಡಿದ್ದರು. ಅವರಲ್ಲಿ ನಾವು ಮಾತನಾಡಲು ಹೊರಟಿರುವುದು ಯೂಟ್ಯೂಬರ್ ಚಂದನ್ ಗೌಡ(Chandan Gowda) ಅವರ ಬಗ್ಗೆ. ಬನ್ನಿ ಅವರ ಚುನಾವಣೆ ಜರ್ನಿಯ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಯೂಟ್ಯೂಬರ್ ಆಗಿದ್ದ ಚಂದನ್ ಗೌಡ ಅವರು ಈ ಬಾರಿ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದರು. ಕ್ಷೇತ್ರದ ಜನರ ಕಷ್ಟಗಳನ್ನು ಅರಿತುಕೊಂಡು ಅದಕ್ಕೆ ಪರಿಹಾರ ನೀಡುವಂತಹ ಯೋಜನೆಗಳನ್ನು ಪಟ್ಟಿ ಮಾಡಿಕೊಂಡು ಗೆದ್ದರೆ ಅವುಗಳೆಲ್ಲವನ್ನು ಕೂಡ ನಿವಾರಿಸುವಂತಹ ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು.

ಯಾವುದು ದೊಡ್ಡ ಮಟ್ಟದ ಬೆಂಬಲ ಇಲ್ಲದಿದ್ದರೂ ಮೂರು ಪಕ್ಷದ ಮೂರು ಬಲವಾದ ಅಭ್ಯರ್ಥಿಗಳು ಇದ್ದರೂ ಕೂಡ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಚಂದನ್ ಗೌಡ ಅವರು ಭರ್ಜರಿ 8400ಕ್ಕೂ ಅಧಿಕ ಮತಗಳನ್ನು ಪಡೆದುಕೊಳ್ಳುತ್ತಾರೆ. ಇಷ್ಟೊಂದು ವಿಭಿನ್ನವಾಗಿ ಹಾಗೂ ಜನರ ಒಳ್ಳೆಯದಕ್ಕಾಗಿ ಚುನಾವಣೆ ಸ್ಪರ್ಧಿಸಲು ಹೊರಟಿದ್ದ ಚಂದನ್ ಗೌಡ(Chandan Gowda) ಅವರ ಸುದ್ದಿಯನ್ನು ಯಾವುದೇ ಮಾಧ್ಯಮಗಳು ಕೂಡ ಪ್ರಸಾರ ಮಾಡಿರಲಿಲ್ಲ.

ಇದಕ್ಕೆ ಕಾರಣ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಅಭಿಮಾನಿಯಾಗಿದ್ದು ಎಂಬುದಾಗಿ ಕೂಡ ಆಮೇಲೆ ತಿಳಿದು ಬರುತ್ತದೆ. ಹೀಗಿದ್ದರೂ ಕೂಡ ಚಂದನ್ ಗೌಡ ಕೆ ಆರ್ ಪೇಟೆ ರವರು ಮೊದಲ ಚುನಾವಣೆಯಲ್ಲಿ ಎಂಟು ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಅಲ್ಲಿನ ಜನರ ವಿಶ್ವಾಸ ಹಾಗೂ ನಂಬಿಕೆಯನ್ನು ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಪಡೆದುಕೊಂಡಿದ್ದಾರೆ ಎಂದರೆ ಪ್ರತಿಯೊಬ್ಬರೂ ಕೂಡ ಮೆಚ್ಚುಗೆಯನ್ನು ಸಲ್ಲಿಸಲೇಬೇಕು.

Leave a Comment

error: Content is protected !!