Darshan Thoogudeepa: ದರ್ಶನ್ ತೂಗುದೀಪ್ ತಮ್ಮ ಮೊದಲ ಸಿನಿಮಾ ಮೆಜೆಸ್ಟಿಕ್ ಗಾಗಿ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ? ಇದು ಕೇವಲ ಡಿ ಬಾಸ್ ಅವರಿಂದ ಮಾತ್ರ ಸಾಧ್ಯ.

Darshan Thoogudeepa ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದ ಆಗಿದ್ದ ತೂಗುದೀಪ ಶ್ರೀನಿವಾಸ(Thoogudeepa Srinivas) ಅವರ ಮಗನಾಗಿದ್ದರೂ ಕೂಡ ದರ್ಶನ್ ಅವರಿಗೆ ಕನ್ನಡ ಚಿತ್ರರಂಗ ಕರೆದು ಅವಕಾಶ ನೀಡಲಿಲ್ಲ. ಮೊದಲಿಗೆ ಅವಮಾನಗಳನ್ನು ಸಹಿಸಿಕೊಂಡು ನಂತರ ಕನ್ನಡ ಚಿತ್ರರಂಗದಲ್ಲಿ ದರ್ಶನ್(Darshan) ಅವರು ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾರೆ.

ತಂದೆಯ ಹೆಸರನ್ನು ಚಿತ್ರರಂಗದಲ್ಲಿ ಇನ್ನಷ್ಟು ಹೆಚ್ಚುವಂತೆ ಮಾಡುವಂತಹ ಜವಾಬ್ದಾರಿ ದರ್ಶನ್ ಅವರ ಹೆಗಲ ಮೇಲಿತ್ತು. ಇದಾಗಿ ನಾಯಕನಾಗುವ ಮೊದಲು ಹಲವಾರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಕೂಡ ಸಪೋರ್ಟಿಂಗ್ ಪಾತ್ರಗಳನ್ನು ಮಾಡುವಂತಹ ಕೆಲಸವನ್ನು ದರ್ಶನ್(Darshan) ಅವರು ಮಾಡುತ್ತಾರೆ. ಇದಾದ ನಂತರ ಅವರು ಮೆಜೆಸ್ಟಿಕ್(Majestic) ಸಿನಿಮಾದ ಮೂಲಕ ನಾಯಕನಾಗಿ ಪರಿಚಿತರಾಗುತ್ತಾರೆ. ಇದಾದ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

Darshan Thoogudeepa ( Majestic)

ಹೌದು ಗೆಳೆಯರೇ ಮೆಜೆಸ್ಟಿಕ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಇದಾದ ನಂತರ ಕರಿಯ ಹೀಗೆ ಹಲವಾರು ಸಿನಿಮಾಗಳಲ್ಲಿ ನಾಯಕ ನಟನಾಗಿ ಹಂತ ಹಂತವಾಗಿ ಬೆಳೆದು ಇಂದು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನನಾಗಿ(Box Office Sultana) ದರ್ಶನ್ ಅವರು ಬೆಳೆದು ನಿಂತಿದ್ದಾರೆ. ಆದರೆ ತಮ್ಮ ಮೊದಲ ನಾಯಕನಾಗಿ ನಟಿಸಿರುವಂತಹ ಸಿನಿಮಾಗೆ ದರ್ಶನ್ ಅವರು ಪಡೆದಿರುವಂತಹ ಸಂಭಾವನೆ ಬಗ್ಗೆ ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಾಯಕ ನಟ ಎಂದ ಮೇಲೆ ಸಾವಿರಾರು ಲಕ್ಷಾಂತರ ರೂಪಾಯಿ ಸಂಭಾವನೆಯನ್ನು ಅಂದಿನ ಕಾಲದಲ್ಲೇ ಪಡೆಯುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು ಆದರೆ ಮೆಜೆಸ್ಟಿಕ್ ಸಿನಿಮಾಗಾಗಿ ದರ್ಶನ್(Darshan) ಅವರು ಪಡೆದ ಸಂಭಾವನೆ ಬಗ್ಗೆ ಕೇಳಿದರೆ ನೀವು ಕೂಡ ನಂಬಲ್ಲ. ಹೌದು ಗೆಳೆಯರೇ ಡಿ ಬಾಸ್ ಮೆಜೆಸ್ಟಿಕ್ ಸಿನಿಮಾಗಾಗಿ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆಯದೆ ಸಿನಿಮಾದಲ್ಲಿ ನಟಿಸಿದ್ದರು. ಇಂದಿಗೆ ಅದನ್ನು ಗಮನಿಸಿದರೆ ಡಿ ಬಾಸ್(Dboss) ನಿಜಕ್ಕೂ ಗ್ರೇಟ್ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!