RCB: ಆರ್ಸಿಬಿ ಅವತಾರದಲ್ಲಿ ಕಾಣಿಸಿಕೊಂಡ ಡಿ ಬಾಸ್! ಬ್ಯಾಟ್ ಹಿಡಿದ ಕಾಟೇರ!

Darshan Thoogudeepa ಈಗಾಗಲೇ ಈ ಬಾರಿ ಐಪಿಎಲ್ ಸೀಸನ್ ಪ್ರಾರಂಭವಾಗಲಿದ್ದು ಕನ್ನಡಿಗರ ಎಲ್ಲರೂ ಕೂಡ ತಮ್ಮ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಕ್ಕೆ ಬೆಂಬಲವನ್ನು ನೀಡಲು ಸಿದ್ದರಾಗಿ ನಿಂತಿದ್ದಾರೆ. ಈ ಬಾರಿಯಾದರೂ ಕಪ್ ಗೆಲ್ಲಲೇ ಬೇಕು ಎನ್ನುವುದಾಗಿ ಅಭಿಮಾನಿಗಳ ಕೋರಿಕೆ ಮತ್ತೊಮ್ಮೆ ಪ್ರತಿದ್ವನಿಸುತ್ತಿದೆ.

ಇನ್ನು ಇದೇ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ 56ನೇ ಸಿನಿಮಾ ಆಗಿರುವ ಕಾಟೇರ(Kaatera ( ಚಿತ್ರ ತಂಡ ತನ್ನ ಚಿತ್ರೀಕರಣವನ್ನು ಕೂಡ ಮುಂದುವರಿಸುತ್ತಿದೆ. ಈ ಸಂದರ್ಭದಲ್ಲಿ ದರ್ಶನ್ ಆರ್‌ಸಿಬಿಗೆ ಬೆಂಬಲ ನೀಡುವಂತಹ ಫೋಟೋ ಅವರ ಅಭಿಮಾನಿ ಬಳಗದಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ.

ಸಾಮಾನ್ಯವಾಗಿ ಕನ್ನಡ ಭಾಷೆ ಕನ್ನಡ ನಾಡು ಎಂದರೆ ಪ್ರೀತಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಕೂಡ ಇಷ್ಟಪಡುವಂತಹ ತಂಡ ಆರ್ಸಿಬಿ(RCB) ಎಂದರು ಕೂಡ ತಪ್ಪಾಗಲಾರದು. ಇನ್ನು ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ಆರ್‌ಸಿಬಿ ಬಗ್ಗೆ ಶುಭ ಕೋರುವಂಥಹ ದರ್ಶನ್ ರವರ ಎಡಿಟೆಡ್ ಫೋಟೋಸ್ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

ಹೌದು ಮಿತ್ರರೇ, ಆರ್‌ಸಿಬಿ ಬ್ಯಾಗ್ರೌಂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕಾಟೇರ(Kaatera) ಅವತಾರದಲ್ಲಿ ಬ್ಯಾಟ್ ಹಿಡಿದು ನಿಂತಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ಈ ಮೂಲಕ ಈ ಬಾರಿಯಾದರೂ ಕಪ್ ಗೆಲ್ಲಲಿ ಎನ್ನುವುದಾಗಿ ಆರ್ಸಿಬಿ ತಂಡಕ್ಕೆ ದರ್ಶನ್ ಅಭಿಮಾನಿಗಳು ಶುಭ ಕೋರಿದ್ದಾರೆ.

Leave a Comment

error: Content is protected !!